ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಸ್ವಾತಂತ್ರಕ್ಕಾಗಿ ಜನರಲ್ಲಿ ದೇಶಭಕ್ತಿ ಹುಟ್ಟಿಸುವ ಸಲುವಾಗಿ ಕರಪತ್ರ ಮಾದರಿಯಲ್ಲಿ ದಿನಪತ್ರಿಕೆ ಹೊರಬಂತು. ಆಗಿನ ಕಾಲದಲ್ಲಿ ಅಖಂಡ ಭಾರತ ಒಂದೇ ಗುರಿಯಾಗಿತ್ತು ಇದೇ ಕಾರಣ ಜನರಲ್ಲಿ ಸ್ವಾತಂತ್ರದ ಕಿಚ್ಚು ಹಚ್ಚಲು ಪ್ರಾರಂಭವಾದ ದಿನಪತ್ರಿಕೆ ಜನರ ಮನ ತಲುಪಿತು. ತದ ನಂತರ ಅನೇಕ ದಿನ ಪತ್ರಿಕೆಗಳು ದೇಶದಲ್ಲಿ ಪ್ರಾರಂಭವಾದವು ನಂತರ ಟಿವಿ ಮಾಧ್ಯಮ ಪ್ರಾರಂಭವಾಯಿತು ದಿನಕ್ಕೆ ಎರಡು ಮೂರು ಭಾರಿ ದೇಶದ ಸುದ್ದಿ ನೋಡುವಂತಾಯಿತು ಕಾಲ ಬದಲಾದಂತೆ ದೇಶವು ಬೆಳೆಯ ತೊಡಗಿತು ಅಂತರಾಷ್ಟ್ರೀಯ ಸಮುದಾಯದ ಗಮನ  ಭಾರತದ ಕಡೆ ತಿರುಗಿತು .
               ಆದರೆ ಬರ ಬರುತ್ತ ಟಿವಿ ಮಾಧ್ಯಮ ಎಷ್ಟು ವಿಸ್ತಾರವಾಯಿತೆಂದರೆ ದೇಶದ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಘಟನೆ ನಡೆದಲ್ಲಿ ಅದನ್ನು ಸವಿಸ್ತಾರವಾಗಿ ದಿನಗಟ್ಟಲೆ ತೋರಿಸುವಂತಾಯಿತು, ಮುಂದೆ ಟಿವಿ ಮಾಧ್ಯಮ ಒಂದು ಉದ್ಯಮವಾಗಿ ಬೆಳೆದು ಸ್ವಹಿತಾಸಕ್ತಿಗಾಗಿ ಬಳಕೆಗೊಳ್ಳಲು ಶುರುವಾಗಿದೆ, ಇವತ್ತಿನ ಕೆಲ ಟಿವಿ ಮಾಧ್ಯಮ ಹಾಗೂ ದಿನಪತ್ರಿಕೆಗಳು ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಅನುಕೂಲವಾದ ವಾತವರಣ ನಿರ್ಮಿಸಲು ನಿರ್ಮಿತವಾಗಿವೆ. ಇದರಿಂದ ಭಾರತದ ಜನ ಭ್ರಮನಿರಸರಾಗಿದ್ದಾರೆ.
               ಪತ್ರಿಕೋದ್ಯಮ ಒಂದು ಉದ್ಯಮವಲ್ಲ ಅದು ಭಾರತದೇಶದ ಜನರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸುವ ಒಂದು ಅದ್ಬುತ ಸಾಧನವಾಗಬೇಕು ಆಗ ಮಾತ್ರ ಪತ್ರಿಕೋದ್ಯಮಕ್ಕೆ ಗೌರವ ಬರುತ್ತದೆ.
               ಈ ಎಲ್ಲಾ ಸಂಗತಿಗಳನ್ನು ಅಧ್ಯಯನ ಮಾಡಿ ಸಮಾನಮನಸ್ಕರು ಹಾಗೂ ಪತ್ರಕರ್ತರು ಸೇರಿ ಒಂದು ನಿರ್ಧಾರ ತೆಗೆದುಕೊಂಡು ವಿಭಿನ್ನವಾಗಿ ಜನರ ಮನ ಸೆಳೆಯಲು ಕಾವೇರಿ ನ್ಯೂಸ್ & ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಬಿಪಿ9 ನ್ಯೂಸ್ ಎಂಬ ಹೆಸರಿನ ನ್ಯೂಸ್ ಪೊರ್ಟಲ್ ಪ್ರಾರಂಭಿಸಿದ್ದೇವೆ. ಈ ಮಾಧ್ಯಮ ವಿಭಿನ್ನವಾಗಿರುತ್ತದೆ ಹೇಗೆಂದರೆ ಇಲ್ಲಿಯವರೆಗೆ ಟಿವಿ ಹಾಗೂ ದಿನಪತ್ರಿಕೆಗಳ ಮುಖಾಂತರ ದೇಶ ಹಾಗೂ ವಿದೇಶಿ ಸುದ್ದಿಗಳನ್ನು ನೋಡುತ್ತಿದ್ದಿರಿ, ಓದುತ್ತಿದ್ದಿರಿ ಆದರೆ ಬಿಪಿ9 ನ್ಯೂಸ್ ಒಂದು ಡಿಜಿಟಲ್ ಮಾಧ್ಯಮ ನಿಮ್ಮ ಕೈಯಲ್ಲೆ ಹಳ್ಳಿಯಿಂದ ದಿಲ್ಲಿಯವರೆಗಿನ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ನೋಡಬಹುದು, ಓದಬಹುದು. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಬಿಪಿ9 ನ್ಯೂಸ್ ಌಪ್ಅನ್ನು ಡೌನ್ಲೋಡ್  ಮಾಡಿಕೊಂಡರೆ ಪ್ರತಿಕ್ಷಣದ ಸುದ್ದಿ ದಿನದ 24 ಘಂಟೆಗಳೂ ನಿಮ್ಮ ಕೈಯಲ್ಲಿರುತ್ತದೆ.
ನಂದಿಹಳ್ಳಿ ಟು ನ್ಯೂಯಾರ್ಕ್
                 ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮುಗಿಸಿ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರ ಕಾರ್ಯದ ನಡುವೆಯೂ ಅವರ ಅಭಿಮಾನ ನಮ್ಮ ದೇಶ ನಮ್ಮ ರಾಜ್ಯ ನಮ್ಮ ಊರಿನ ಮೇಲಿರುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡೆ ಬಿಪಿ9 ನ್ಯೂಸ್ ಪ್ರಾರಂಭಿಸಿದ್ದು ನಮ್ಮ ಊರಿನ ಸುದ್ದಿ ಕ್ಷಣ ಮಾತ್ರದಲ್ಲಿ ವಿದೇಶದಲ್ಲಿರುವವರಿಗೂ ಮುಟ್ಟಿಸುವುದೇ ನಮ್ಮ ಧ್ಯೇಯ.
                  ಬಿಪಿ9 ನ್ಯೂಸ್ ಗ್ರಾಮ ತಾಲೂಕು, ಜಿಲ್ಲೆ, ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾತರಹದ ಅಂದರೆ ಸಾಮಾಜಿಕ, ಧಾರ್ಮಿಕ, ಕೃಷಿ, ಸಿನಿಮಾ, ಮನರಂಜನೆ, ರಾಜಕೀಯ, ಮೂಲಭೂತ ಸೌಕರ್ಯದ ಜಾಗೃತಿ, ಪರಿಸರ ರಕ್ಷಣೆ, ಸ್ವಚ್ಚಭಾರತ ಅಭಿಯಾನ, ಕ್ರೀಡೆ, ಪ್ರವಾಸ್ಯೋದ್ಯಮ ಇದರ ಜೊತೆಗೆ ದೀನ ದಲಿತ ಹಿಂದುಳಿದ ವರ್ಗದವರ ಬಡವರ ಧ್ವನಿಯಾಗಿ ನಿಲ್ಲುವ ಸಂಕಲ್ಪದೊಂದಿಗೆ ಹಾಗೂ ಎರಡು ಪ್ರಮುಖ ಯೋಜನೆಯೊಂದಿಗೆ ಬಿಪಿ9 ನ್ಯೂಸ್ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಆ ಯೋಜನೆಗಳೆಂದರೆ

ಜೈ ಜವಾನ್ ಜೈ ಕಿಸಾನ್
1) ರೈತ ದೇಶದ ಬೆನ್ನೆಲುಬು
2) ಸೈನಿಕ ದೇಶದ ರಕ್ಷಕ

-ತಮ್ಮ ವಿಶ್ವಾಸಿ
ಬಿಪಿ9 ನ್ಯೂಸ್