ಇತ್ತೀಚೆಗೆ   ಹಿಟ್ಸ್​ ಸಿನಿಮಾಗಳ ರೇಸ್​ನಲ್ಲಿ  ಸಂಜು ಸಿನಿಮಾ ಟಾಪ್​ನಲ್ಲಿದೆ. ಆತ್ಮಕಥಾ ಸಿನಿಮಾಗಳ ಪೈಕಿ  ಸಂಜು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಸಕ್ಸಸ್​  ಕಾಣುತ್ತಿದೆ.  ಇತ್ತೀಚೆಗಷ್ಟೇ ಸಿನಿ ತಂಡದಿಂದ ಸಿನಿಮಾ ಮೇಕಿಂಗ್​ ವಿಡಿಯೋವೊಂದು  ಬಿಡುಗಡೆ ಮಾಡಿದ್ದು  ಇದರಲ್ಲಿ ರಣಬೀರ್​ , ಸಂಜಯ್​ ದತ್​ ಆಗಲು ಮಾಡಿದ ಸಾಹಸಗಳ ಹಾದಿಯನ್ನು ತೋರಿಸಲಾಗಿದೆ. ಇದರಲ್ಲಿ ನಿರ್ದೇಶಕ ಹಿರಾನಿ  ಹೇಳುವಂತೆ ಸಿನಿಮಾ ಮಾಡುವ ನಿರ್ಧಾರ  ತೆಗೆದುಕೊಂಡಾಗ  ಇದರಲ್ಲಿ  ಸಂಜಯ್​ ದತ್​ ಪಾತ್ರವನ್ನು  ನಿರ್ವಹಿಸುವ ನಟ ಯಾರು ಎಂಬುದೇ ದೊಡ್ಡ ಸವಾಲಾಗಿತ್ತು.

ಕೃತಕ ಅಂಗಾಂಗಗಳನ್ನು ಮಾಡುವವರಿಂದ ಹಿಡಿದು ಕೇಶ ವಿನ್ಯಾಸಕ ಪರಿಣತರನ್ನು ಮೊದಲು ಸಂಪರ್ಕಿಸಲಾಗಿತ್ತು. ನಂತರ ಅವರೊಂದಿಗೆ ಚರ್ಚೆ ನಡೆಯುತ್ತಲೇ ಇತ್ತು. ಒಂದು ವೇಳೆ ಸಂಜಯ್​ ದತ್​ರಂತೆ ಕಾಣುವ ಲುಕ್​ ಹೋಲಿಕೆಯಾಗದಿದ್ದಲ್ಲಿ ಈ ಸಿನಿಮಾ ಆಗುವುದೇ ಇಲ್ಲ ಎಂಬ ನಿರ್ಧಾರಕ್ಕೂ ಬರಲಾಗಿತ್ತಂತೆ.

ಕೃತಕ ಅಂಗಾಂಗಗಳನ್ನು ಮಾಡುವ ತಜ್ಞರು ರಣಬೀರ್​ಗೆ ಸಂಜು ಲುಕ್​ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕೆ ನಿತ್ಯ ರಣಬೀರ್​ 6 ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದರಂತೆ.  ಲುಕ್​ ವಿಷಯ ಹೀಗಾದರೆ, ಬಾಡಿ ಬಿಲ್ಡಿಂಗ್​ ವಿಷಯ ಸಂಪೂರ್ಣವಾಗಿ ರಣಬೀರ್​ ಮೇಲೆ ನಿಂತಿತ್ತು. ಅದಕ್ಕೆ ರಣಬೀರ್​ ಬೆಳಿಗ್ಗೆ 3ಕ್ಕೆ ಎದ್ದು ಪ್ರೊಟೀನ್​ ಶೇಕ್​ ಕುಡಿದು ವ್ಯಾಯಾಮ ಆರಂಭಿಸುತ್ತಿದ್ದರಂತೆ. ನಂತರ ದಿನಕ್ಕೆ 8 ಸತಿ ಆಹಾರ ಸೇವಿಸುತ್ತಿದ್ದರಂತೆ. ಇದರಿಂದಾಗಿಯೇ ಸಿನಿಮಾದಲ್ಲಿ ರಣಬೀರ್​ರನ್ನು ನೋಡಿದೊಡನೆ ಸಂಜಯ್​ ಕಣ್ಮುಂದೆ ಬರುತ್ತಿದ್ದರು. ಇದೂ ಸಹ ಸಿನಿಮಾದ ಯಶಸ್ಸಿಗೆ ಒಂದು ಕಾರಣವಾಯಿತ್ತು.

 

 

Please follow and like us:
0
http://bp9news.com/wp-content/uploads/2018/07/ಕುಮಾರ-ಸ್ವಾಮಿ.jpghttp://bp9news.com/wp-content/uploads/2018/07/ಕುಮಾರ-ಸ್ವಾಮಿ-150x150.jpgBP9 Bureauಸಿನಿಮಾಇತ್ತೀಚೆಗೆ   ಹಿಟ್ಸ್​ ಸಿನಿಮಾಗಳ ರೇಸ್​ನಲ್ಲಿ  ಸಂಜು ಸಿನಿಮಾ ಟಾಪ್​ನಲ್ಲಿದೆ. ಆತ್ಮಕಥಾ ಸಿನಿಮಾಗಳ ಪೈಕಿ  ಸಂಜು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಸಕ್ಸಸ್​  ಕಾಣುತ್ತಿದೆ.  ಇತ್ತೀಚೆಗಷ್ಟೇ ಸಿನಿ ತಂಡದಿಂದ ಸಿನಿಮಾ ಮೇಕಿಂಗ್​ ವಿಡಿಯೋವೊಂದು  ಬಿಡುಗಡೆ ಮಾಡಿದ್ದು  ಇದರಲ್ಲಿ ರಣಬೀರ್​ , ಸಂಜಯ್​ ದತ್​ ಆಗಲು ಮಾಡಿದ ಸಾಹಸಗಳ ಹಾದಿಯನ್ನು ತೋರಿಸಲಾಗಿದೆ. ಇದರಲ್ಲಿ ನಿರ್ದೇಶಕ ಹಿರಾನಿ  ಹೇಳುವಂತೆ ಸಿನಿಮಾ ಮಾಡುವ ನಿರ್ಧಾರ  ತೆಗೆದುಕೊಂಡಾಗ  ಇದರಲ್ಲಿ  ಸಂಜಯ್​ ದತ್​ ಪಾತ್ರವನ್ನು  ನಿರ್ವಹಿಸುವ ನಟ...Kannada News Portal