ಬೆಂಗಳೂರು :  ಈಗಲ್​ಟನ್​ ರೆಸಾರ್ಟ್​ನಿಂದ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ  ಹೊರ ನಡೆದಿದ್ದಾರೆ. ಈಗಾಗಲೇ  ಬಹುಮತ ಇಲ್ಲದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಜೆಪಿ, ಮತ್ತೊಂದು ಕಡೆ  ಜೆಡಿಎಸ್​ ಕಾಂಗ್ರೆಸ್​ ಮೈತ್ರಿಕೂಟದ ಸಂದಿಗ್ಧ ಸ್ಥಿತಿ. ಈ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ನ  ಮತ್ತೊಬ್ಬ ಶಾಸಕ ರಾಜಶೇಖರ್​ ಪಾಟೀಲ್​ ಹೊರ ಬಂದಿದ್ದಾರೆ.

ಯಾವುದೋ ತುರ್ತು ಕಾರ್ಯ ನಿಮಿತ್ತ ಹೊರ ಹೋಗುವುದಾಗಿ ತಿಳಿಸಿರುವ ಪಾಟೀಲರ ನಡೆ ಭಾರೀ ಕುತೂಹಲ ಮೂಡಿಸಿದೆ.  ಕಾಂಗ್ರೆಸ್​ ಮುಖಂಡರ ಒಪ್ಪಿಗೆ ಪಡೆದು ಹೊರ ಬಂದಿದ್ದೇನೆ ಎಂದು ಪಾಟೀಲರು ಹೇಳುತ್ತಾರೆ. ಆದರೆ ಬಿಜೆಪಿ ಎಲ್ಲಿ ಇವರನ್ನು ಹೈಜಾಕ್​ ಮಾಡಿ ಬಿಡುತ್ತೋ ಎಂಬ ಎಂಬ ಅನುಮಾನ ಮಾತ್ರ ದಟ್ಟವಾಗ್ತಿರೋದಂತೂ ಸತ್ಯ.ಬಿಜೆಪಿ ನಾಯಕರು, ಕಾಂಗ್ರೆಸ್​ ತಮ್ಮ ಶಾಸಕರ ಮೇಲೆ ‘ತುರ್ತು ಪರಿಸ್ಥಿತಿ ಹೇರಿದೆ  ಎಂದು ಹೇಳುತ್ತಿದ್ದ ಸಂದರ್ಭದಲ್ಲಿಯೇ ಕಾಂಗ್ರೆಸ್​ ನಾಯಕರ ಈ ನಡೆ ಮತ್ತಷ್ಟು ಕೌತುಕ ಉಂಟುಮಾಡಿದೆ.  ಭದ್ರಕೋಟೆಯಲ್ಲಿದ್ದ ಕಾಂಗ್ರೆಸ್​ ನಾಯಕರು ಒಬ್ಬೊಬ್ಬರಾಗಿಯೇ ರೆಸಾರ್ಟ್​ನಿಂದ ಹೊರ ಹೋಗುತ್ತಿರುವುದನ್ನು ನೋಡಿದರೆ ಜೆಡಿಎಸ್​ ಕಾಂಗ್ರೆಸ್​ ನಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ ಎನ್ನುತ್ತಿವೆ ಬಲ್ಲ ಮೂಲಗಳು.

Please follow and like us:
0
http://bp9news.com/wp-content/uploads/2018/05/PZvhc0yi_400x400.jpghttp://bp9news.com/wp-content/uploads/2018/05/PZvhc0yi_400x400-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ಈಗಲ್​ಟನ್​ ರೆಸಾರ್ಟ್​ನಿಂದ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ  ಹೊರ ನಡೆದಿದ್ದಾರೆ. ಈಗಾಗಲೇ  ಬಹುಮತ ಇಲ್ಲದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಜೆಪಿ, ಮತ್ತೊಂದು ಕಡೆ  ಜೆಡಿಎಸ್​ ಕಾಂಗ್ರೆಸ್​ ಮೈತ್ರಿಕೂಟದ ಸಂದಿಗ್ಧ ಸ್ಥಿತಿ. ಈ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ನ  ಮತ್ತೊಬ್ಬ ಶಾಸಕ ರಾಜಶೇಖರ್​ ಪಾಟೀಲ್​ ಹೊರ ಬಂದಿದ್ದಾರೆ. ಯಾವುದೋ ತುರ್ತು ಕಾರ್ಯ ನಿಮಿತ್ತ ಹೊರ ಹೋಗುವುದಾಗಿ ತಿಳಿಸಿರುವ ಪಾಟೀಲರ ನಡೆ ಭಾರೀ ಕುತೂಹಲ ಮೂಡಿಸಿದೆ.  ಕಾಂಗ್ರೆಸ್​ ಮುಖಂಡರ ಒಪ್ಪಿಗೆ ಪಡೆದು ಹೊರ ಬಂದಿದ್ದೇನೆ...Kannada News Portal