ಶ್ರೀನಗರ : ಜಮ್ಮು-ಕಾಶ್ಮೀರದ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 14,000 ಬಂಕರ್​​ ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಪಾಕಿಸ್ತಾನ ನಡೆಸುವ ಅಪ್ರಚೋದಿತ ಗುಂಡಿನ ದಾಳಿಯಿಂದ ಗಡಿ ಗ್ರಾಮದಲ್ಲಿರುವ ಜನರ ಪ್ರಾಣ ರಕ್ಷಣೆಗಾಗಿ ಕೇಂದ್ರ ಈ ಕಾರ್ಯಕ್ಕೆ ಅಸ್ತು ಎಂದಿದೆ.

ಸುಮಾರು 400 ಕೋಟಿ ರೂ. ವೆಚ್ಚದಲ್ಲಿ 13,029 ವೈಯಕ್ತಿಕ ಬಂಕರ್​​ ಗಳ ಮತ್ತು 1,431 ಸಮುದಾಯ ಬಂಕರ್​​ ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಸಚಿವ ನಯೀಮ್ ಅಖ್ತರ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ, ‘ಅಂತಾರಾಷ್ಟ್ರೀಯ ಗಡಿ’ ಮತ್ತು ‘ಗಡಿ ನಿಯಂತ್ರಣ ರೇಖೆ’ಯ ಬಳಿ ಸುರಕ್ಷತಾ ಬಂಕರ್​​ ಗಳು ಹಾಗೂ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಲಾಯಿತು.

ಈಗಾಗಲೇ ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 7,298 ಬಂಕರ್​​ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ 7,162 ಅಂಡರ್ಗ್ರೌಂಡ್ ಬಂಕರ್​​ ಗಳನ್ನು ನಿರ್ಮಾಣ ಮಾಡಲಾಗುವುದು,” ಎಂದು ಅವರು ಮಾಹಿತಿ ನೀಡಿದ್ದಾರೆ.

160 ಚದರ ಅಡಿಗಳ ವೈಯಕ್ತಿಕ ಬಂಕರ್​​ ನಲ್ಲಿ 8 ಜನರು ಮತ್ತು 800 ಚದರ ಅಡಿಯ ಸಮುದಾಯ ಬಂಕರ್​​ ನಲ್ಲಿ 40 ಜನರು ಅಡಗಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/indian-soldier-pakistan-ceasefire-bunker-holds-odusaa_c086f684-2781-11e8-933f-cd1ae5bb99b3.jpghttp://bp9news.com/wp-content/uploads/2018/06/indian-soldier-pakistan-ceasefire-bunker-holds-odusaa_c086f684-2781-11e8-933f-cd1ae5bb99b3-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯ000 bunker construction in Kashmir,14ಶ್ರೀನಗರ : ಜಮ್ಮು-ಕಾಶ್ಮೀರದ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 14,000 ಬಂಕರ್​​ ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಪಾಕಿಸ್ತಾನ ನಡೆಸುವ ಅಪ್ರಚೋದಿತ ಗುಂಡಿನ ದಾಳಿಯಿಂದ ಗಡಿ ಗ್ರಾಮದಲ್ಲಿರುವ ಜನರ ಪ್ರಾಣ ರಕ್ಷಣೆಗಾಗಿ ಕೇಂದ್ರ ಈ ಕಾರ್ಯಕ್ಕೆ ಅಸ್ತು ಎಂದಿದೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ 13,029 ವೈಯಕ್ತಿಕ ಬಂಕರ್​​ ಗಳ ಮತ್ತು 1,431 ಸಮುದಾಯ ಬಂಕರ್​​ ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. var domain =...Kannada News Portal