ಬೆಂಗಳೂರು:ನನ್ನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನು ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದಿರುವ ಎಚ್ .ಡಿ.ಕುಮಾರಸ್ವಾಮಿ, ಜನ ಬಿಜೆಪಿಗೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಸ್ಪಷ್ಟಬಹುಮತ ಬಂದಿದ್ದೇ ಆದರೆ ಅವರು 113 ಬರಬೇಕಾಗಿತ್ತು.  ಅವರ ವಿರುದ್ಧ 118 ಮಂದಿ ಗೆದ್ದಿದ್ದಾರೆ. ಅಲ್ಲಿಗೆ ಜನ ಅವರನ್ನೂ ತಿರಸ್ಕರಿಸಿದ್ದಾರೆ ಎಂದು ಅರ್ಥ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಮೋದಿಯವರದ್ದು ಅಧಿಕಾರದ ದಾಹ, ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕು ಎಂಬುದು ಅವರ ಉದ್ದೇಶ, ಅವರ ಸ್ವಚ್ಛರಾಜಕೀಯ ಇಡೀ ದೇಶಕ್ಕೆ ಗೊತ್ತಾಗಿದೆ. ಗೋವಾದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ಅಧಿಕಾರ ಕೊಡಬೇಕು ಎಂದಿದ್ದರೆ, ಅದು ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಬೇಕಾಗಿತ್ತು. ಅದುಹೇಗೆ ಕಡಿಮೆ ಶಾಸಕರನ್ನ ಪಡೆದ ಬಿಜೆಪಿ ಅಧಿಕಾರ ಪಡೆದಿದೆ ಎಂದರು.

ಕಡಿಮೆ ಸ್ಥಾನ ಗೆದ್ದಿರುವ ಅವರಿಗೆ ಸರ್ಕಾರ ರಚಿಸಲು ಹೇಗೆ ಸಾಧ್ಯ, ಬಿಜೆಪಿಗೆ ರಾಜ್ಯಪಾಲರು ಒಂದು ಅವಕಾಶ ನೀಡಿದ್ದಾರೆ ಅಷ್ಟೆ , ಇದರಿಂದ ಏನೂ ಪ್ರಯೋಜನವಾಗದು, ಕೇವಲ ಅನುಕಂಪ ಗಿಟ್ಟಿಸಿಕೊಳ್ಳಬಹುದು ಅಷ್ಟೆ. ರಾಜ್ಯಪಾಲರು ತೀರ್ಮಾನ ಕೈಗೊಂಡರೆ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತರು ಹೇಳಿದರು. ಆದ್ರೆ, ಪ್ರತಿಭಟನೆ ನಡೆಸಿದರೆ, ಜನಾಂಗವನ್ನ ಇಬ್ಬಾಗ ಮಾಡಬಾರದು. ಅವರು ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿದರೆ ಅದಕ್ಕೆ ನಾವು ಪ್ರತಿಯಾಗಿ ಬೇರೆ ಮಾರ್ಗ ಹಿಡಿಯುತ್ತೇವೆ. ಪ್ರಾಮಾಣಿಕವಾಗಿ ಶಕ್ತಿ ಇದ್ದರೆ, ಅದನ್ನ ಪ್ರೂವ್ ಮಾಡಲಿ, ರಾಜಭವನವನ್ನ ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ರೆಸಾರ್ಟ್ ಗೆ ಶಾಸಕರನ್ನ ಕರೆದೊಯ್ಯುವ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಕುದುರೆ ವ್ಯಾಪಾರ ಶುರು ಮಾಡಿದೆ, ಅದನ್ನ ತಡೆಯಬೇಕೆೆಂದರೆ ರೆಸಾರ್ಟ್ ರಾಜಕಾರಣ ಅನಿವಾರ್ಯ

ಶಾಸಕರು ಎಲ್ಲಾದರೂ ಒಟ್ಟಾಗಿ ಇರಬೇಕಲ್ಲಾ, ಅದಕ್ಕಾಗಿ ರೆಸಾರ್ಟ್ ಗೆ ಹೋಗುತ್ತೇವೆ. ಕುದುರೆ ವ್ಯಾಪಾರ ಶುರುವಾಗಿದೆ ಅದನ್ನ ತಡೆಯಲು ರೆಸಾರ್ಟ್ ಗೆ ಹೋಗಬೇಕು ಎಂದರು.

 

Please follow and like us:
0
http://bp9news.com/wp-content/uploads/2018/05/h.d.kumarswamy.jpghttp://bp9news.com/wp-content/uploads/2018/05/h.d.kumarswamy-150x150.jpgBP9 Bureauಪ್ರಮುಖಬೆಂಗಳೂರು:ನನ್ನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನು ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದಿರುವ ಎಚ್ .ಡಿ.ಕುಮಾರಸ್ವಾಮಿ, ಜನ ಬಿಜೆಪಿಗೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಸ್ಪಷ್ಟಬಹುಮತ ಬಂದಿದ್ದೇ ಆದರೆ ಅವರು 113 ಬರಬೇಕಾಗಿತ್ತು.  ಅವರ ವಿರುದ್ಧ 118 ಮಂದಿ ಗೆದ್ದಿದ್ದಾರೆ. ಅಲ್ಲಿಗೆ ಜನ ಅವರನ್ನೂ ತಿರಸ್ಕರಿಸಿದ್ದಾರೆ ಎಂದು ಅರ್ಥ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಮೋದಿಯವರದ್ದು ಅಧಿಕಾರದ ದಾಹ, ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕು ಎಂಬುದು ಅವರ ಉದ್ದೇಶ, ಅವರ ಸ್ವಚ್ಛರಾಜಕೀಯ ಇಡೀ...Kannada News Portal