ಜೋಧ್​ಪುರ : ಬಾವಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್ ಅಸ್ವಸ್ಥರಾಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್​ ದಲ್ಲಿ ಶೂಟಿಂಗ್​ವೊಂದರಲ್ಲಿ ಪಾಲ್ಗೊಂಡಿದ್ದ ಅವರು  ಇದ್ದಕ್ಕಿದ್ದ  ಹಾಗೇ ಅಸೌಖ್ಯರಾಗಿ ಅಸ್ವಸ್ಥರಾದರು. ತಕ್ಷಣ ವೈದ್ಯರ ತಂಡ ಶೂಟಿಂಗ್​  ಸ್ಥಳಕ್ಕೆ  ಧಾವಿಸಿ ಬಚ್ಚನ್​ರ ಆರೋಗ್ಯ ತಪಾಸಣೆ ನಡೆಸಿತು.  ವೈದ್ಯರ ಸಲಹೆ  ಮೇರೆಗೆ  ಹಿರಿಯ ನಟನನ್ನು  ಜೋಧ್​ಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಿಂದ ಬಚ್ಚನ್​  ಅವರ ಕುಟುಂಬ ವೈದ್ಯರೂ  ಸಹ ಸಲಹೆ ಸೂಚನೆಗಳನ್ನು ನೀಡಿದ್ದಾರೆ.  ಬಚ್ಚನ್​ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

74 ವರ್ಷದ ಅಮಿತಾಬ್​  ಕಳೆದ ತಿಂಗಳುಗಳ ಹಿಂದೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದಿದ್ದರು. ಈ ವಯಸ್ಸಿನಲ್ಲೂ  ಸಿನಿಮಾ, ಟೆಲಿವಿಷನ್​ ಶೋ, ಜಾಹೀರಾತು ಮತ್ತು ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ರಾಯಭಾರಿಯಾಗಿರುವ ಬಿಗ್​ ಬಿ ಕ್ರಿಯಾಶೀಲತೆ ಅನ್ವರ್ಥನಾಮದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

 

.

Please follow and like us:
0
http://bp9news.com/wp-content/uploads/2018/03/amit759-e1520940219928.jpghttp://bp9news.com/wp-content/uploads/2018/03/amit759-e1520940219928-150x150.jpgBP9 Bureauಸಿನಿಮಾಜೋಧ್​ಪುರ : ಬಾವಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್ ಅಸ್ವಸ್ಥರಾಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್​ ದಲ್ಲಿ ಶೂಟಿಂಗ್​ವೊಂದರಲ್ಲಿ ಪಾಲ್ಗೊಂಡಿದ್ದ ಅವರು  ಇದ್ದಕ್ಕಿದ್ದ  ಹಾಗೇ ಅಸೌಖ್ಯರಾಗಿ ಅಸ್ವಸ್ಥರಾದರು. ತಕ್ಷಣ ವೈದ್ಯರ ತಂಡ ಶೂಟಿಂಗ್​  ಸ್ಥಳಕ್ಕೆ  ಧಾವಿಸಿ ಬಚ್ಚನ್​ರ ಆರೋಗ್ಯ ತಪಾಸಣೆ ನಡೆಸಿತು.  ವೈದ್ಯರ ಸಲಹೆ  ಮೇರೆಗೆ  ಹಿರಿಯ ನಟನನ್ನು  ಜೋಧ್​ಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಿಂದ ಬಚ್ಚನ್​  ಅವರ ಕುಟುಂಬ ವೈದ್ಯರೂ  ಸಹ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ...Kannada News Portal