ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ ಅರ್ಜಿ ಸಲ್ಲಿಸಿದ ಎಲ್ಲಿರಿಗೂ ಉದ್ಯೋಗ ನೀಡಲಿದೆ. ರಾಜ್ಯ ಸರಕಾರ ಆಗಸ್ಟ್​ನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1,072 ತಜ್ಞ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ಈ ಅಧಿಸೂಚನೆಗೆ ಪ್ರತಿಕ್ರಿಯಿಸಿ, ಅರ್ಜಿ ಸಲ್ಲಿಸಿದವರ ಸಂಖ್ಯೆ 707. ಈಗ ಸರಕಾರಿ ನಿಯಮದಂತೆ ಅರ್ಜಿ ಸಲ್ಲಿಸಿದವರಿಗೆಲ್ಲ ಉದ್ಯೋಗ ಸಿಗಲಿದೆ.

ಈ ಬಗ್ಗೆ ಕೆಪಿಎಸ್​ಸಿ ಕಾರ್ಯದರ್ಶಿ ಪ್ರಸನ್ನಕುಮಾರ್​ ಮಾತನಾಡಿ, ಒಟ್ಟು ಹುದ್ದೆಗಳಿಗಿಂತ ತೀರಾ ಕಡಿಮೆ ಸಂಖ್ಯೆಯ ಅರ್ಜಿಗಳು ಬಂದಿವೆ. ಅನಸ್ತೇಸಿಯಾ, ಆರ್ಥೋಪೆಡಿಕ್​, ಇಎನ್​ಟಿ ಈ ಮೂರು ತಜ್ಞ ವೈದ್ಯ ಹುದ್ದೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ವಿಷಯಗಳಲ್ಲಿ ಕಡಿಮೆ ಅರ್ಜಿಗಳು ಬಂದಿವೆ.

476 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು 1,072 ತಜ್ಞ ವೈದ್ಯರ ಭರ್ತಿಗೆ ಕೆಪಿಎಸ್​ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಲು ಸೆ.25ರವರೆಗೆ ಕಾಲಾವಕಾಶ ನೀಡಿತ್ತು.

Please follow and like us:
0
http://bp9news.com/wp-content/uploads/2017/12/kpsc-04-1512387177.jpghttp://bp9news.com/wp-content/uploads/2017/12/kpsc-04-1512387177-150x150.jpgBP9ಉದ್ಯೋಗAll those who applied for KPSC are working to get it ?!,bangaloreಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ ಅರ್ಜಿ ಸಲ್ಲಿಸಿದ ಎಲ್ಲಿರಿಗೂ ಉದ್ಯೋಗ ನೀಡಲಿದೆ. ರಾಜ್ಯ ಸರಕಾರ ಆಗಸ್ಟ್​ನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1,072 ತಜ್ಞ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ಈ ಅಧಿಸೂಚನೆಗೆ ಪ್ರತಿಕ್ರಿಯಿಸಿ, ಅರ್ಜಿ ಸಲ್ಲಿಸಿದವರ ಸಂಖ್ಯೆ 707. ಈಗ ಸರಕಾರಿ ನಿಯಮದಂತೆ ಅರ್ಜಿ ಸಲ್ಲಿಸಿದವರಿಗೆಲ್ಲ ಉದ್ಯೋಗ ಸಿಗಲಿದೆ. ಈ ಬಗ್ಗೆ ಕೆಪಿಎಸ್​ಸಿ ಕಾರ್ಯದರ್ಶಿ ಪ್ರಸನ್ನಕುಮಾರ್​ ಮಾತನಾಡಿ, ಒಟ್ಟು ಹುದ್ದೆಗಳಿಗಿಂತ ತೀರಾ ಕಡಿಮೆ ಸಂಖ್ಯೆಯ ಅರ್ಜಿಗಳು ಬಂದಿವೆ....Kannada News Portal