ಬೆಂಗಳೂರು: ಬಿಜೆಪಿ ಕಛೇರಿಯಲ್ಲಿ ಮಾತನಾಡಿದ  ಬಿಜೆಪಿ ಮುಖಂಡ ಈಶ್ವರಪ್ಪ ಕೈತಪ್ಪಿದ ರಾಣೇಬೆನ್ನೂರು ಶಾಸಕ ಶಂಕರ್‌ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ರು. ನಾವೇನು ಕರೆದಿರಲಿಲ್ಲ ಅವನೇ ಬಂದ.. ಈಗ ಅವನೇ ಹೋಗಿದ್ದಾನೆ… ಮತ್ತೆ ಶಂಕರ ಅನಿವಾರ್ಯವಾಗಿ ಬಂದೇ ಬರ್ತಾನೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದ್ರು.  ಶಂಕರ್‌ ಕೈ ತಪ್ಪಿದ ಬಗ್ಗೆ ಈಗಾಗಲೇ ಬಿಜೆಪಿ ಮುಖಂಡರಿಗೆ ಹೈಕಮಾಂಡ್‌ನಿಂದ ಕ್ಲಾಸ್ ಆಗಿದೆ. ಹೇಗೆ ಅವರನ್ನು ಬಿಟ್ಟುಕೊಟ್ಟಿದ್ದೀರಿ ಅಂತ  ಅಮಿತ್‌ ಷಾ ಪ್ರಶ್ನಿಸುತ್ತಿದ್ದಾರಂತೆ.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ ಜೆಡಿಎಸ್‌, ಶಾಸಕಾಂಗ ನಾಯಕನನ್ನಾಗಿ ಹೆಚ್‌ಡಿ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಕಾಂಗ್ರೆಸ್‌ನವರು ಇನ್ನುವರೆಗೆ ಯಾಕೆ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿಲ್ಲ. ಹಾಗಾದ್ರೆ ಇವರು ಕುಮಾರಸ್ವಾಮಿಯನ್ನೇ ಶಾಸಕಾಂಗ ನಾಯಕ ಅಂತ ಒಪ್ಪಿಕೊಳ್ತಾರಾ..? ಎಂದು ಪ್ರಶ್ನಿಸಿದ್ರು.

ಇನ್ನು ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ನಾವು ಬಹುಮತಗಳಿಸ್ತೀವಿ. ನಾವೇ ಸರ್ಕಾರ ಮಾಡ್ತೀವಿ ಅಂತ ಹೇಳಿದ್ರು. ಆದ್ರೆ  ಬಹುಮತ ಗಳಿಸಲು ಆಗದೇ ಈಗ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಅಷ್ಟೇಅಲ್ಲ ಹಿಂದೆ ಬಾಯಿಗೆಬಂದಂಗೆ ಒಬ್ಬರನ್ನೊಬ್ಬರು ಬೈದಾಡುತ್ತಿದ್ದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ  ಮೈತ್ರಿ ಮಾಡಲು ದೋಸ್ತಿ ಮಾಡಿದ್ದಾರೆ. ಆದ್ರೆ ಇದ್ಯಾವುದೂ ವರ್ಕೌಂಟ್‌ ಆಗಲ್ಲ ಎಂದಿದ್ದಾರೆ.

 

Please follow and like us:
0
http://bp9news.com/wp-content/uploads/2018/05/collage-2-22.jpghttp://bp9news.com/wp-content/uploads/2018/05/collage-2-22-150x150.jpgBP9 Bureauಪ್ರಮುಖಬೆಂಗಳೂರು: ಬಿಜೆಪಿ ಕಛೇರಿಯಲ್ಲಿ ಮಾತನಾಡಿದ  ಬಿಜೆಪಿ ಮುಖಂಡ ಈಶ್ವರಪ್ಪ ಕೈತಪ್ಪಿದ ರಾಣೇಬೆನ್ನೂರು ಶಾಸಕ ಶಂಕರ್‌ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ರು. ನಾವೇನು ಕರೆದಿರಲಿಲ್ಲ ಅವನೇ ಬಂದ.. ಈಗ ಅವನೇ ಹೋಗಿದ್ದಾನೆ… ಮತ್ತೆ ಶಂಕರ ಅನಿವಾರ್ಯವಾಗಿ ಬಂದೇ ಬರ್ತಾನೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದ್ರು.  ಶಂಕರ್‌ ಕೈ ತಪ್ಪಿದ ಬಗ್ಗೆ ಈಗಾಗಲೇ ಬಿಜೆಪಿ ಮುಖಂಡರಿಗೆ ಹೈಕಮಾಂಡ್‌ನಿಂದ ಕ್ಲಾಸ್ ಆಗಿದೆ. ಹೇಗೆ ಅವರನ್ನು ಬಿಟ್ಟುಕೊಟ್ಟಿದ್ದೀರಿ ಅಂತ  ಅಮಿತ್‌ ಷಾ ಪ್ರಶ್ನಿಸುತ್ತಿದ್ದಾರಂತೆ. ಈ ಸಂದರ್ಭದಲ್ಲಿ ಮಾತನಾಡಿದ...Kannada News Portal