ಬೆಂಗಳೂರು : ಸಮ್ಮಿಶ್ರ ಸರ್ಕಾರದ ವಿರುದ್ಧ ಸಮರವನ್ನೇ ಸಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜಕೀಯ ವೈರಿಗಳಾದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಒಟ್ಟಿಗೆ ಕೂತು ಭೋಜನ ಮಾಡಿದ್ದಾರೆ.

ಮುಖ್ಯಮಂತ್ರಿ ಎಚ್‌ಡಿಕೆ ಅವರು ಎಲ್ಲಾ ಶಾಸಕರಿಗಾಗಿ ವಿಧಾನಸೌಧದಲ್ಲಿ ಔತಣ ಕೂಟ ಆಯೋಜಿಸಿದ್ದರು. ಔತಣಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಖುದ್ದು ಸಿಎಂ ಎಚ್‌ಡಿಕೆ ಅವರು ಕೈ ಹಿಡಿದು ಕರೆತಂದು ತಾವು ಕುಳಿತುಕೊಂಡಿದ್ದ ಕುರ್ಚಿ ಬಿಟ್ಟುಕೊಟ್ಟರು.

ಪಕ್ಕದಲ್ಲಿ ಸಿದ್ದರಾಮಯ್ಯ ಅವರು ಊಟ ಮಾಡುತ್ತಿದ್ದರು. ಸ್ಪೀಕರ್‌ ರಮೇಶ್‌ ಕುಮಾರ್‌ , ಸಚಿವ ಆರ್‌.ವಿ.ದೇಶ್‌ಪಾಂಡೆ, ಜೆಡಿಎಸ್‌ ಪರಿಷತ್‌ ಸದಸ್ಯ , ಹಂಗಾಮಿ ಸಭಾಪತಿ ಬಸವರಾಜ್‌ ಹೊರಟ್ಟಿ ಮೊದಲಾದವರು ಜೊತೆಯಲ್ಲೇ ಊಟ ಮಾಡಿದರು.

ಈ ಮೂಲಕ ರಾಜಕೀಯ ವಿಚಾರದಲ್ಲಿ ಭಿನ್ನಮತವಿದ್ಧರೂ ವೈಯಕ್ತಿಕ ದ್ವೇಷ ನಮ್ಮಲ್ಲಿ ಇಲ್ಲ ಎಂಬ ಸಂದೇಶವನ್ನು ಕುಮಾರ ಸ್ವಾಮಿ ಅವರು ಇಡೀ ರಾಜ್ಯಕ್ಕೆ ಸಾರಿದ್ದಾರೆ. ಇದರ ಜೊತೆಗೆ ಕುಮಾರಸ್ವಾಮಿಯವರ ಈ ನಡೆಗೆ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ಸ್ಪಂದಿಸಿದ್ದು ಸಿಎಂ ಆತಿಥ್ಯವನ್ನು ವಿನಯದಿಂದಲೇ ಸ್ವೀಕರಿಸಿದ್ದಾರೆ.

ಇನ್ನು ಈ ದೃಶ್ಯ ಕಂಡ ನೆರೆದಿದ್ದ ಕಿರಿಯ ಶಾಸಕರು ಅಚ್ಚರಿ ಪಟ್ಟರೆ ಸದನದ ಹಿರಿಯರು ಈ ಸುಂದರ ಅಪರೂಪ ಕ್ಷಣಗಳಿಗೆ ಸಾಕ್ಷಿಯಾದರು.

Please follow and like us:
0
http://bp9news.com/wp-content/uploads/2018/07/A-rare-banquet-video-of-political-committed-enemies-Viral-Karnatakada-Miditha.jpeghttp://bp9news.com/wp-content/uploads/2018/07/A-rare-banquet-video-of-political-committed-enemies-Viral-Karnatakada-Miditha-150x150.jpegPolitical Bureauಪ್ರಮುಖರಾಜಕೀಯA rare banquet video of political committed enemies Viral !!!ಬೆಂಗಳೂರು : ಸಮ್ಮಿಶ್ರ ಸರ್ಕಾರದ ವಿರುದ್ಧ ಸಮರವನ್ನೇ ಸಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜಕೀಯ ವೈರಿಗಳಾದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಒಟ್ಟಿಗೆ ಕೂತು ಭೋಜನ ಮಾಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt); ಮುಖ್ಯಮಂತ್ರಿ ಎಚ್‌ಡಿಕೆ ಅವರು ಎಲ್ಲಾ...Kannada News Portal