ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ಹೆಸರನ್ನು ಬಳಸಿಕೊಂಡು, ಅವರ ಆಪ್ತ ಕಾರ್ಯದರ್ಶಿ  ಮಲ್ಲಿಕಾರ್ಜುನ್​ ಎಂಬುವವರು  10 ಕೋಟಿ  ರೂ. ಸಾಲ ಮಾಡಿ ಎಸ್ಕೇಪ್​​ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಟಾರ್​ ನೇಮ್​ ಬಳಸಿಕೊಂಡು ಮಹಾ ಮೋಸ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಲ್ಲಿ ಅಲಿಯಾಸ್​ ಮಲ್ಲಿಕಾರ್ಜುನ್​ ಬಿ. ಸುಂಕನಗೌಡರ್​ ನಾಪತ್ತೆಯಾದ  ಸಹಾಯಕ ಕಾರ್ಯದರ್ಶಿ.   ಮಲ್ಲಿ ಕಾರ್ಜುನ್​, ನಟ ದರ್ಶನ್​ ಅವರ ಪರ್ಸನಲ್​ ಸೆಕ್ರೆಟರಿಯಾಗಿ ಅನೇಕ ವರ್ಷಗಳಿಂದ  ಕೆಲಸ ಮಾಡುತ್ತಿದ್ದರು. ದರ್ಶನ್​ ಅವರನ್ನು  ನೋಡಬೇಂದರೆ ಮೊದಲು ದರ್ಶನ್​ ಅವರ ಆಪ್ತ ಕಾರ್ಯದರ್ಶಿಯಾಗಿದ್ದ  ಮಲ್ಲುಅ ವರನ್ನು ಸಂಪರ್ಕಿಸ ಬೇಕಾಗಿತ್ತು. ಅಲ್ಲದೇ  ದರ್ಶನ್​ ಅವರ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.  ಅಲ್ಲದೇ ಸಿನಿಮಾ ಕೆಲಸಗಳು ಏನಿದ್ದರೂ ಇವರನ್ನೇ ಮೊದಲು ನೋಡಬೇಕಿತ್ತು. ಆದರೆ  ಕೆಲ ವರ್ಷಗಳಿಂದ ಚಾಲೆಂಜಿಂಗ್​ ಸ್ಟಾರ್​ ಫೋನ್​ಗೂ ಸಿಗುತ್ತಿಲ್ಲವಂತೆ.  ದರ್ಶನ್ಅ ವರ ಸಂಪರ್ಕದಿಂದಲೂ ಅವರು ದೂರವಾಗಿದ್ದರಂತೆ. ಆದರೆ ಈಗ ದರ್ಶನ್​ ಹೆಸರಿನಲ್ಲಿ  ದೋಖಾವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.

ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ನಾನು ಮತ್ತು ಮಲ್ಲಿಕಾರ್ಜುನ್​ ಅವರು ಮೊದಲಿನಿಂದಲೂ ಅಸಿಸ್ಟೆಂಟ್​ ನಿರ್ದೇಶಕರುಗಳಾಗಿ ಕೆಲಸ ಮಾಡಿದ್ದೆವು. ಆ ನಂತರ ದರ್ಶನ್​ಗೆ ನಾನೇ ಮೊದಲು ಪರಿಚಯ ಮಾಡಿಕೊಟ್ಟೆ.  ಆ ನಂತರ ದರ್ಶನಿಗೆ  ಮಲ್ಲು  ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಮಲ್ಲು ಅವರು  ನಮಗಂತೂ ಮೋಸ ಮಾಡಿಲ್ಲ. ಹೌದು ಅವರಿಗೆ ಸಾಲ ಇದೆ. ಆದರೆ ಆತ ದರ್ಶನ್ ಹೆಸರನ್ನು ಬಳಸಿಕೊಂಡು ಸಾಲ ಮಾಡಿದ್ದಾನೆ ಎಂದರೆ ನಿಜಕ್ಕೂ ನಂಬುವುದಕ್ಕೆ ಆಗುವುದಿಲ್ಲ. ಇದೆಲ್ಲಾ  ಸುಳ್ಳು ಆರೋಪಗಳು. ಅವರಿಗೆ ಕಮೀಟ್​ಮೆಂಟ್​ ಇದೆ, ಆ ಬಗ್ಗೆ ಒಂದಷ್ಟು ಹೇಳಿಕೊಂಡಿದ್ದರು. ನಾನು ಅವರಿಗೆ ಧೈರ್ಯ ಹೇಳಿದ್ದೇನೆ. ಆದರೆ ಮೋಸ ಮಾಡುವ  ವ್ಯಕ್ತಿ ಅಲ್ಲ ಅವರು. 15 ವರ್ಷಗಳಿಂದ ನಮ್ಮೊಂದಿಗೆ ಇದ್ದರು. ಕೆಲ ದಿನಗಳಿಂದ ನನ್ನ ಕಾಂಟಾಕ್ಟ್​ಗೂ ಸಿಗುತ್ತಿಲ್ಲ. ಅವರ ಮನೆಯವರಿಗೂ ನಾನು ಸಂಪರ್ಕಿಸಿದೆ. ಅವರಿಗೂ ಮಲ್ಲು  ಸುಳಿವು ಸಿಗುತ್ತಿಲ್ಲ. ಎಂದು ದರ್ಶನ್​ ಸಹೋದರ ದಿನಕರ್​ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/darshan-1.jpghttp://bp9news.com/wp-content/uploads/2018/07/darshan-1-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ಹೆಸರನ್ನು ಬಳಸಿಕೊಂಡು, ಅವರ ಆಪ್ತ ಕಾರ್ಯದರ್ಶಿ  ಮಲ್ಲಿಕಾರ್ಜುನ್​ ಎಂಬುವವರು  10 ಕೋಟಿ  ರೂ. ಸಾಲ ಮಾಡಿ ಎಸ್ಕೇಪ್​​ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಟಾರ್​ ನೇಮ್​ ಬಳಸಿಕೊಂಡು ಮಹಾ ಮೋಸ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal