ಕೋಲಾರ:ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನ ಕೋಲಾರದ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನ ಆಟೋ ಚಾಲಕ ಬಂಡಿಶಂಕರ್ ಎಂದು ಗುರುತಿಸಲಾಗಿದೆ. ಈತನ ವಶದಿಂದ ಸುಮಾರು 100 ಸಿಮ್ ಕಾರ್ಡ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ಈತ ತನ್ನ  ಮೊಬೈಲ್ ನಿಂದ ಹಲವು ಮೆಸೇಜ್ ಗಳನ್ನ ಕಳುಹಿಸಿದ್ದು, ಇವುಗಳಲ್ಲಿ ನಾನು ಅಲ್ ಖೈದಾ ಸಂಘಟನೆಗೆ ಸೇರಿದ್ದು, ಲಾಡನ್ ಮೈ ಗಾರ್ಡ್ ಎಂದು ಹಲವರಿಗೆ ಮೆಸೇಜ್ ಗಳನ್ನ ಕಳುಹಿಸಿದ್ದ ಎನ್ನಲಾಗಿದೆ. ಈತ ಐದು ತಿಂಗಳ ಹಿಂದೆ ಬಂಗಾರಪೇಟೆಯ ಹುಣಸನಹಳ್ಳಿಯಲ್ಲಿ ಅಂಬರೀಶ್ ಎಂಬ ಆಟೋ ಚಾಲಕನನ್ನ ಪರಿಚಯ ಮಾಡಿಕೊಂಡು ಬಂದು ಇಲ್ಲಿಯೇ ವಾಸವಿದ್ದ ಎನ್ನಲಾಗಿದೆ.

ಈತನ ಚಟುವಟಿಕೆಗಳ ಮೇಲೆ ಗಮನ ಇರಿಸಿಕೊಂಡಿದ್ದ ಪೊಲೀಸರು ಬುಧವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಈತನ ನಿಜವಾದ ಹೆಸರು ಬೇರೆ ಇದ್ದು, ಈತ ಅನ್ಯ ಕೋಮಿಗೆ ಸೇರಿದ್ದಾನೆ. ಆದರೆ, ಹೆಸರನ್ನ ಮಾತ್ರ ಸುಳ್ಳು ಹೇಳಿಕೊಂಡು ತಿರುಗಾಡಿದ್ದಾನೆ ಎನ್ನಲಾಗಿದೆ.

ಈತನ ಹಿಂದೆ ಯಾವುದಾದರೂ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಇದ್ದಾರೆಯೇ , ಈತ ಪ್ರತಿದಿನ ಯಾರು ಯಾರಿಗೆ ಕರೆ ಮಾಡುತ್ತಿದ್ದ. ಕರೆಗಳಲ್ಲಿ ಏನೇನು ಮಾತನಾಡುತ್ತಿದ್ದ ಎಂಬ ವಿವರಗಳನ್ನ ಪೊಲೀಸರು ಪಡೆಯುತ್ತಿದ್ದಾರೆ. ಈ ಸಂಬಂಧ ಮೂರು ತಂಡಗಳನ್ನ ರಚಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/Police-Encounter-min.jpghttp://bp9news.com/wp-content/uploads/2018/06/Police-Encounter-min-150x150.jpgBP9 Bureauಪ್ರಮುಖರಾಜಕೀಯಕೋಲಾರ:ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನ ಕೋಲಾರದ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನ ಆಟೋ ಚಾಲಕ ಬಂಡಿಶಂಕರ್ ಎಂದು ಗುರುತಿಸಲಾಗಿದೆ. ಈತನ ವಶದಿಂದ ಸುಮಾರು 100 ಸಿಮ್ ಕಾರ್ಡ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ಈತ ತನ್ನ  ಮೊಬೈಲ್ ನಿಂದ ಹಲವು ಮೆಸೇಜ್ ಗಳನ್ನ ಕಳುಹಿಸಿದ್ದು, ಇವುಗಳಲ್ಲಿ ನಾನು ಅಲ್ ಖೈದಾ ಸಂಘಟನೆಗೆ ಸೇರಿದ್ದು, ಲಾಡನ್ ಮೈ ಗಾರ್ಡ್ ಎಂದು ಹಲವರಿಗೆ ಮೆಸೇಜ್ ಗಳನ್ನ ಕಳುಹಿಸಿದ್ದ ಎನ್ನಲಾಗಿದೆ. ಈತ ಐದು ತಿಂಗಳ ಹಿಂದೆ...Kannada News Portal