ಬೆಂಗಳೂರು: ಯಡಿಯೂರಪ್ಪನವರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಶ್ರೀರಾಮಲು ಸುದ್ದಿಗಾರರೊಂದಿಗೆ ಮಾತನಾಡಿ ಬಹುಮತ ಸಾಧಿಸಿಯೇ ಸಾಧಿಸ್ತೀವಿ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು. ಈ ನಾಡಿನ ಆರುವರೆ ಕೋಟಿ ಜನತೆ ಮತ್ತು ಬಡವರು, ರೈತರ ಪರವಾಗಿ ಶ್ರೀರಾಮಲು ಸಿಎಂ ಯಡಿಯೂರಪ್ಪನವರಿಗೆ  ಅಭಿನಂದನೆಗಳನ್ನ ಸಲ್ಲಿಸಿದ್ರು.

ಕಾಂಗ್ರೆಸ್- ಜೆಡಿಎಸ್‌ ನಾಯಕರು ಈಗ ಹೊಸ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ನ ಕುಮಾರಸ್ವಾಮಿ ಈ ಮಹಾನಾಟಕದ ನಾಯಕರು ಎಂದು ಗೇಲಿಮಾಡಿದ್ರು. ಈ ರೀತಿ ಅಧಿಕಾರದ ಅಹಂನ ಹಿಂದೆ ಓಡಿದ್ರೆ, ಜನ ನಿಮ್ಮನ್ನು ತಿರಸ್ಕರಿಸಿ ಬಿಡ್ತಾರೆ ಎಂಬ ಎಚ್ಚರಿಕೆಯ ಮಾತುಗಳನ್ನಾಡಿದ್ರು.

ಇನ್ನು ಬಹುಮತ ಸಾಭೀತು ಪಡಿಸಲು ನಾವು ಸಿದ್ಧರಿದ್ದೇವೆ. ಈಗಾಗಲೇ ಪಕ್ಷೇತರರು, 2 ಪಕ್ಷದ ಶಾಸಕರು ನಮ್ಮ ಸಂಪರ್ಕಲ್ಲಿದ್ದಾರೆ. ಅವರೆಲ್ಲಾ ನಮ್ಮ ಪಕ್ಷಕ್ಕೆ ಬಂದೇ ಬರ್ತಾರೆ ಕಾದುನೋಡಿ ಅಂತ ಅತ್ಯಂತ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/6603HI-W02714RGK93QED2H3jpgjpg-1.jpghttp://bp9news.com/wp-content/uploads/2018/05/6603HI-W02714RGK93QED2H3jpgjpg-1-150x150.jpgBP9 Bureauಪ್ರಮುಖ  ಬೆಂಗಳೂರು: ಯಡಿಯೂರಪ್ಪನವರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಶ್ರೀರಾಮಲು ಸುದ್ದಿಗಾರರೊಂದಿಗೆ ಮಾತನಾಡಿ ಬಹುಮತ ಸಾಧಿಸಿಯೇ ಸಾಧಿಸ್ತೀವಿ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು. ಈ ನಾಡಿನ ಆರುವರೆ ಕೋಟಿ ಜನತೆ ಮತ್ತು ಬಡವರು, ರೈತರ ಪರವಾಗಿ ಶ್ರೀರಾಮಲು ಸಿಎಂ ಯಡಿಯೂರಪ್ಪನವರಿಗೆ  ಅಭಿನಂದನೆಗಳನ್ನ ಸಲ್ಲಿಸಿದ್ರು. ಕಾಂಗ್ರೆಸ್- ಜೆಡಿಎಸ್‌ ನಾಯಕರು ಈಗ ಹೊಸ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ನ ಕುಮಾರಸ್ವಾಮಿ ಈ ಮಹಾನಾಟಕದ ನಾಯಕರು ಎಂದು ಗೇಲಿಮಾಡಿದ್ರು. ಈ ರೀತಿ ಅಧಿಕಾರದ ಅಹಂನ ಹಿಂದೆ ಓಡಿದ್ರೆ,...Kannada News Portal