ಬೆಂಗಳೂರು:ಇನ್ನೇನು ಸಾವಿಗೆ ಒಳಗಾಗುತ್ತದೆ ಎಂಬ ಗೋವನ್ನು ಬಚಾವು ಮಾಡುವುದು ಬಹಳ ದೊಡ್ಡ ಪುಣ್ಯ ಕಾರ್ಯವಾಗಿರುತ್ತದೆ. ಕೆಲವು ವರ್ಷದಿಂದ ಚಾಲ್ತಿಯಲ್ಲಿರುವ ಗೋ ಸಂಜೀವಿನಿಗೆ ದೊಡ್ಡ ರೀತಿಯಲ್ಲಿ ಮಲೆಮಹದೇಶ್ವರ ಬೆಟ್ಟದ ತಪ್ಪಲ ಕೆಂಪಯ್ಯನ ಹಟ್ಟಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಸ್ವಾಮೀಜಿಗಳು ಹೇಳಿದರು.

ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಅಭಯಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮೇವಿಲ್ಲದೆ ಸಾಯುವ ಅಂಚಿನಲ್ಲಿರುವ ಗೋವುಗಳಿಗೆ ಮೇವು ಒದಗಿಸಿ, ಗೋವಿನ ಪ್ರಾಣ ರಕ್ಷಣೆಗೆ ನೆರವಾಗುವ ಯೋಜನೆಯಾಗಿ ಗೋ ಪ್ರಾಣಭಿಕ್ಷೆ ಇದೆ. ಈ ಯೋಜನೆಯ ಮೂಲಕ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಸಾವಿರ ಸಾವಿರ ಸಂಖ್ಯೆಯ ಗೋವುಗಳಿಗೆ ಮಠ ಮೇವನ್ನು ವಿತರಿಸಿದೆ. ಈಗಲೂ ತುಮಕೂರು, ತಿಪಟೂರು ಭಾಗದಲ್ಲಿ ಸುತ್ತಮುತ್ತ ಗೋಪ್ರಾಣ ಭಿಕ್ಷೆಯ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಗೋ ಪ್ರಾಣ ಭಿಕ್ಷೆ ಸಮಾಜ ನೀಡುವ ಸಮರ್ಪಣೆಯ ಮೂಲಕ ಮೇವು ಖರೀದಿ ಮಾಡಿ ಅವನ್ನು ಗೋವುಗಳಿಗೆ ನೀಡಿ ಗೋವುಗಳನ್ನು ಬದುಕಿಸುವ ಯೋಜನೆ. ಕೋಟಿ ಕೋಟಿ ಸಂಖ್ಯೆಯಲ್ಲಿ ಮುಖ್ಯ ಮಂತ್ರಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಅಭಯಾಕ್ಷರದ ಮೂಲಕ ಅರ್ಜಿಗಳನ್ನು ನೀಡಿದಾಗ ಅನಿವಾರ್ಯವಾಗಿ ಅವರು ಗೋಹತ್ಯೆ ನಿಷೇಧ ಮಾಡಬೇಕಾಗುತ್ತದೆ. ಆದರೆ ಇದೆಲ್ಲದಕ್ಕಿಂತ ಹತ್ತಿರದ ಕಾರ್ಯ ಗೋ ಸಂಜೀವಿನಿ ಎಂದು ಹೇಳಿದರು.

ಬೀಫ್‍ಫೆಸ್ಟ್​ಗೆ  ಪ್ರತಿಯಾಗಿ ಹಾಲು ಹಬ್ಬ ಆರಚರಿಸಿದ ಮಠ ಅಂದಿಯೂರಿನ ಆಡಿಜಾತ್ರೆಗೆ ಪರ್ಯಾಯವಾಗಿ ಅಭಯ ಜಾತ್ರೆಯನ್ನು ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದೆ. ದೊಡ್ಡ ಮಟ್ಟದಲ್ಲಿ ಕೆಂಪಯ್ಯನ ಹಟ್ಟಿಯಲ್ಲಿ ನಡೆಯುವ ಜಾತ್ರೆಗೆ ಕೃಷಿಕರಿಗೆ, ಗೋಪ್ರೇಮಿ, ಗೋಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಹಸುಗಳನ್ನು ತುಂಬ ದೂರ ನಡೆದು ಹೋಗಬೇಕಾದ ಹಂದಿಯೂರಿಗೆ ಬದಲು ಹತ್ತಿರದಲ್ಲೇ ಮಾರಾಟ ಮಾಡಿ ಎಂಬ ನಿಟ್ಟಿನಲ್ಲಿ ಅ.11ರಿಂದ 13ರವರೆಗೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಆ ಭಾಗಕ್ಕೆ ತೆಗೆದುಕೊಂಡು ಹೋಗುವವರ ಮನವೊಲಿಸುವ ಕಾರ್ಯ ಮಾಡಲಾಗುತ್ತದೆ ಎಂದು ಶ್ರೀಗಳು ಹೇಳಿದರು.

 

Please follow and like us:
0
http://bp9news.com/wp-content/uploads/2017/08/Guru-683x1024.jpghttp://bp9news.com/wp-content/uploads/2017/08/Guru-150x150.jpgBP9 Bureauಆಧ್ಯಾತ್ಮಶ್ರೀ ರಾಮಚಂದ್ರಾಪುರ ಮಠಬೆಂಗಳೂರು:ಇನ್ನೇನು ಸಾವಿಗೆ ಒಳಗಾಗುತ್ತದೆ ಎಂಬ ಗೋವನ್ನು ಬಚಾವು ಮಾಡುವುದು ಬಹಳ ದೊಡ್ಡ ಪುಣ್ಯ ಕಾರ್ಯವಾಗಿರುತ್ತದೆ. ಕೆಲವು ವರ್ಷದಿಂದ ಚಾಲ್ತಿಯಲ್ಲಿರುವ ಗೋ ಸಂಜೀವಿನಿಗೆ ದೊಡ್ಡ ರೀತಿಯಲ್ಲಿ ಮಲೆಮಹದೇಶ್ವರ ಬೆಟ್ಟದ ತಪ್ಪಲ ಕೆಂಪಯ್ಯನ ಹಟ್ಟಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಸ್ವಾಮೀಜಿಗಳು ಹೇಳಿದರು. ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಅಭಯಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮೇವಿಲ್ಲದೆ ಸಾಯುವ ಅಂಚಿನಲ್ಲಿರುವ ಗೋವುಗಳಿಗೆ ಮೇವು ಒದಗಿಸಿ, ಗೋವಿನ ಪ್ರಾಣ ರಕ್ಷಣೆಗೆ...Kannada News Portal