ನಟ ಅಜಯ್​ ರಾವ್​ ಮನೆಗೆ  ಮತ್ತೊಬ್ಬ ಹೊಸ ಅತಿಥಿ ಆಗಮನವಾಗಲಿದ್ದಾರೆ. ನಿನ್ನೆ ಗಣೇಶ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿಯೇ ಅಜಯ್​ ದಂಪತಿ ಈ  ಸ್ವೀಟ್​ ನ್ಯೂಸ್​ವೊಂದನ್ನು ಬಯಲು ಮಾಡಿದ್ದಾರೆ. ಅಂದಹಾಗೇ  ಗಣಪ ಹಬ್ಬದ  ಹಿನ್ನಲೆಯಲ್ಲಿ ಮುದ್ದಾದ ಗಣಪನ  ಫೋಟೋವನ್ನು ಅಜೇಯ್​  ರಾವ್​ ಅವರ ಪತ್ನಿ ಮುದ್ದಾದ ಗಣಪನನ್ನು ಪೇಂಟ್​  ಮಾಡುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿದ್ದಾರೆ ಅಜಯ್​.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಶೇಷ ಅಂದ್ರೆ ಅಜೇಯ್ ರಾವ್ ಪತ್ನಿ ತುಂಬು ಗರ್ಭಿಣಿಯಾಗಿರೋದನ್ನು ಈ ಫೋಟೋ ಮೂಲಕ ಅವರು ಹೇಳಿದ್ದಾರೆ. ಈ ಫೋಟೋದ ಮೂಲವೇ ತಮ್ಮ ಅಭಿಮಾನಿಗಳಿಗೆ ಗೌರಿ ಗಣೇಶ್​ ಹಬ್ಬದ ಶುಭಾಶಯ ತಿಳಿಸಿರುವ ಅಜೇಯ್ ರಾವ್​ ಅವರಿಗೆ, ಅವರ ಅಭಿಮಾನಿಗಳೂ ಶುಭಾಷಯ ಕೋರಿದ್ದಾರೆ. ಅಂದಹಾಗೇ ನಟ ಅಜಯ್​ ಕೃಷ್ಣ ಲವ್​ ಸ್ಟೋರಿ, ಎಕ್ಸ್​ ಕ್ಯೂಸ್​ಮಿ,   ಕೃಷ್ಣ ಮ್ಯಾರೇಜ್​ ಸ್ಟೋರಿ ಅಂತಾ ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಸದ್ಯ ತಾಯಿಗೆ ತಕ್ಕ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

Please follow and like us:
0
http://bp9news.com/wp-content/uploads/2018/09/41688012_1298358346973112_2695243848283586560_n.jpghttp://bp9news.com/wp-content/uploads/2018/09/41688012_1298358346973112_2695243848283586560_n-150x150.jpgBP9 Bureauಸಿನಿಮಾನಟ ಅಜಯ್​ ರಾವ್​ ಮನೆಗೆ  ಮತ್ತೊಬ್ಬ ಹೊಸ ಅತಿಥಿ ಆಗಮನವಾಗಲಿದ್ದಾರೆ. ನಿನ್ನೆ ಗಣೇಶ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿಯೇ ಅಜಯ್​ ದಂಪತಿ ಈ  ಸ್ವೀಟ್​ ನ್ಯೂಸ್​ವೊಂದನ್ನು ಬಯಲು ಮಾಡಿದ್ದಾರೆ. ಅಂದಹಾಗೇ  ಗಣಪ ಹಬ್ಬದ  ಹಿನ್ನಲೆಯಲ್ಲಿ ಮುದ್ದಾದ ಗಣಪನ  ಫೋಟೋವನ್ನು ಅಜೇಯ್​  ರಾವ್​ ಅವರ ಪತ್ನಿ ಮುದ್ದಾದ ಗಣಪನನ್ನು ಪೇಂಟ್​  ಮಾಡುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿದ್ದಾರೆ ಅಜಯ್​. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಶೇಷ ಅಂದ್ರೆ ಅಜೇಯ್...Kannada News Portal