ಸಿನಿಟಾಕ್​ :  ಅನೇಕ ಕಾರ್ಯಕ್ರಮಗಳ ಮೂಲಕ ಸಿನಿಮಾ ಪ್ರಮೋಟ್​  ಮಾಡುವುದನ್ನು  ನೋಡಿದ್ದೇವೆ. ಇತ್ತೀಚಿಗಂತೂ ಸಿನಿಮಾ ಪ್ರಮೋಷನ್​  ಜೋರಾಗಿಯೇ ನಡೆಯುತ್ತಿದೆ. ಟೆಲಿವಿಷನ್​ ಮಿಡಿಯಾ ಮೂಲಕ, ಸಾಮಜಿಕ ಜಾಲತಾಣಗಳ ಮೂಲಕ ಸಿನಿಮಾ ಪ್ರಚಾರ ಮಾಡುವುದನ್ನು ನೋಡಿದ್ದೇವೆ. ಇದೀಗ ಬಾಲಿವುಡ್​ ನಟರೊಬ್ಬರು ತಮ್ಮದೇ ಡಿಫರೆಂಟ್​ ಸ್ಟೈಲ್​ನಲ್ಲಿಯೇ ಸಿನಿಮಾ ಕ್ಯಾಂಪೇನ್​ ಮಾಡಿರುವ ವಿಡಿಯೋ ಅಪ್​ಲೋಡ್​ದ್ದಾರೆ.

ನಟಿ ಅನುಷ್ಕಾ ಹಾಗೂ ವರುಣ್​ ಧವನ್​ ಅವರ ಬಹು ನಿರೀಕ್ಷಿತ ಸಿನಿಮಾ ‘ಸೂಯಿಧಾಗ’. ಈ ಸಿನಿಮಾದ ಪ್ರಚಾರಕ್ಕೆ ನಟ ವರುಣ್​ ಈಗಾಗಲೇ ಚಾಲನೆ ನೀಡಿದ್ದಾರೆ. ಅದು ಕೂಡ ಒಂದು ವಿಭಿನ್ನ ರೀತಿಯಲ್ಲಿ. ಸೈಕಲ್​ ತುಳಿಯುತ್ತಾ ಬರುವ ವರುಣ್​, ಭಾರತ್​ ಸಲೂನ್​ನಲ್ಲಿ ಶೇವ್​ ಮಾಡಿಸಿಕೊಂಡು ತಮ್ಮ ಸಿನಿಮಾ ‘ಸೂಯಿ ಧಾಗ’ದ ಪ್ರಚಾರ ಮಾಡುತ್ತಾರೆ.

 

ಹೌದು ಈಗ ಸಿನಿಮಾ ಪೋಸ್ಟರ್​, ಟೀಸರ್​, ಟ್ರೇಲರ್​ ಹಾಗೂ ಫಸ್ಟ್​ಲುಕ್​ ಬಿಡುಗಡೆಯನ್ನು ಆದಷ್ಟು ಸಾಮಾಜಿಕ ಜಾಲತಾಣಗಳಲ್ಲೇ ಮಾಡಲಾಗುತ್ತಿದೆ. ಅದಲ್ಲೂ ಯುವ ನಟರು ಈಗ ತಮ್ಮ ಸಿನಿಮಾಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​, ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಗಳ ಮೂಲಕವೇ ಆರಂಭಿಸುತ್ತಿದ್ದಾರೆ. ಇದಕ್ಕೆ ಬಾಲಿವುಡ್​ ನಟ ವರುಣ್​ ಧವನ್​ ಹೊರತಾಗಿಲ್ಲ. ವರುಣ್​ ಕಟಿಂಗ್​ ಌಶಾಪ್​ವೊಂದರಲ್ಲಿ ಕುಳಿತು  ಗಡ್ಡ ತೆಗೆಸಿ ತಮ್ಮ ಸಿನಿಮಾ  ಪ್ರಮೋಟ್​ ಮಾಡಿದ್ದಾರೆ. ಅಲ್ಲನ  ಹುಡುಗರ ಜೊತೆ ಸೆಲ್ಫಿ ತೆಗೆಸಿಕೊಂಡು ಹೊರ ಬಂದ ದವನ್​, ಸೈಕಲ್​ ತುಳಿದುಕೊಂಡು ರಸ್ತೆಯಲ್ಲಿ ತಿರುಗಾಡುವುದರ ಮೂಲಕ ತಮ್ಮ ಫಿಲ್ಮ್​ ಕ್ಯಾಂಪೇನ್​ ಮಾಡಲು ಹೊಸ ದಾರಿ ಹಿಡಿದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ವರುಣ್​ ಮೌಜಿ ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ಮೌಜಿಯ ಮೀಸೆ ಮೇಡ್​ ಇನ್​ ಇಂಡಿಯಾ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ ವರುಣ್​.

Please follow and like us:
0
http://bp9news.com/wp-content/uploads/2018/06/gallery_bollywood_varun_dhawan.jpghttp://bp9news.com/wp-content/uploads/2018/06/gallery_bollywood_varun_dhawan-150x150.jpgBP9 Bureauಸಿನಿಮಾಸಿನಿಟಾಕ್​ :  ಅನೇಕ ಕಾರ್ಯಕ್ರಮಗಳ ಮೂಲಕ ಸಿನಿಮಾ ಪ್ರಮೋಟ್​  ಮಾಡುವುದನ್ನು  ನೋಡಿದ್ದೇವೆ. ಇತ್ತೀಚಿಗಂತೂ ಸಿನಿಮಾ ಪ್ರಮೋಷನ್​  ಜೋರಾಗಿಯೇ ನಡೆಯುತ್ತಿದೆ. ಟೆಲಿವಿಷನ್​ ಮಿಡಿಯಾ ಮೂಲಕ, ಸಾಮಜಿಕ ಜಾಲತಾಣಗಳ ಮೂಲಕ ಸಿನಿಮಾ ಪ್ರಚಾರ ಮಾಡುವುದನ್ನು ನೋಡಿದ್ದೇವೆ. ಇದೀಗ ಬಾಲಿವುಡ್​ ನಟರೊಬ್ಬರು ತಮ್ಮದೇ ಡಿಫರೆಂಟ್​ ಸ್ಟೈಲ್​ನಲ್ಲಿಯೇ ಸಿನಿಮಾ ಕ್ಯಾಂಪೇನ್​ ಮಾಡಿರುವ ವಿಡಿಯೋ ಅಪ್​ಲೋಡ್​ದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal