ಈಗ ಏನಿದ್ದರೂ ಮೊಬೈಲ್ ಜಮಾನ. ಸಾಮಾಜಿಕ ಜಾಲತಾಣಗಲ್ಲಿ ಹೆಚ್ಚು ಜನರು ಮುಳಗಿ ಹೋಗಿರುತ್ತಾರೆ. ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಹೀಗೆ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ.  ಎಲ್ಲೋ ಸಾಮಾಜಿಕ ವಲಯದಿಂದ ದೂರವಿದ್ದ ವ್ಯಕ್ತಿ ಕೆಲವೊಮ್ಮೆ ರಾತ್ರೋ ರಾತ್ರಿ  ಸುದ್ದಿಯಾಗಿಬಿಡುತ್ತಾರೆ. ಸೆಲೆಬ್ರಿಟಿಗಳಾಗಿ ಬಿಡುತ್ತಾರೆ. ಅವರನ್ನೇನು ಸಂದರ್ಶನ ಮಾಡಬೇಕೆಂದಿಲ್ಲ. ಒಂದು ವ್ಯಾಟ್ಸ್​ಅಪ್​ ಅಥವಾ ಫೇಸ್​ಬುಕ್​ ಇದ್ರೆ ಸಾಕು.  ಅವರ ಒಂದು ಆ್ಯಕ್ಟ್​, ಸಾಂಗ್​  ಕಣ್ಣೋಟದ ಮೂಲಕವೇ ಜಗತ್ಪ್ರಸಿದ್ಧಿ ಆಗಿ ಬಿಡುತ್ತಾರೆ.

ಫೇಸ್​ಬುಕ್​ ಟ್ವಿಟ್ಟರ್​ ಅಂತಿದ್ದ ಸೆಲೆಬ್ರಿಟಿಗಳು ಸದ್ಯ ಇನ್ಸ್​ ಟ್ರಾಗ್ರಾಂ ನಲ್ಲಿ ಸುದ್ದಿಯಾಗುತ್ತಿದ್ದಾರೆ. ತಮ್ಮೊಂದಿಗೆ ತಮ್ಮ ಫ್ಯಾಮಿಲಿ, ಮಕ್ಕಳನ್ನು ಸೆಲೆಬ್ರಿಟಿಗಳಾಗಿಸೋದು ಕೂಡ ಇತ್ತೀಚೆಗೆ ಸಾಮನ್ಯವಾಗಿ ಬಿಟ್ಟಿದೆ. ಉದಾಹರಣೆಗೆ ಬಾಲಿವುಡ್​ ಕಿಂಗ್​ಖಾನ್​ ಶಾರುಖ್​ ಪತ್ನಿ ಗೌರಿ ಖಾನ್​ , ತಮ್ಮ ಮಗಳ ಫೋಟೋವನ್ನು ಇನ್​ಸ್ಟಾಗ್ರಾಂ ನ ಲ್ಲಿ ಅಪ್​ಲೋಡ್​ ಮಾಡುವ ಮೂಲಕ ಸುಹಾನ  ಫಾಲೋಯರ್ಸ್ ಸಂಖ್ಯೆಯನ್ನು ​ ಹೆಚ್ಚು ಮಾಡಿದ್ದಾರೆ. ಸದ್ಯ ಎಲ್ಲರಿಗಿಂತ ಮುಂದಿರುವುದು ಅಂದರೆ ಬಾಲಿವುಡ್​ ಪಿಗ್ಗಿ.  ಕೆಲ ದಿನಗಳ ಹಿಂದಷ್ಟೇ ಐಶ್ವರ್ಯ ರೈ ಇನ್​ಸ್ಟಗ್ರಾಂನಲ್ಲಿ ಹೊಸ ಖಾತೆ ತೆರೆದರು. ಅವರು ಈ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುತ್ತಿಲ್ಲವೆನ್ನುವುದೇ ದೊಡ್ಡ ಸುದ್ದಿಯಾಗಿತ್ತು. ನಂತರ ಕನ್ನಡದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಇನ್ಸ್​ಟ್ರಾಗ್ರಾಂ ಖಾತೆ ಹೊಂದಿಲ್ಲದೇ ಇದ್ದುದ್ದಕ್ಕೆ ಫೇಸ್ಬುಕ್​ ನಲ್ಲಿ ಖಾತೆ ತೆರೆದು ಅಭಿಮಾನಿಯೊಬ್ಬ ಪೇಚಿಗೆ ಸಿಕ್ಕಿದ್ದ ಘಟನೆಯನ್ನು ನೋಡಿದ್ದೇವೆ. ಇರಲೀ ಬಿಡಿ.

ಆದರೆ  ಪಿಗ್ಗಿ ಅಲಿಯಾಸ್​ ಪ್ರಿಯಾಂಕಾ ಚೋಪ್ರಾ ಅವರ ಇನ್​ಸ್ಟಾಗ್ರಾಂ ಖಾತೆ ಕಡೆ ವಾಲಿರೋರ ಸಂಖ್ಯೆ ಎರಡೂವರೆ ಕೋಟಿ ದಾಟಿದೆಯಂತೆ. ಹೌದು ಅವರ ಹಿಂಬಾಲಕರ ಸಂಖ್ಯೆ 25 ಮಿಲಿಯನ್​ ಆಗಿದೆ.

ಈ ನಟಿ ಹೀಗೆ ಎರಡೂವರೆ ಕೋಟಿ ಹಿಂಬಾಲಕರನ್ನು ಹೊಂದಿರೋದರಲ್ಲಿ ವಿಶೇಷತೆ ಏನಿದೆ ಅಂದ್ರಾ ? ಹಲೋ, ಬಾಸ್ ಇಲ್ಲಿ ಕೇಳಿ ಹೇಳುತ್ತೇವೆ. ಅಂಥ ಅಮಿತಾಭ್​ ಬಚ್ಚನ್‍ ಅವರಿಗೆ ಒಂದು ಕೋಟಿ ಹಿಂಬಾಲಕರಿದ್ದಾರೆ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‍ಗೆ ಎರಡು ಕೋಟಿ 20 ಲಕ್ಷ ಹಿಂಬಾಲಕರಿದ್ದಾರೆ, ಅದು ಬಿಡಿ ಪ್ರಧಾನಿ ಮೋದಿ ಅವರನ್ನ ಒಂದು ಕೋಟಿ 30 ಲಕ್ಷದ ಜನ ಫಾಲೋ ಮಾಡುತ್ತಾರಷ್ಟೆ.

ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ಸ್​ಟ್ರಾಗ್ರಾಂ ಮೂಲಕ ಫೋಟೋಗಳು, ವಿಡಿಯೋಗಳ ಅಪ್​ಲೋಡ್​ ಮಾಡಿ  ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

Please follow and like us:
0
http://bp9news.com/wp-content/uploads/2018/07/Priyanka-Chopra-AV-1-1.jpghttp://bp9news.com/wp-content/uploads/2018/07/Priyanka-Chopra-AV-1-1-150x150.jpgBP9 Bureauಪ್ರಮುಖಸಿನಿಮಾಈಗ ಏನಿದ್ದರೂ ಮೊಬೈಲ್ ಜಮಾನ. ಸಾಮಾಜಿಕ ಜಾಲತಾಣಗಲ್ಲಿ ಹೆಚ್ಚು ಜನರು ಮುಳಗಿ ಹೋಗಿರುತ್ತಾರೆ. ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಹೀಗೆ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ.  ಎಲ್ಲೋ ಸಾಮಾಜಿಕ ವಲಯದಿಂದ ದೂರವಿದ್ದ ವ್ಯಕ್ತಿ ಕೆಲವೊಮ್ಮೆ ರಾತ್ರೋ ರಾತ್ರಿ  ಸುದ್ದಿಯಾಗಿಬಿಡುತ್ತಾರೆ. ಸೆಲೆಬ್ರಿಟಿಗಳಾಗಿ ಬಿಡುತ್ತಾರೆ. ಅವರನ್ನೇನು ಸಂದರ್ಶನ ಮಾಡಬೇಕೆಂದಿಲ್ಲ. ಒಂದು ವ್ಯಾಟ್ಸ್​ಅಪ್​ ಅಥವಾ ಫೇಸ್​ಬುಕ್​ ಇದ್ರೆ ಸಾಕು.  ಅವರ ಒಂದು ಆ್ಯಕ್ಟ್​, ಸಾಂಗ್​  ಕಣ್ಣೋಟದ ಮೂಲಕವೇ ಜಗತ್ಪ್ರಸಿದ್ಧಿ ಆಗಿ ಬಿಡುತ್ತಾರೆ. var domain...Kannada News Portal