ಬೆಂಗಳೂರು : ನಾನು, ಖರ್ಗೆ ಮತ್ತು ಪರಮೇಶ್ವರ್ ಒಂದಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಒಡಕು ಇಲ್ಲ. ಮೊದಲು ಅವರ ಪಕ್ಷದ ಆಂತರಿಕ ಭಿನ್ನಮತ ಜಗಜ್ಜಾಹೀರಾಗಿದೆ ಅದನ್ನು ನೋಡಿಕೊಳ್ಳಲಿ ಯಡಿಯೂರಪ್ಪ ಎಂದ ಅವರು, ಬಿಎಸ್ವೈ ಮಾಡಿದ್ದ ನೀವು ಮೂವರು ಒಂದಾಗಿ ಪ್ರಚಾರ ಮಾಡಲಿ ಎಂಬ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಗದಗದ ನರಗುಂದದಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಷದ ಪರ ಪ್ರಚಾರ ಕಾರ್ಯಕ್ರಮದ ಬೃಹತ್ ವೇದಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದ್ದು, ಪ್ರಧಾನಿ ಮೋದಿ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ.

ಮೋದಿಯವರೇ ನಿಮ್ಮ ನಾಟಕದಿಂದ ಜನ ಸಾಕಾಗಿದ್ದಾರೆ. ಮೋದಿ ಮಾತು ಕೇಳಿ ಬಿಜೆಪಿಗೆ ಮತ ನೀಡಬೇಡಿ ಎಂದ ಅವರು, ಜೈಲಿಗೆ ಹೋಗಿ ಬಂದ ಅಲಿಬಾಬ ಮತ್ತು 40 ಜನ ಕಳ್ಳರು ಇದೀಗ ಒಂದಾಗಿದ್ದಾರೆ ಅವರಿ ಏಕೆ ವೋಟು ಹಾಕುತ್ತೀರಿ ಎಂದು ನಗೆ ಚಟಾಕಿ ಹಾರಿಸಿದ ಸಿಎಂ, ಕೇಂದ್ರ ಸರ್ಕಾರದ ಸಾಧನೆ ಹೇಳಿಕೊಂಡು ಮತ ಕೇಳಲಿ, ಅದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ನಿಂದ ಯಾವುದೇ ಚಕಾರ ಇಲ್ಲ. ಅದನ್ನು ಬಿಟ್ಟು ನಮ್ಮ ಮೇಲೆ ಇಲ್ಲ ಸಲ್ಲದ ಸುಳ್ಳು ಹೇಳಿಕೊಂಡು ಮತ ಭೇಟೆ ನಡೆಸುತ್ತಿರುವುದು ಖಂಡನೀಯ ಮತ್ತು ಸೋಚನೀಯ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

Please follow and like us:
0
http://bp9news.com/wp-content/uploads/2018/03/cm-1.jpghttp://bp9news.com/wp-content/uploads/2018/03/cm-1-150x150.jpgPolitical Bureauಗದಗಪ್ರಮುಖರಾಜಕೀಯAlibaba and 40 thieves join hands: Modi to speechಬೆಂಗಳೂರು : ನಾನು, ಖರ್ಗೆ ಮತ್ತು ಪರಮೇಶ್ವರ್ ಒಂದಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಒಡಕು ಇಲ್ಲ. ಮೊದಲು ಅವರ ಪಕ್ಷದ ಆಂತರಿಕ ಭಿನ್ನಮತ ಜಗಜ್ಜಾಹೀರಾಗಿದೆ ಅದನ್ನು ನೋಡಿಕೊಳ್ಳಲಿ ಯಡಿಯೂರಪ್ಪ ಎಂದ ಅವರು, ಬಿಎಸ್ವೈ ಮಾಡಿದ್ದ ನೀವು ಮೂವರು ಒಂದಾಗಿ ಪ್ರಚಾರ ಮಾಡಲಿ ಎಂಬ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಗದಗದ ನರಗುಂದದಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಷದ ಪರ ಪ್ರಚಾರ ಕಾರ್ಯಕ್ರಮದ ಬೃಹತ್ ವೇದಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದ್ದು, ಪ್ರಧಾನಿ ಮೋದಿ...Kannada News Portal