ಕೇರಳ :  ಮಲಯಾಳಂ ನ ಖ್ಯಾತ ನಟಿ ಮೇಘಾ ಮ್ಯಾಥ್ಯೂ  ಕಾರು ಅಪಘಾತದಲ್ಲಿ ಸಿಲುಕಿ ಹಾಕಿಕೊಂಡು ನರಳಾಡುತ್ತಿದ್ದ ಘಟನೆ  ಕೇರಳದಲ್ಲಿ ನಡೆದಿದೆ. ಕೊಚ್ಚಿಯಿಂದ ವಾಪಸ್ಸ್​ ಆಗುವ ವೇಳೆ ಎರ್ನಾಕುಲಂ ಬಳಿ ಅಪಘಾತಕ್ಕೀಡಾಗಿ ಕೂದಲೆಳೆಯ ಅಪಾಯದಿಂದ ಪಾರಾಗಿದ್ದಾರೆ. ದುರಂತವೆಂದರೆ ನಟಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಕಂಡು ಕಾಣದಂತೆ ಸಾರ್ವಜನಿಕರು ನೋಡುತ್ತಿದ್ದುದ್ದು ವಿಪರ್ಯಾಸ.

ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು,  ಮೇಘಾ ಅವರು ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್​ ಏರ್​ ಬ್ಯಾಗ್ ಸೇಫ್ಟಿ ಇದ್ದುದ್ದರಿಂದ ಮೇಘಾ ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಸ್ತೆಯಲ್ಲಿ ಅಪಘಾತಕ್ಕೀಡಾಗಿ ನರಳುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಾರಲೇ ಇಲ್ಲ. ಆಶ್ಚರ್ಯ ಅಂದ್ರೆ ಸುಮಾರು ಹೊತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಟಿ ಸಾವನ್ನಪ್ಪಿದ್ದಾರೆ ಎಂದು ಜನ ಭಾವಿಸಿದರು. ಆದರು ಹತ್ತಿರಕ್ಕೆ ಬಂದು ನೋಡುವ ಧೈರ್ಯವನ್ನು ಸಾರ್ವಜನಿಕರು ಮಾಡದೇ ಇದ್ದುದ್ದು ಅಚ್ಚರಿ.  ಆ ನಂತರ ಪ್ರಜ್ಞೆ ಬಂದ್ರೂ ಕೂಡ ಯಾರೂ ನೆರವಿಗೆ ಧಾವಿಸದೇ ಅಮಾನವೀಯತೆ  ತೋರಿದ್ದಾರೆ.

ಇದಾದ  ಸುಮಾರು ಸಮಯದ ಬಳಿಕ ಫೋಟೋಗ್ರಾಫರ್​ ಒಬ್ಬರು ನಟಿಯನ್ನ ಆಸ್ಪತ್ರೆಗೆ   ಸಾಗಿಸಿಮಾನವೀಯತೆ ಮೆರೆದಿದ್ದಾರೆ. ಸಹೋದರನ ನಿಶ್ಚಿತಾರ್ಥಕ್ಕೆಂದು ಕೊಚ್ಚಿಯಲ್ಲಿರೋ ತನ್ನ ಫ್ಲಾಟ್ ನಿಂದ ಮೇಘಾ ಸೋದರನ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/06/aanandam-oru-mexican-aparatha-actress-megha-mathew-pics-64605-1.jpghttp://bp9news.com/wp-content/uploads/2018/06/aanandam-oru-mexican-aparatha-actress-megha-mathew-pics-64605-1-150x150.jpgBP9 Bureauಪ್ರಮುಖಸಿನಿಮಾಕೇರಳ :  ಮಲಯಾಳಂ ನ ಖ್ಯಾತ ನಟಿ ಮೇಘಾ ಮ್ಯಾಥ್ಯೂ  ಕಾರು ಅಪಘಾತದಲ್ಲಿ ಸಿಲುಕಿ ಹಾಕಿಕೊಂಡು ನರಳಾಡುತ್ತಿದ್ದ ಘಟನೆ  ಕೇರಳದಲ್ಲಿ ನಡೆದಿದೆ. ಕೊಚ್ಚಿಯಿಂದ ವಾಪಸ್ಸ್​ ಆಗುವ ವೇಳೆ ಎರ್ನಾಕುಲಂ ಬಳಿ ಅಪಘಾತಕ್ಕೀಡಾಗಿ ಕೂದಲೆಳೆಯ ಅಪಾಯದಿಂದ ಪಾರಾಗಿದ್ದಾರೆ. ದುರಂತವೆಂದರೆ ನಟಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಕಂಡು ಕಾಣದಂತೆ ಸಾರ್ವಜನಿಕರು ನೋಡುತ್ತಿದ್ದುದ್ದು ವಿಪರ್ಯಾಸ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal