ಬೆಂಗಳೂರು:ನಮ್ಮ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ ಆಫರ್ ಇದೆ ಎಂಬ ಎಚ್ .ಡಿ.ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಬುಧವಾರ ಕುಮಾರಸ್ವಾಮಿ ಪತ್ರಿಕಾಗೋಷ್ಟಿ ನಡೆಸಿ, ಈಗಲೂ ನಮ್ಮ ಶಾಸಕರಿಗೆ ಬಿಜೆಪಿ 100 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಿದ್ದಾರೆ. ಅಲ್ಲದೆ, ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಇಷ್ಟೊಂದು ಹಣ ಬ್ಲಾಕ್ ಮನೀನಾ ಅಥವಾ ವೈಟ್ ಮನೀನ ಎಂದರು. ಇಲ್ಲದೆ, ಇಷ್ಟೊಂದು ಹಣವನ್ನ ಅವರು ಕೊಡುವುದಾಗಿ ಹೇಳುತ್ತಾರೆ. ಇಷ್ಟೊಂದು ಹಣವನ್ನ ಅವರು ಇಟ್ಟಿದ್ದಾರೆ ಅಂದ್ರೆ ಈ ಐಟಿ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ. ನಮ್ಮ ಶಾಸಕರನ್ನ ಐಟಿ ಅಧಿಕಾರಿಗಳನ್ನ ಬಿಟ್ಟು ಹೆದರಿಸುವ ಬಿಜೆಪಿ ಈಗ ಎಲ್ಲಿ ಹೋಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯೇ ನೀಡಿರುವ ಬಿಜೆಪಿಯ ಪ್ರಕಾಶ್ ಜಾವ್ಡೇಕರ್ ತಿರುಗೇಟು ನೀಡಿ, ನಮ್ಮದು ಕುದುರೆ ವ್ಯಾಪಾರ ಮಾಡುವ ಸಂಸ್ಕೃತಿಯಲ್ಲ. ಅದು ಜೆಡಿಎಸ್ ಗೆ ಸೇರಿದ್ದು ಎಂದು ಹೇಳಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/Kumaraswamy-Worried.jpeghttp://bp9news.com/wp-content/uploads/2018/05/Kumaraswamy-Worried-150x150.jpegBP9 Bureauಪ್ರಮುಖ  ಬೆಂಗಳೂರು:ನಮ್ಮ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ ಆಫರ್ ಇದೆ ಎಂಬ ಎಚ್ .ಡಿ.ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬುಧವಾರ ಕುಮಾರಸ್ವಾಮಿ ಪತ್ರಿಕಾಗೋಷ್ಟಿ ನಡೆಸಿ, ಈಗಲೂ ನಮ್ಮ ಶಾಸಕರಿಗೆ ಬಿಜೆಪಿ 100 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಿದ್ದಾರೆ. ಅಲ್ಲದೆ, ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಇಷ್ಟೊಂದು ಹಣ ಬ್ಲಾಕ್ ಮನೀನಾ ಅಥವಾ ವೈಟ್ ಮನೀನ ಎಂದರು. ಇಲ್ಲದೆ,...Kannada News Portal