ಸಿನಿಟಾಕ್​ :  ಟಗರು  ಸಿನಿಮಾ  ಸಿಕ್ಕಾಪಟ್ಟೆ ಸಕ್ಸಸ್​  ಆಯ್ತು. ಹ್ಯಾಟ್ರಿಕ್​ ಹೀರೋ  ಶಿವರಾಜ್ ಕುಮಾರ್​   ಅಭಿನಯದ ಟಗರು ಶತದಿನಗಳತ್ತ ಮುನ್ನುಗ್ಗುತ್ತಿದೆ. ಶಿವಣ್ಣ ಹಾಗೂ ದುನಿಯಾ ಸೂರಿ ಕಾಂಬಿನೇಷನ್​  ಸಿನಿಮಾವನ್ನು  ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. 75 ದಿನಗಳನ್ನು ಪೂರೈಸಿ  ನೂರುದಿನಗಳತ್ತ ಸಾಗುತ್ತಿರುವ ಟಗರು ಸಿನಿಮಾ ತಂಡ, ಚಿತ್ರ ಶತ ದಿನೋತ್ಸವ ಪೂರೈಸುತ್ತಿರುವ ಸಮಯದಲ್ಲಿ  ಸಿನಿ ಪ್ರಿಯರಿಗೆ ಮತ್ತೊಂದು ಸುದ್ದಿಕೊಟ್ಟಿದೆ.

ಏನಪ್ಪಾ ಅಂದ್ರೆ ಸೂಪರ್​ ಹಿಟ್​ ಸಿನಿಮಾ ಕೊಟ್ಟ ಟಗರು ಚಿತ್ರ ತಂಡ ಹೊಸ ಸಿನಿಮಾ ಗೆ ಕೈ ಹಾಕಿದೆ. ಅಂದಹಾಗೇ ಈ ಹೊಸ ಸಿನಿಮಾಗೆ ಶ್ರೀಕಾಂತ್​ ಬಂಡವಾಳ ಹಾಕ್ತಿದ್ದಾರೆ. ಇನ್ನು   ಸೂರಿ ಡೈರೆಕ್ಟ್​ ಮಾಡುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾತ್ರ  ಹೀರೋ ಚೇಂಜ್​.

ಟಗರು ಚಿತ್ರದ ಡಾಲಿ ಖ್ಯಾತಿಯ ಧನಂಜಯ ಇಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.  ‘ಕಾಗೆ ಬಂಗಾರ’ ಸಿನಿಮಾ ಪಕ್ಕಕ್ಕಿಟ್ಟು ನಟ ಧನಂಜಯ ಅವರಿಗೆ ದುನಿಯಾ ಸೂರಿ ಚಿತ್ರ ಡೈರೆಕ್ಟ್ ಮಾಡಲು ಮುಂದಾಗಿದ್ದಾರೆ. ಡಾಲಿ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಚಿತ್ರ ನಿರ್ಮಾಣ ಮಾಡಲು ಕೆ ಪಿ ಶ್ರೀಕಾಂತ್ ಮನಸ್ಸು ಮಾಡಿದ್ದಾರೆ. ಸದ್ಯ ಧನಂಜಯ ಹಾಗೂ ದುನಿಯಾ ಸೂರಿ ಯಾವ ಚಿತ್ರದಲ್ಲಿ ಭಾಗಿ ಆಗುತ್ತಾರೆ ಎನ್ನುವುದೇ ಕುತೂಹಲ.

Please follow and like us:
0
http://bp9news.com/wp-content/uploads/2018/05/1519353699_shivaraj-kumar-dhananjays-tagaru.jpghttp://bp9news.com/wp-content/uploads/2018/05/1519353699_shivaraj-kumar-dhananjays-tagaru-150x150.jpgBP9 Bureauಸಿನಿಮಾಸಿನಿಟಾಕ್​ :  ಟಗರು  ಸಿನಿಮಾ  ಸಿಕ್ಕಾಪಟ್ಟೆ ಸಕ್ಸಸ್​  ಆಯ್ತು. ಹ್ಯಾಟ್ರಿಕ್​ ಹೀರೋ  ಶಿವರಾಜ್ ಕುಮಾರ್​   ಅಭಿನಯದ ಟಗರು ಶತದಿನಗಳತ್ತ ಮುನ್ನುಗ್ಗುತ್ತಿದೆ. ಶಿವಣ್ಣ ಹಾಗೂ ದುನಿಯಾ ಸೂರಿ ಕಾಂಬಿನೇಷನ್​  ಸಿನಿಮಾವನ್ನು  ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. 75 ದಿನಗಳನ್ನು ಪೂರೈಸಿ  ನೂರುದಿನಗಳತ್ತ ಸಾಗುತ್ತಿರುವ ಟಗರು ಸಿನಿಮಾ ತಂಡ, ಚಿತ್ರ ಶತ ದಿನೋತ್ಸವ ಪೂರೈಸುತ್ತಿರುವ ಸಮಯದಲ್ಲಿ  ಸಿನಿ ಪ್ರಿಯರಿಗೆ ಮತ್ತೊಂದು ಸುದ್ದಿಕೊಟ್ಟಿದೆ. ಏನಪ್ಪಾ ಅಂದ್ರೆ ಸೂಪರ್​ ಹಿಟ್​ ಸಿನಿಮಾ ಕೊಟ್ಟ ಟಗರು ಚಿತ್ರ ತಂಡ ಹೊಸ...Kannada News Portal