ಬೆಂಗಳೂರು : ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಜೆಡಿಎಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರಮುಖ ಅಂಶಗಳು ಜಾರಿಗೆ ಬಂದಿದ್ದೇ ಆದಲ್ಲಿ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಎಸ್ಪಿ ಹಾಗೇ ವಿರೋಧ ಪಕ್ಷವಾದ ಬಿಜೆಪಿಗೆ ಈಗಲೇ ನಡುಕ ಆರಂಭವಾಗಿದೆ.

ಏಕೆಂದ್ರೆ ಒಂದು ವೇಳೆ ರೈತರ ಸಾಲ ಮನ್ನಾ ಮತ್ತು ವೃದ್ದಾಪ್ಯ ವೇತನ ಸೇರಿದಂತೆ ಸರ್ಕಾರ ನೀಡುವ ಇತರೇ ಪಿಂಚಣಿ ಹಣದಲ್ಲಿ ಏರಿಕೆ ಮಾಡುವ ಕುಮಾರಸ್ವಾಮಿಯ ಯೋಜನೆ ಜನಪ್ರಿಯವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿ ಈಗಾಗಲೇ ತನ್ನ ಅಸ್ತಿತ್ವವನ್ನು ಮತ್ತೆ ಸ್ಥಾಪಿಸಿರುವ ಜೆಡಿಎಸ್, ಉಳಿದ ಹೈದ್ರಬಾದ್ ಕರ್ನಾಟಕ, ಮುಂಬೈ ಕರ್ನಾಟಕಗಳಲ್ಲಿಯೂ ತನ್ನ ಚಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆಇದೆ. ಈ ಭಾಗಗಳಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಹೊಂದಿದ್ದು, ಈ ಪಕ್ಷಗಳ ಜೊತೆ ಮುಮದಿನ ದಿನಗಳಲ್ಲಿ ಜೆಡಿಎಸ್ ಕೂಡ ಪ್ರಬಲ ಪೈಪೋಟಿ ನೀಡಲಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಹಳೆ ಮೈಸೂರು ಪ್ರಾಂತ್ಯದಲ್ಲಿ ತನ್ನ ಅಸ್ತಿತ್ವ ಕಳೆದು ಕೊಳ್ಳದಿದ್ದರೂ ಫಲಿತಾಂಶದಲ್ಲಿ ತೃಪ್ತಿದಾಯಕವಾಗಿಲ್ಲ ಎಂಬುದು ಈಗಾಲೇ ಹೈಕಮಾಂಡ್ಗೆ ಮನವರಿಕೆಯಾಗಿದೆ. ಮತದಾರರನ್ನು ಸೆಳೆಯುವ ಸಲುವಾಗಿ ಜನಪ್ರಿಯ ಯೋಜನೆಗಳನ್ನ ಜಾರಿಗೆ ತರಲು ಎಲ್ಲಾ ಪಕ್ಷಗಳು ಜಿದ್ದಾ ಜಿದ್ದಿಗೆ ಬಿದ್ದಿವೆ. ಆದರೆ ಸಾಬೀತು ಪಡಿಸಲು ಅವಕಾಶ ಸಿಕ್ಕಿರುವುದು ಜೆಡಿಎಸ್ಗೆ ಮಾತ್ರ.

ಇದಕ್ಕಾಗಿಯೇ ಸೋಮವಾರ ರಾಹುಲ್ ಮತ್ತು ಸೋನಿಯಾರವರನ್ನು ಭೇಟಿ ಮಾಡಲಿರುವ ಕುಮಾರಸ್ವಾಮಿ ಎರಡೂ ಪಕ್ಷಗಳ ವರ್ಚಸ್ಸು ಉಳಿಯುವಂತೆ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿ ಇರುವ ಸಾಮಾನ್ಯ ಅಂಶಗಳನ್ನು ಮೊದಲು ಜಾರಿಗೆಗೊಳಿಸಲು ಪ್ರಮುಖ ತೀರ್ಮಾನ ತೆಗೆದು ಕೊಳ್ಳುವ ಸಾಧ್ಯತೆ ಇದೆ.

ಒಳಗೊಳಗೇ ಕೊರಗುತ್ತಿರುವ ಕಾಂಗ್ರೆಸ್ ಜೆಡಿಎಸ್ ಅನ್ನು ಹದ್ದು ಬಸ್ತಿನಲ್ಲಿ ಇಟ್ಟು, ಬಿಜೆಪಿಯನ್ನು ಮಟ್ಟ ಹಾಕಲು ತಂತ್ರ ರೂಪಿಸಿಸುತ್ತಿದೆ. ಇದಕ್ಕೆ ಜೆಡಿಎಸ್ ಯಾವ ರೀತಿ ಸಾಥ್ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ 2008 ರಲ್ಲಿ ಬಿಎಸ್ವೈಗೆ ಮುಖ್ಯಮಂತ್ರಿಗೆ ಪದವಿ ಕೊಡದೆ ಮಾತುತಪ್ಪಿದ ನಾಯಕ ಎಂಬ ಅಪವಾದ ಒಂದನ್ನು ಹೊರತು ಪಡಿಸಿದರೆ, ಆಗಿನಿಂದಲೂ ಹೆಚ್ಡಿಕೆ ಜನಸಾಮಾನ್ಯನ ನೆಚ್ಚಿನ ನಾಯಕನೇ ಎಂಬುದರಲ್ಲಿ ಎರಡು ಮಾತಿಲ್ಲ.

ಇದೆಲ್ಲವನ್ನು ಲೆಕ್ಕಾಚಾರ ಹಾಕಿದರೇ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ಪಟ್ಟಾಭಿಷೇಕವಾದ ನಂತರ ಸರ್ಕಾರದ ಯಾವುದೇ ಯೋಜನೆ ಜಾರಿಗೆ ಬಂದರೂ ಅದರ ಹೆಚ್ಚು ಲಾಭ ಪಡೆಯುವುದು ಜೆಡಿಎಸ್ ಪಕ್ಷವೇ. ಆದ್ದರಿಂದಲೇ ಈ ಜನಪ್ರಿಯ ಯೋಜನೆ ಯಾರ ಪ್ರಣಾಳಿಕೆಯಲ್ಲಿ ಇತ್ತು ಎಂಬುದಕ್ಕಿಂತ ಯಾರು ಜಾರಿಗೆ ತಂದರು ಎಂಬುದು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳನ್ನೇ ಪಕ್ಕಕ್ಕೆ ಸರಿಸಿ ಪಟ್ಟಗಿಟ್ಟಿಸಿಕೊಂಡ ಬಿಹಾರದ ಆರ್ಜೆಡಿ , ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ , ತಮಿಳು ನಾಡಿನ ಡಿಎಂಕೆ – ಎಡಿಎಂಕೆಯಂತೆ, ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷದ ಪರ್ವ ಆರಂಭವಾಗುವ ವಾತಾವರಣ ದಟ್ಟವಾಗಿದೆ ಎಂಬುದಂತೂ ಸತ್ಯ…

Please follow and like us:
0
http://bp9news.com/wp-content/uploads/2018/04/jds-1-1.jpghttp://bp9news.com/wp-content/uploads/2018/04/jds-1-1-150x150.jpgPolitical Bureauಅಂಕಣಪ್ರಮುಖರಾಜಕೀಯAlliance in Karnataka: 'regional party' foundation for the mountainಬೆಂಗಳೂರು : ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಜೆಡಿಎಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರಮುಖ ಅಂಶಗಳು ಜಾರಿಗೆ ಬಂದಿದ್ದೇ ಆದಲ್ಲಿ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಎಸ್ಪಿ ಹಾಗೇ ವಿರೋಧ ಪಕ್ಷವಾದ ಬಿಜೆಪಿಗೆ ಈಗಲೇ ನಡುಕ ಆರಂಭವಾಗಿದೆ. ಏಕೆಂದ್ರೆ ಒಂದು ವೇಳೆ ರೈತರ ಸಾಲ ಮನ್ನಾ ಮತ್ತು ವೃದ್ದಾಪ್ಯ ವೇತನ ಸೇರಿದಂತೆ ಸರ್ಕಾರ ನೀಡುವ ಇತರೇ ಪಿಂಚಣಿ ಹಣದಲ್ಲಿ ಏರಿಕೆ ಮಾಡುವ ಕುಮಾರಸ್ವಾಮಿಯ ಯೋಜನೆ ಜನಪ್ರಿಯವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಹಳೆ...Kannada News Portal