ಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ  ಬಾಲಿವುಡ್​ನಟಿ ಅಲಿಯಾ ಭಟ್​ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ.

ಹೌದು ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಅಲಿಯಾ ಭಟ್​ರಿಂದ ವಿದ್ಯುತ್​ ದೊರೆತಿದೆ. ಇದೇ ವರ್ಷ ಆರಂಭವಾದ ಮಿ. ವಾರ್ಡ್​ ರೋಬ್​ ಈಸ್​ ಸು ವಾರ್ಡ್​ ರೋಬ್​’ ಸ್ಟೈಲ್ಕ್ರಾಕರ್​ ನೈಟ್​  ಮಾರ್ಕೆಟ್​ನಲ್ಲಿ ನಡೆಸಲಾದ ಅಭಿಯಾನದ ಕಾರ್ಯಕ್ರಮದಲ್ಲಿ ಅಲಿಯಾ ಭಟ್​ ತಮ್ಮ ಒಂದು ವಿಶೇಷವಾದ ಬಟ್ಟೆಯನ್ನು ಪ್ರದರ್ಶನಕ್ಕಿಟ್ಟು  ಮಾರಾಟ  ಮಾಡಿದ್ದಾರೆ.

ಬೆಂಗಳೂರು ಮೂಲದ ಎಆರ್ ಓಎಚ್‍ಎ ಸಂಸ್ಥೆಯೊಂದು ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದು ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ಬಳಿಕ ಅದರಿಂದ ವಿದ್ಯುತ್ ಇಲ್ಲದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

ಈ ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮದಡಿಯಲ್ಲಿ ಚಾರಿಟಿಗಾಗಿ ಆಲಿಯಾ ಭಟ್ ಅವರನ್ನ ಸಂಪರ್ಕಿಸಿದೆ. ಆಗ ಆಲಿಯಾ ಭಟ್ ಮಾರಾಟಕ್ಕಿಟ್ಟಿದ್ದ ಬಟ್ಟೆಯಿಂದ ಬಂದ ಹಣವನ್ನು ಈ ಸಂಸ್ಥೆಗೆ ನೀಡಿದ್ದಾರೆ. ಅವರು ನೀಡಿದ ಹಣದಿಂದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

ಈ ಯೋಜನೆಯ ಬಗ್ಗೆ ಮಾತನಾಡಿದ ಅಲಿಯಾ, “ಭಾರತದಲ್ಲಿ ಅನೇಕ ಕುಟುಂಬಗಳು ಕತ್ತಲೆಯಲ್ಲಿ ಜೀವಿಸುತ್ತಿವೆ. ಅವರಿಗೆ ಮನೆಗಳನ್ನು ಬೆಳಗಿಸಲು ಹೊಸ ಮತ್ತು ಸಮರ್ಥನೀಯ ಮಾರ್ಗ ಇದಾಗಿದ್ದು, ಪರಿಸರ ಸ್ನೇಹಿ ಸೌರ ದೀಪಗಳಾಗಿವೆ. ಈ ಸಂಸ್ಥೆ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಸಮುದಾಯದವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ಕಿಕ್ಕೇರಿ ಗ್ರಾಮದ 200 ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

ಆಲಿಯಾ ಭಟ್ ಇತ್ತೀಚೆಗೆ ಮೇಘನಾ ಗುಲ್ಜಾರ್ ಅವರ `ರಾಜಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಣವೀರ್ ಸಿಂಗ್ ಅಭಿನಯದ `ಜೊಯಾ ಅಖ್ತರ್ ಗಲ್ಲಿ ಬಾಯ್’ ನಲ್ಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಅಯನ್ ಮುಖರ್ಜಿಯವರ `ಬ್ರಹ್ಮಸ್ತರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಮೌನಿ ರಾಯ್, ಅಮಿತಾಬ್ ಬಚ್ಚನ್, ಕಲಾಂಕ್, ವರುಣ್ ಧವನ್, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಸೇರಿದಂತೆ ತಾರಾ ಬಳಗವಿದೆ. ಅಲಿಯಾ ಮತ್ತು ರಣಬೀರ್​ ನಡುವೆ ಪ್ರೀತಿ ಬೆಳೆಯುತ್ತಿದ್ದು ಸದ್ಯ ಬಿ ಟೌನ್​ನಲ್ಲಿ ಹಾಟ್​ ನ್ಯೂಸ್​ ಆಗಿದ್ದಾರೆ.

Please follow and like us:
0
http://bp9news.com/wp-content/uploads/2018/07/dc-Cover-f6liqjoo57osqv0ne05ln471a6-20180710230829.Medi_.jpeghttp://bp9news.com/wp-content/uploads/2018/07/dc-Cover-f6liqjoo57osqv0ne05ln471a6-20180710230829.Medi_-150x150.jpegBP9 Bureauಸಿನಿಮಾಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ  ಬಾಲಿವುಡ್​ನಟಿ ಅಲಿಯಾ ಭಟ್​ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180630120129'); document.getElementById('div_1520180630120129').appendChild(scpt); ಹೌದು ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ...Kannada News Portal