ಬೆಂಗಳೂರು: ವಿಶ್ವಾಸಮತ ಸಾಭೀತಿಗಾಗಿ ಕುದುರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆವರೆಗೆ 25 ಕೋಟಿ ಇರುವ  ಶಾಸಕರ ರೇಟ್‌ ಇವತ್ತು 100 ರಿಂದ 150ಕೋಟಿ ರೂಪಾಯಿಗೆ  ಏರಿದೆ. ಜನಾರ್ಧನ್‌ ರೆಡ್ಡಿ , ಕಾಂಗ್ರೆಸ್‌ ಶಾಸಕ ಬಸವನಗೌಡ ಜೊತೆ ನಡೆಸಿರುವ ಡೀಲ್‌ನ ಆಡಿಯೋ ಇದೀಗ ಹೊರಬಿದ್ದಿದೆ. ಆಡಿಯೋವನ್ನ ಕಾಂಗ್ರೆಸ್ ನ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ. ಅದರಲ್ಲೇನಿದೆ ನೀವೆ ಓದಿಕೊಳ್ಳಿ….

ಜನಾರ್ಧನಾ ರೆಡ್ಡಿ: ಬಸವನಗೌಡಾ
ಶಾಸಕಬಸವನಗೌಡ: ಹಾಂ…ಹೌದ್ರಿ ಹೇಳಿ ಸರಾ…ನಮಸ್ಕಾರ..
ಜನಾರ್ಧನ ರೆಡ್ಡಿ: ಫ್ರೀಯಾಗಿ ಇದ್ದೀಯೇನಮ್ಮ…
ಶಾಸಕಬಸವನಗೌಡ: ಫ್ರೀ ಇದೀನಿ ಸರಾ ಹೇಳ್ರಿ ಸರಾ…
ಜನಾರ್ಧನಾ ರೆಡ್ಡಿ: ಏನಿಲ್ಲಮ್ಮ….ನಾನು ನಿಂದು ಏನಿದ್ರೂ ಕೂಡ, ಹಳೇವು ಏನ್‌ ನೆನೆಸಿಕೊಂಡ್ರೂ ಕೂಡ ಏನೇನ್ ನಡೆದಿತ್ತೋ ಆ ಕೆಟ್ಟಘಳಿಗೆ ಏನೇ ಇದ್ದರೂ ಮರೆತುಬಿಡು. ನಾ ನಿನಗೆ ಅರ್ಧ ರಾತ್ರಿಯಲ್ಲಿ ಹೇಳ್ತಿದ್ದೀನಿ, ನಾನು ನೋಡ್ಕೊತಿನಿ. ನನ್ ಟೈಮು ಈಗ ಚನ್ನಾಗಿ ಶುರುವಾಗಿದೆ. ಮತ್ತು ನಿಮ್ ಹತ್ರ ನೇರವಾಗಿ ದೊಡ್ಡವರು ರಾಷ್ಟ್ರೀಯ ಅಧ್ಯಕ್ಷರು ಕೂತ್ಕೊಂಡು ಮಾತಾಡ್ತಾರೆ. ನಿಮಗೆ ಏನ್ ಪದವಿ ಬೇಕು ಅನ್ನೋದನ್ನ ಒನ್ ಟು ಒನ್ ಮಾತಾಡಿ , ಆಮೇಲೇನೆ ನಾವು ಮುಂದೆಕ್ಕೆ ಹೆಜ್ಜೆ ಇಡೋಣ.
ಶಾಸಕಬಸವನಗೌಡ: ಇಲ್ಲಾ ಇಲ್ಲ ಸಾರ್, ನಾನ್ ಒಳ್ಳೆ ಲಾಸ್ಟ್ ಪರಿಸ್ಥಿತಿ ಕೆಳಗೆ ಬಂದಾಗ ಅವರು ಹಿಡಿದು ನಮಗೆ ಮಾಡಿದ್ದಾರೆ….
ಜನಾರ್ಧನಾ ರೆಡ್ಡಿ:ನಾನು ನಿಮಗೆ ಒಂದ್ ಪಾಯಿಂಟ್ ಹೇಳ್ತೇನಮ್ಮಾ…
ಶಾಸಕಬಸವನಗೌಡ:ಹೂಂ…..
ಜನಾರ್ಧನಾ ರೆಡ್ಡಿ:ನೋಡಮ್ಮ,,,ಬಿಎಸ್ ಆರ್ ಟೈಮಲ್ಲಿ , ,ತುಂಬಾ ಕೆಟ್ಟ ಘಳಿಗೆಯಲ್ಲಿ, ರಾಮುಲು ಪಾರ್ಟಿ ಮಾಡಿದ್ದು ,
ಶಾಸಕಬಸವನಗೌಡ:ಹೂಂ…
ಜನಾರ್ದನರೆಡ್ಡಿ:ಮತ್ತು ತುಂಬಾ ವಿರೋಧವಿರುವಾಗಿರುವ ಟೈಮಲ್ಲಿ ಪಾರ್ಟಿ ಮಾಡಿದ್ದು
ಶಾಸಕಬಸವನಗೌಡ:ಹೂಂ…
ಜನಾರ್ದನರೆಡ್ಡಿ:ನೀವೆಲ್ಲಾ ನಂಬ್ಕೊಂಡು ಆಸೆಗಳನ್ನ ಕಳಕೊಂಡಿದ್ದೀರಾ, ಅನ್ನೋದರಲ್ಲಿ ಎರಡನೇ ಮಾತೇ ಇಲ್ಲ.
ಶಾಸಕಬಸವನಗೌಡ:ಹೂಂ…
ಜನಾರ್ದನರೆಡ್ಡಿ:ನಾನ್ ಹೇಳ್ತಾ ಇದ್ದೀನಿ..ನೀನು ಅದಕ್ಕಿಂತಾನೂ ನೂರರಷ್ಟು ನೀನು ಬೆಳಿವಂತೆ…
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಈಗ ಅವನು ಶಿವನಗೌಡ ನಾಯಕ್ ಅವತ್ತುಏನ್ ನನ್ನ ಮಾತು ಕೇಳ್ದಾ ಬಂದು ಮಂತ್ರಿಯಾದ, ಈಗ ಅವನು ಉದ್ದಾರ ಆಗಿದ್ದು.
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಇವತ್ತು ನಿಮಗೆ ತನ್ನಷ್ಟಕ್ಕೆ ತಾನು ಸಾಯೋತನಕ ಎಂಎಲ್ ಎ ಆಗಿ ದುಡುಕೊಂಡು ಈಗ ಶಕ್ತಿವಂತನಾಗಿದ್ದಾನೋ ಇಲ್ಲೋ…
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಅದು ನನ್ನಿಂದನೇ ಆಗಿದ್ದು…
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ರಾಜೂಗೌಡನೂ ನನ್ನಿಂದನೇ ಆಗಿದ್ದು,
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ನಿನ್ನ ದುರಾದೃಷ್ಟ ನಮ್ಮ ಬ್ಯಾಡ್ ಟೈಮ್ ನಲ್ಲಿ ನಿಮ್ಮದು ಮ್ಯಾಚ್ ಆಗ್ಲಿಲ್ಲ. ನನಗೆ ನಿನಗೆ
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಇವತ್ತು ಶಿವನಗೌಡ ನಾಯಕ್ ಗೆದ್ದು ಪ್ರಯೋಜನ ಇಲ್ಲ.
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಇವತ್ತು ನೀನು ಮಂತ್ರಿಯಾಗ್ತೀಯ
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ಅರ್ಥ ಆಯ್ತಾಮ್ಮಾ..
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ನಾನು ಹೇಳೋದು ಇನ್ನೊಂದಲ್ಲಾ.
ಶಾಸಕ ಬಸವನಗೌಡ:ಹೂಂ
ಜನಾರ್ದನರೆಡ್ಡಿ:ನೀವು ನೇರವಾಗಿ ದೊಡ್ಡವರಹತ್ರಾನೇ ಕುಂತು ಒನ್ ಟು ಒನ್ ನಾನ್ ಕೂರಿಸಿ ನಾನೇ ನಿಮ್ಮನ್ನ ಮಾತನಾಡಿಸಿ ಇದು ಮಾಡ್ತೀನಿ ಮತ್ತು ಈ ದೇಶದಲ್ಲಿ ಇವತ್ತು ಅವರೇನ್ ಆಡಳಿತ ಮಾಡ್ತಾ ಇದ್ದಾರೆ ಆ ಮಾತು ನಿಲ್ಲಿಸಿಕೊಂಡಿರೋದ್ರಿಂದಾನೆ ಅದು ಆಗ್ತಾ ಇದೆ.ನಾನ್ ಹೇಳೋದು ನೀನ್ ಏನು ಆಸ್ತಿ ಗೀಸ್ತಿ ಮಾರ್ಕೊಂಡಿದ್ದೀಯಲ್ಲಾ ಅದಕ್ಕಿಂತ ನೂರರಷ್ಟು ಮಾಡ್ಕೊಂತೀಯಾ
ಶಾಸಕ ಬಸವನಗೌಡ:ಇಲ್ಲಾ ಸಾರ್ ,ಸಾರಿ ಸರ್ , ಯಾಕೆಂದ್ರೆ ಒಳ್ಳೆ ಲಾಸ್ಟ್ ಪರಿಸ್ಥಿತಿಯೊಳಗೆ ನನ್ನನ್ನ ಕರ್ಕೊಂಡು ಹೋಗಿ ನನಗೆ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೆ ಮಾಡಿದಾರ, ಇಂತಹ ಪರಿಸ್ಥಿತಿಯೊಳಗ ಅವರಿಗೆ ದ್ರೋಹ ಮಾಡೋದ್ರಲ್ಲಿ ಅರ್ಥ ಇಲ್ಲ. ನಿಮ್ಮ ಬಗ್ಗೆ ನನಗೆ ಗೌರವ ಇದೆ ಸಾರಿ ಸರ್ …….

Please follow and like us:
0
http://bp9news.com/wp-content/uploads/2018/05/reddy-1-1024x538.jpghttp://bp9news.com/wp-content/uploads/2018/05/reddy-1-150x150.jpgBP9 Bureauಪ್ರಮುಖ  ಬೆಂಗಳೂರು: ವಿಶ್ವಾಸಮತ ಸಾಭೀತಿಗಾಗಿ ಕುದುರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆವರೆಗೆ 25 ಕೋಟಿ ಇರುವ  ಶಾಸಕರ ರೇಟ್‌ ಇವತ್ತು 100 ರಿಂದ 150ಕೋಟಿ ರೂಪಾಯಿಗೆ  ಏರಿದೆ. ಜನಾರ್ಧನ್‌ ರೆಡ್ಡಿ , ಕಾಂಗ್ರೆಸ್‌ ಶಾಸಕ ಬಸವನಗೌಡ ಜೊತೆ ನಡೆಸಿರುವ ಡೀಲ್‌ನ ಆಡಿಯೋ ಇದೀಗ ಹೊರಬಿದ್ದಿದೆ. ಆಡಿಯೋವನ್ನ ಕಾಂಗ್ರೆಸ್ ನ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ. ಅದರಲ್ಲೇನಿದೆ ನೀವೆ ಓದಿಕೊಳ್ಳಿ.... ಜನಾರ್ಧನಾ ರೆಡ್ಡಿ: ಬಸವನಗೌಡಾ ಶಾಸಕಬಸವನಗೌಡ: ಹಾಂ...ಹೌದ್ರಿ ಹೇಳಿ ಸರಾ...ನಮಸ್ಕಾರ.. ಜನಾರ್ಧನ ರೆಡ್ಡಿ: ಫ್ರೀಯಾಗಿ ಇದ್ದೀಯೇನಮ್ಮ... ಶಾಸಕಬಸವನಗೌಡ: ಫ್ರೀ...Kannada News Portal