ಬೆಂಗಳೂರು : ಅಂಬರೀಶ್​ ನೇರವಾಗಿ ನಿವೃತ್ತಿ ಘೋಷಣೆ ಮಾಡದೆ, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅಂಬಿ ನಡೆಯ ಹಿಂದಿನ ಮರ್ಮವಾದರೂ ಏನು? ಯಾವ ಕಾರಣಕ್ಕೆ ಅವರು ಮಂಡ್ಯ ಕ್ಷೇತ್ರದಿಂದ ಕಣಕ್ಕಿ ಇಳಿಯುತ್ತಿಲ್ಲ? ಏಕೆ ಪ್ರಚಾರಕ್ಕೂ ಬರಲ್ಲ ಎನ್ನುತ್ತಿದ್ದಾರೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆಗಳು ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ.

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಕಳೆದ 5 ವರ್ಷಗಳಿಂದ ಅಂಬಿಯನ್ನು ಕಾಂಗ್ರೆಸ್​ ನಡೆಸಿ ಕೊಂಡ ರೀತಿಯೂ ಕಾರಣವಾಗಿದೆ. ಶಾಸಕನಾಗಿ ಆಯ್ಕೆಯಾದ ಆರಂಭದಲ್ಲಿ ಮಂತ್ರಿಗಿರಿ ಕೊಟ್ಟು ರಾಜಮರ್ಯಾದೆ ನೀಡಿದ ಕಾಂಗ್ರೆಸ್​ 3 ವರ್ಷದ ನಂತರ ಆರೋಗ್ಯದ ಕಾರಣ ಇಟ್ಟು ಮಂತ್ರಿಗಿರಿಯನ್ನು ಕಿತ್ತುಕೊಂಡಿತ್ತು. ಶಾಸಕನಾಗಿಯೇ ಪಕ್ಷದಲ್ಲಿ ಮುಂದುವರೆಯಿರಿ ಎಂದು ಹೇಳಿದ್ದಲ್ಲದೇ ಅವರ ಬೆಂಬಲಿಗರ ಮನವಿಗಳಿಗೂ ಪ್ರಾಮುಖ್ಯತೆ ನೀಡುತ್ತಿರಲಿಲ್ಲ ಎಂಬ ಮಾತುಗಳು ಮಂಡ್ಯ ರಾಜಕೀಯ ವಲಯದಿಂದ ಕೇಳಿಬಂದವು.

ಇವುಗಳೆಲ್ಲದರ ಒಟ್ಟಾರೆ ಫಲಿತಾಂಶವಾಗಿ ಅಂಬಿ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್​ ಅನ್ನೇ ಬೆರಳ ತುದಿತಲ್ಲಿ ಆಡಿಸಿದ್ದನ್ನು ಕಾಣಬಹುದು. ಇದೀಗ ಅಂಬಿ ಪತ್ರಿಕಾಗೋಷ್ಠಿಯಲ್ಲಿ ತಾನು ತಟಸ್ಥನಾಗಿ ಇರುವುದಾಗಿ ಪ್ರಕಟಿಸಿದ ಮರುಕ್ಷಣವೇ ಉಸ್ತುವಾರಿ ಕೆ ಸಿ ವೇಣುಗೋಪಾಲ್​ ಅಂಬಿ ಮನೆಗೆ ದೌಡಾಯಿಸಿದ್ದಾರೆ.

ಅಂಬಿ ತಟಸ್ಥನಾಗಿ ಇರುವುದಕ್ಕೆ ಆರೋಗ್ಯ ಕಾರಣ ಅಲ್ಲಾ. ಯಾಕೆಂದ್ರೆ ಪ್ರತಿದಿನ ಚಿತ್ರೀಕರಣದಲ್ಲಿ ಭಾಗವಹಿಸುವ ಅಂಬಿ ಪ್ರಚಾರದಲ್ಲಿ ಭಾಗವಹಿಸಲು ಮತ್ತು ಕಣಕ್ಕಿಳಿಯಲು ಶಕ್ತಿವಂತರಾಗಿದ್ದಾರೆ ಎಂಬುದು ಹೈಕಮಾಂಡ್​ಗೆ ಗೊತ್ತಿದೆ. ಇದಿಂದಾಗಿಯೇ ತಮ್ಮಿಂದಾಗಿ ಎಲ್ಲೋ ತಪ್ಪಾಗಿದೆ ಎಂದು ಮನಗಂಡು ಅಂಬಿ ಮನೆಗೆ ಭೇಟಿ ಕೊಟ್ಟು ಸಂಧಾನ ಕಾರ್ಯದಲ್ಲಿ ತೊಡಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.

Please follow and like us:
0
http://bp9news.com/wp-content/uploads/2018/04/ambarish-2.jpghttp://bp9news.com/wp-content/uploads/2018/04/ambarish-2-150x150.jpgPolitical Bureauಅಂಕಣಪ್ರಮುಖಮಂಡ್ಯರಾಜಕೀಯAmbi is not responsible for age; Due to the tired !!!ಬೆಂಗಳೂರು : ಅಂಬರೀಶ್​ ನೇರವಾಗಿ ನಿವೃತ್ತಿ ಘೋಷಣೆ ಮಾಡದೆ, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅಂಬಿ ನಡೆಯ ಹಿಂದಿನ ಮರ್ಮವಾದರೂ ಏನು? ಯಾವ ಕಾರಣಕ್ಕೆ ಅವರು ಮಂಡ್ಯ ಕ್ಷೇತ್ರದಿಂದ ಕಣಕ್ಕಿ ಇಳಿಯುತ್ತಿಲ್ಲ? ಏಕೆ ಪ್ರಚಾರಕ್ಕೂ ಬರಲ್ಲ ಎನ್ನುತ್ತಿದ್ದಾರೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆಗಳು ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಕಳೆದ 5 ವರ್ಷಗಳಿಂದ ಅಂಬಿಯನ್ನು ಕಾಂಗ್ರೆಸ್​ ನಡೆಸಿ ಕೊಂಡ...Kannada News Portal