ಶ್ರೀನಗರ: ಹಿಂದುಗಳ ಪವಿತ್ರ ಯಾತ್ರ ಸ್ಥಳ ಅಮರನಾಥ್ ಯಾತ್ರೆ ಇಂದಿನಿಂದ ಆರಂಭವಾಗಿದೆ. ಇಲ್ಲಿನ ಶ್ರೀನಗರದ ಪಹಲ್ಗಂ, ಬಾಲ್ಟಲ್​ನಲ್ಲಿ ಯೋಧರ ಬಿಗಿಭದ್ರತೆಯ ನಡುವೆ ಯಾತ್ರಿಗಳು ತೆರಳಿ ಪ್ರಸಿದ್ಧ ಶಿವ ಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.  45 ದಿನಗಳ ಕಾಲ ನಡೆಯುವ ಅಮರನಾಥ್ ಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು, ಸನ್ಯಾಸಿಗಳು ಆಗಮಿಸಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


ಯಾತ್ರಿ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಭಾರೀ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಹಲ್ಗಂನಿಂದ 46 ಕಿ.ಮೀ ಹಾಗೂ ಬಾಲ್ಟಲ್ನಿಂದ 14 ಕಿ.ಮೀ ದೂರದಲ್ಲಿರುವ ಮುಖ್ಯ ದೇವಸ್ಥಾನಕ್ಕೆ ಯಾತ್ರಿಗಳು ಗಿರಿಕಂದಕಗಳ ನಡುವೆ ಪಾದಯಾತ್ರೆ ನಡೆಸಿ ದೇವರ ದರ್ಶನ ಮಾಡಲಿದ್ದಾರೆ.
ಯಾತ್ರಿಗಳ ಸುರಕ್ಷತೆಗಾಗಿ ಗೃಹಸಚಿವರಾದ ರಾಜನಾಥ್​ಸಿಂಗ್​​ ಅವರು ಇತ್ತೀಚೆಗೆ ಸೆಕ್ಯುರಿಟಿ ಚೆಕ್ ಸಭೆನಡೆಸಿ, ಭಕ್ತರ ಸುರಕ್ಷತೆಗೆ ಸೂಚನೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2017/06/maxresdefault-2-1024x768.jpghttp://bp9news.com/wp-content/uploads/2017/06/maxresdefault-2-150x150.jpgNews Updates Notificationಆಧ್ಯಾತ್ಮರಾಷ್ಟ್ರೀಯಶ್ರೀನಗರ: ಹಿಂದುಗಳ ಪವಿತ್ರ ಯಾತ್ರ ಸ್ಥಳ ಅಮರನಾಥ್ ಯಾತ್ರೆ ಇಂದಿನಿಂದ ಆರಂಭವಾಗಿದೆ. ಇಲ್ಲಿನ ಶ್ರೀನಗರದ ಪಹಲ್ಗಂ, ಬಾಲ್ಟಲ್​ನಲ್ಲಿ ಯೋಧರ ಬಿಗಿಭದ್ರತೆಯ ನಡುವೆ ಯಾತ್ರಿಗಳು ತೆರಳಿ ಪ್ರಸಿದ್ಧ ಶಿವ ಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.  45 ದಿನಗಳ ಕಾಲ ನಡೆಯುವ ಅಮರನಾಥ್ ಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು, ಸನ್ಯಾಸಿಗಳು ಆಗಮಿಸಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಯಾತ್ರಿ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಭಾರೀ ಬಿಗಿಬಂದೋಬಸ್ತ್...Kannada News Portal