ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇರುವ ಶ್ರೀ ಕ್ಷೇತ್ರ ಶಾರದಾ ಪೀಠಕ್ಕೆ ಇಂದು ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ, ತಾಯಿ ಶಾರದಾಂಭೆಯ ಮತ್ತು ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ದೇವಿಯ ದರ್ಶನ ಮಾಡಿ, ಶ್ರೀಗಳನ್ನು ಮಾತನಾಡಿಸಲು ಹೋಗಿದ್ದಾರೆ. ಆದರೆ ಆ ಸಮಯದಲ್ಲಿ ಭಾರತೀ ತೀರ್ಥ ಸ್ವಾಮಿಜಿಗಳು ತಮ್ಮ ಹಿಂಬಾಲಕರನ್ನು ಹೊರ ಕಳುಹಿಸಿ ಎಂದು ಗುಪ್ತವಾಗಿಯೇ ರಾಹುಲ್ ಜೊತೆ 20 ನಿಮಿಷಗಳ ಕಾಲ ಮಾತು ಕತೆ ನಡೆಸಿದ್ದಾರೆ.

ಇನ್ನೂ ಕೊಠಡಿಯೊಳಗೆ ಭಾರತೀ ತೀರ್ಥ ಸ್ವಾಮಿಜಿ ಮತ್ತು ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಮೂವರನ್ನು ಬಿಟ್ಟರೇ ಅಲ್ಲಿ ಬೇರೆ ಯಾರೂ ಸೇರಿಸಿರಲಿಲ್ಲ. ನಂತರ ಮಾತಿಗಿಳಿದ ಶ್ರೀಗಳು ರಾಹುಲ್ಗೆ ಧರ್ಮೋಪದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಾವು ಧರ್ಮವನ್ನು ರಕ್ಷಿಸುವ ಕೆಲಸ ಮಾಡಿ. ಧರ್ಮದ ವಿರುದ್ಧ ಎಂದೂ ನಡೆಯ ಬೇಡಿ. ನಿಮ್ಮ ಅಜ್ಜಿ, ತಂದೆ ಈ ಮಠದ ಭಕ್ತರಾಗಿದ್ದರು. ಶಾರದಾ ಪೀಠವನ್ನು ನಂಬಿ ಈ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು, ಆ ವೇಳೆ ಅವರ ಜೊತೆ ಸಾಕಷ್ಟು ಮಾತನಾಡಿದ್ದೆ. ಅವರೂ ಸಹ ಒಂದಷ್ಟು ಅನುಷ್ಠಾನಗಳನ್ನು ಮಾಡಿಕೊಂಡಿದ್ದರು. ನೀವು ಕೂಡ ನಿಮ್ಮ ಹಿರಿಯರ ಮಾರ್ಗದಲ್ಲಿ ನಡೆದು, ಧರ್ಮವನ್ನು ಬಿಟ್ಟು ನಡೆಯದ ರೀತಿ ಜೀವನ ನಡೆಸಿ.

ಧರ್ಮವೇ ನಿಮ್ಮನ್ನು ಕಾಯುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಆಶೀರ್ವಾದ ನೀಡಿದ್ದು, ಪದೇ ಪದೇ ಧರ್ಮವನ್ನು ಮಾತ್ರ ಕಾಯುವುದನ್ನು ಮರೆಯದಿರಿ. ಆ ಶಾರದಾ ದೇವಿ ನಿಮಗೆ ಇಷ್ಟಾರ್ಥ ಸಿದ್ಧಿಯನ್ನು ನೀಡಲಿ ಎಂದು ಹರಸಿ ಹಾರೈಸಿ, ಇಂದಿರಾ ಗಾಂಧಿ ಮಠಕ್ಕೆ ಆಗಮಿಸಿದಾಗ ತೆಗೆಸಿದ್ದ ಫೋಟೋ ಒಂದನ್ನು ನೀಡಿ ಕಳುಹಿಸಿ ಕೊಟ್ಟಿದ್ದಾರೆ ಎಂದೇಳಲಾಗಿದೆ.

Please follow and like us:
0
http://bp9news.com/wp-content/uploads/2018/03/WhatsApp-Image-2018-03-21-at-3.26.37-PM-1024x682.jpeghttp://bp9news.com/wp-content/uploads/2018/03/WhatsApp-Image-2018-03-21-at-3.26.37-PM-150x150.jpegPolitical Bureauಚಿಕ್ಕಮಗಳೂರುಪ್ರಮುಖರಾಜಕೀಯ20 minute secret talks with Sringeri Sri with Rahulಬೆಂಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇರುವ ಶ್ರೀ ಕ್ಷೇತ್ರ ಶಾರದಾ ಪೀಠಕ್ಕೆ ಇಂದು ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ, ತಾಯಿ ಶಾರದಾಂಭೆಯ ಮತ್ತು ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ದೇವಿಯ ದರ್ಶನ ಮಾಡಿ, ಶ್ರೀಗಳನ್ನು ಮಾತನಾಡಿಸಲು ಹೋಗಿದ್ದಾರೆ. ಆದರೆ ಆ ಸಮಯದಲ್ಲಿ ಭಾರತೀ ತೀರ್ಥ ಸ್ವಾಮಿಜಿಗಳು ತಮ್ಮ ಹಿಂಬಾಲಕರನ್ನು ಹೊರ ಕಳುಹಿಸಿ ಎಂದು ಗುಪ್ತವಾಗಿಯೇ ರಾಹುಲ್ ಜೊತೆ 20 ನಿಮಿಷಗಳ ಕಾಲ ಮಾತು ಕತೆ ನಡೆಸಿದ್ದಾರೆ. ಇನ್ನೂ...Kannada News Portal