ಯಾರೋ ಕಿಡಿಗೇಡಿಗಳು ತನ್ನ ಹೆಸರನ್ನು ಹಾಳು ಮಾಡುತ್ತಿರುವ ಬಗ್ಗೆ ಎಚ್ಚೆತ್ತುಕೊಂಡ ಚಾಲೆಂಜಿಂಗ್ ಸ್ಟಾರ್​ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಕಿಡಿಗೇಡಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಟ ದರ್ಶನ್​ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ತೆರೆದು ಕಿಡಿಗೇಡಿಗಳು ಆ ಮೂಲಕ ಹೆಚ್​ಡಿಕೆಗೆ ಸರಣಿ ಟ್ವೀಟ್​ಗಳನ್ನು ಕಳುಹಿಹಿಸಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ದರ್ಶನ್​  ತನ್ ರಿಯಲ್​ ಫೇಸ್​ಬುಕ್​ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.

“ನನ್ನ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಖಾತೆ ಹೊಂದಿದ್ದಾರೆ. ಇದರ ಮೂಲಕ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ತಪ್ಪು. ಸೈಬರ್ ಕ್ರೈಂ ಡಿಪಾರ್ಟ್ ಮೆಂಟ್ ತಪ್ಪಿತಸ್ಥರಿಗೆ ಶಿಕ್ಷೆ ನೀಡೋದಾಗಿ ಹೇಳಿದೆ. ಯಾರೂ ಕೂಡ ಇಂಥಹ ಕೃತ್ಯ ಎಸಗದಿರಿ” ಎಂಬುದಾಗಿ ದರ್ಶನ್ ಅಭಿಮಾನಿಗಳಿಗೆ ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ಸಂದೇಶ ರವಾನಿಸಿದ್ದಾರೆ. ನನ್ನ ಹೆಸರು ಹಾಳು ಮಾಡುತ್ತಿದ್ದಾರೆ.  ಸಿಎಂ ವಿರುದ್ಧ ನನ್ನನ್ನು ಎತ್ತಿ ಕಟ್ಟುವ ಉದ್ದೇಶದಿಂದ ಈ ರೀತಿ ಕಿಡಿಗೇಡಿಗಳು ನಡೆಸುತ್ತಿದ್ದಾರೆ ಎಂದು ದರ್ಶನ್​ ಹೇಳಿದ್ದಾರೆ.

ದರ್ಶನ್ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿದ್ದು, ಇದರಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. `ಈ ಸಲ ಕಪ್ಪು ನಮ್ದೆ ಕಪ್ಪು ನಮ್ದೆ ಅಂತಿದ್ದವರು, ಆ ಕಪ್ಪು ಇದು ಅಂತ ಹೇಳೋಕೇನಾಗಿತ್ರೋ’ ಎಂದು ಕುಮಾರಸ್ವಾಮಿ ಅವರನ್ನು ಟಾರ್ಗೇಟ್ ಮಾಡಿ ಪೋಸ್ಟ್ ಹಾಕಲಾಗಿತ್ತು.

 

 

Please follow and like us:
0
http://bp9news.com/wp-content/uploads/2018/06/maxresdefault-12-1024x576.jpghttp://bp9news.com/wp-content/uploads/2018/06/maxresdefault-12-150x150.jpgBP9 Bureauಪ್ರಮುಖಸಿನಿಮಾಯಾರೋ ಕಿಡಿಗೇಡಿಗಳು ತನ್ನ ಹೆಸರನ್ನು ಹಾಳು ಮಾಡುತ್ತಿರುವ ಬಗ್ಗೆ ಎಚ್ಚೆತ್ತುಕೊಂಡ ಚಾಲೆಂಜಿಂಗ್ ಸ್ಟಾರ್​ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಕಿಡಿಗೇಡಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಟ ದರ್ಶನ್​ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ತೆರೆದು ಕಿಡಿಗೇಡಿಗಳು ಆ ಮೂಲಕ ಹೆಚ್​ಡಿಕೆಗೆ ಸರಣಿ ಟ್ವೀಟ್​ಗಳನ್ನು ಕಳುಹಿಹಿಸಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ದರ್ಶನ್​  ತನ್ ರಿಯಲ್​ ಫೇಸ್​ಬುಕ್​ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. var domain = (window.location != window.parent.location)? document.referrer :...Kannada News Portal