ಲಕ್ನೋ: ಶೂಟಿಂಗ್​ಗೆಂದು  ತೆರಳುತ್ತಿದ್ದ ಸಂದರ್ಭದಲ್ಲಿ  ನಟಿಯೊಬ್ಬರು ಅಪಘಾತಕ್ಕೀಡಾಗಿ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ.

 ಸಿನಿಮಾ ಚಿತ್ರೀಕರಣ ಇದ್ದುದ್ದರಿಂದ  ಭೋಜ್​ಪುರಿ ನಟಿ ಮನಿಶಾ  ರೈ (45) ತಮ್ಮ ಬೈಕಿನಲ್ಲಿ ಅಸೋಸಿಯೇಟ್​ ಸಂಜೀವ್​ ಮಿಶ್ರಾ   ಜೊತೆ ತೆರಳುತ್ತಿದ್ದರು. ಈ ವೇಳೆ  ಎದುರಿನಿಂದ ಬಂದ  ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ  ಮನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ  ಸಂಜೀವ್​​ರನ್ನು​ ಆಸ್ಪತ್ರೆಗೆ ದಾಖಲು ಮಾಡಿರುವ  ಘಟನೆ  ಉ.ಪ್ರ. ಚಿಟ್ಟೌನಿ ಗ್ರಾಮದಲ್ಲಿ ನಡೆದಿದೆ. ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಸದ್ಯ ಮನೀಶಾ ರೈ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಮನೀಶಾ ರೈ ಕಿರುಚಿತ್ರದ ನಾಯಕಿಯಾಗಿದ್ದು, ಕೋಬರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಕೆಲ  ಸಾಕ್ಷ್ಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/05/Manisha-Rai-2.jpghttp://bp9news.com/wp-content/uploads/2018/05/Manisha-Rai-2-150x150.jpgBP9 Bureauಪ್ರಮುಖಸಿನಿಮಾಲಕ್ನೋ: ಶೂಟಿಂಗ್​ಗೆಂದು  ತೆರಳುತ್ತಿದ್ದ ಸಂದರ್ಭದಲ್ಲಿ  ನಟಿಯೊಬ್ಬರು ಅಪಘಾತಕ್ಕೀಡಾಗಿ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ.  ಸಿನಿಮಾ ಚಿತ್ರೀಕರಣ ಇದ್ದುದ್ದರಿಂದ  ಭೋಜ್​ಪುರಿ ನಟಿ ಮನಿಶಾ  ರೈ (45) ತಮ್ಮ ಬೈಕಿನಲ್ಲಿ ಅಸೋಸಿಯೇಟ್​ ಸಂಜೀವ್​ ಮಿಶ್ರಾ   ಜೊತೆ ತೆರಳುತ್ತಿದ್ದರು. ಈ ವೇಳೆ  ಎದುರಿನಿಂದ ಬಂದ  ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ  ಮನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ  ಸಂಜೀವ್​​ರನ್ನು​ ಆಸ್ಪತ್ರೆಗೆ ದಾಖಲು ಮಾಡಿರುವ  ಘಟನೆ  ಉ.ಪ್ರ. ಚಿಟ್ಟೌನಿ ಗ್ರಾಮದಲ್ಲಿ ನಡೆದಿದೆ. ಕಾರಿನ...Kannada News Portal