ಹೈದರಬಾದ್​ : ಅರುಂಧತಿ ಖ್ಯಾತಿಯ ಟಾಲಿವುಡ್​ ಸ್ಟಾರ್​ ಅನುಷ್ಕಾ ಶೆಟ್ಟಿ ಮತ್ತೆ ಲವ್​ನಲ್ಲಿ ಬಿದ್ದಿದ್ದಾರಂತೆ. ಯಾರು ಜೊತೆ ಗೊತ್ತಾ…? ಅನುಷ್ಕಾ  ಲವ್​ ಸ್ಟೋರಿ ಬಗ್ಗೆ ಸಾಕಷ್ಟು ಗಾಸಿಪ್​ಗಳು ಹರಿದಾಡಿದವು.  ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್​ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ, ಅವರ ಮದುವೆ ಡೇಟ್​ ಕೂಡ ಫಿಕ್ಸ್​ ಆಗಿದೆ ಎಂಬ ಸುದ್ದಿ ಹರಡುತ್ತಿದ್ದ ಬೆನ್ನಲ್ಲೇ, ಇದೆಲ್ಲಾ ಸುಳ್ಳು  ನಾನು ಪ್ರಭಾಸ್​ ಇಬ್ಬರು ಒಳ್ಳೆ ಸ್ನೇಹಿತರು ಎಂದು ಅನುಷ್ಕಾಗೆ  ಗಾಸಿಪ್​ಗೆ ಬ್ರೇಕ್​  ಹಾಕಿದ್ರು.

 ಆದರೆ ಮತ್ತೆ ಆ ಲವ್​ ಸ್ಟೋರಿಗೆ ಪುಷ್ಟಿ ನೀಡುವಂತ ವರದಿಗಳು ಕೇಳಿ ಬರುತ್ತಿವೆ. ಇವರಿಬ್ಬರ ಪ್ರೇಮಕಥೆಯ ಬಗ್ಗೆ ಹೊಸ ಸುದ್ದಿಯೊಂದು ಓಡಾಡುತ್ತಿದೆಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ರಿವಿಲ್ ಆಗಿದೆ. ಈ ಜೋಡಿ ದಿನೇ ದಿನೇ ಪರಸ್ಪರ ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವ ನ್ಯೂ ನ್ಯೂಸ್​ ಈಗ ರಿವೀಲ್ ಆಗಿದೆ.

ಸಾಹೋ ಚಿತ್ರದಲ್ಲೂ ಪ್ರಭಾಸ್‍ಗೆ ಅನುಷ್ಕಾ ಜೋಡಿಯಾಗಬೇಕಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಾಹೋ ಚಿತ್ರದಲ್ಲಿ ಅನುಷ್ಕಾ ಬದಲು ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ. ಈ ನಡುವೆ ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದ್ದರು.

ಇಬ್ಬರ ನಡುವೆ ಇರೋದು ಸ್ನೇಹಾನಾ ಪ್ರೀತಿನಾ ಎನ್ನುವುದು ರಹಸ್ಯವಾಗಿದೆ. ಇಬ್ಬರೂ ಅನುಭವಿಸುತ್ತಿರುವ ವಿರಹ ವೇದನೆ ಈಗಂತೂ ಜಗತ್ತಿನ ಮುಂದೆ ಬಂದಿದೆ. ಪರಸ್ಪರ ಶೂಟಿಂಗ್ ಗಾಗಿ ಬೇರೆ ಬೇರೆ ಸ್ಥಳದಲ್ಲಿರುವಾಗ ಈ ಜೋಡಿ ಬರೀ ಕಾಲ್ ಅಲ್ಲ, ವೀಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಾರೆ. ಪ್ರತಿ ದಿನ ಬಿಡುವಿದ್ದರೆ ಸಾಕು ಇಬ್ಬರ ಮೊಬೈಲ್‍ಗಳೂ ವೇಟಿಂಗ್ ನಲ್ಲಿಯೇ ಇರುತ್ತದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Please follow and like us:
0
http://bp9news.com/wp-content/uploads/2018/05/Prabhas-Was-Worried-to-Call-Anushka-Shetty-Mother.jpghttp://bp9news.com/wp-content/uploads/2018/05/Prabhas-Was-Worried-to-Call-Anushka-Shetty-Mother-150x150.jpgBP9 Bureauಸಿನಿಮಾ  ಹೈದರಬಾದ್​ : ಅರುಂಧತಿ ಖ್ಯಾತಿಯ ಟಾಲಿವುಡ್​ ಸ್ಟಾರ್​ ಅನುಷ್ಕಾ ಶೆಟ್ಟಿ ಮತ್ತೆ ಲವ್​ನಲ್ಲಿ ಬಿದ್ದಿದ್ದಾರಂತೆ. ಯಾರು ಜೊತೆ ಗೊತ್ತಾ...? ಅನುಷ್ಕಾ  ಲವ್​ ಸ್ಟೋರಿ ಬಗ್ಗೆ ಸಾಕಷ್ಟು ಗಾಸಿಪ್​ಗಳು ಹರಿದಾಡಿದವು.  ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್​ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ, ಅವರ ಮದುವೆ ಡೇಟ್​ ಕೂಡ ಫಿಕ್ಸ್​ ಆಗಿದೆ ಎಂಬ ಸುದ್ದಿ ಹರಡುತ್ತಿದ್ದ ಬೆನ್ನಲ್ಲೇ, ಇದೆಲ್ಲಾ ಸುಳ್ಳು  ನಾನು ಪ್ರಭಾಸ್​ ಇಬ್ಬರು ಒಳ್ಳೆ ಸ್ನೇಹಿತರು ಎಂದು ಅನುಷ್ಕಾಗೆ  ಗಾಸಿಪ್​ಗೆ ಬ್ರೇಕ್​ ...Kannada News Portal