ತಿರುವನಂತಪುರ :   ಕೇರಳದಲ್ಲಿ ಒಂದು ನಿಗೂಢ ವೈರಸ್​ನಿಂದಾಗಿ ಅಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಆ ಅಪರಿಚಿಯ ವೈರಸ್​ನಿಂದಾಗಿ 3 ಮಂದಿ ಮೃತಪಟ್ಟಿದ್ದು ಗಾಬರಿಯಾಗಿದ್ದಾರೆ. ಕೋಝಿಕೊಡ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಆ ಭಯಾನಕ ವೈರಸ್​ನಿಂದ 6 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಬೆಚ್ಚಿಬಿದ್ದ ಕೇರಳ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದೆ.  ಈ ವೈರಸ್​ನಿಂದ ಬಳುತ್ತಿರುವವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕೋಝಿ ಕೋಡ್ ನಲ್ಲಿ ವಿಶೇಷ ಘಟಕ ತೆೆರೆಯಲಾಗಿದೆ.

ಈಗಾಗಲೇ 25 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ವೈದ್ಯ ಲೋಕಕ್ಕೆ ಸವಾಲಾಗಿರುವ ಈ ವೈರಸ್​ಗೆ ಸೂಕ್ತ ಮದ್ದು ಸಿಗದೇ ಅನೇಕ ಜನ ಪ್ರಾಣ ಕಳೆದುಕೊಳ್ಳುವ ಪರಿಸ್ಥಿಯಲ್ಲಿದ್ದಾರೆ. ಇನ್ನು ಅಪೋಲೋ ಮತ್ತು ಮಣಿಪಾಲ್​ ಆಸ್ಪತ್ರೆಯ ತಜ್ಞರು ಭೇಟಿ ನೀಡಿ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ಈ ಮಧ್ಯೆ ಸಾಮಾಜಿಕ  ಜಾಲತಾಣಗಳಲ್ಲಿನ ಸುದ್ದಿ ನೋಡಿ ಯಾರೂ ಊರು ಬಿಟ್ಟು ಹೊರ ಹೋಗದಂತೆ ರಾಜ್ಯದ ಆರೋಗ್ಯ ಮಂತ್ರಿ ಕೆಕೆ. ಶೈಲಜಾ ಮನವಿ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/Injection-x750.jpghttp://bp9news.com/wp-content/uploads/2018/05/Injection-x750-150x150.jpgBP9 Bureauಪ್ರಮುಖತಿರುವನಂತಪುರ :   ಕೇರಳದಲ್ಲಿ ಒಂದು ನಿಗೂಢ ವೈರಸ್​ನಿಂದಾಗಿ ಅಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಆ ಅಪರಿಚಿಯ ವೈರಸ್​ನಿಂದಾಗಿ 3 ಮಂದಿ ಮೃತಪಟ್ಟಿದ್ದು ಗಾಬರಿಯಾಗಿದ್ದಾರೆ. ಕೋಝಿಕೊಡ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಆ ಭಯಾನಕ ವೈರಸ್​ನಿಂದ 6 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಬೆಚ್ಚಿಬಿದ್ದ ಕೇರಳ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದೆ.  ಈ ವೈರಸ್​ನಿಂದ ಬಳುತ್ತಿರುವವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕೋಝಿ...Kannada News Portal