ಬಿಗ್​ಬಾಸ್​ ಖ್ಯಾತಿಯ  ಪ್ರಥಮ್​  ಬರಲಿರುವ  ಹೊಸ ಸರ್ಕಾರಕ್ಕೆ  ಒಂದು ಮನವಿ  ಮಾಡಿಕೊಂಡಿದ್ದಾರೆ.  ಚುನಾವಣೆಯಲ್ಲಿ ಯಾರೇ ಗೆದ್ದರೂ ಖುಷಿ ಎಂದಿದ್ದ  ಪ್ರಥಮ್​  ಯಾರೇ ಗೆದ್ದರೂ ಖುಷಿ ಎಂದಿದ್ದ ಪ್ರಥಮ್ ಸರ್ಕಾರ ರಚನೆಗೂ ಮುನ್ನವೇ ಮಾಡಿರುವ ಮನವಿ ಚಿತ್ರರಂಗಕ್ಕೆ ಸಂಬಂಧಪಟ್ಟದ್ದು ಎನ್ನುವುದು ವಿಶೇಷ. ನಿನ್ನೆ ಅಷ್ಟೇ ಹಿರಿಯ ಕಲಾವಿದರಾದ ಅಕ್ಕಿ ಚನ್ನಬಸಪ್ಪನವರು ನಿಧನರಾದರು. ಕೊನೆಯಕಾಲದಲ್ಲಿ ಯಾರೂ ಆಶ್ರಯವಿಲ್ಲದೆ ಅನಾಥಾಶ್ರಮದಲ್ಲಿ ಅಕ್ಕಿ ಚೆನ್ನಬಸಪ್ಪ ತಮ್ಮ ಕೊನೆಯುಸಿರೆಳೆದರು.
ಇದರಿಂದ ಬೇಸರಗೊಂಡ ಪ್ರಥಮ್ “ತುಂಬಾ ಬೇಜಾರಾಗುತ್ತೆ ಸರ್ಕಾರ ಹಿರಿಯ ಕಲಾವಿದರ ರಕ್ಷಣೆಗೆ ಏನಾದರೂ ಮಾಡಲೇಬೇಕು. ನಾವಂತೂ ಇಲ್ಲೇ ಇರ್ತೀನಿ ಒದ್ದಾಡಿಕೊಂಡು ಸಾಯ್ತೀನಿ ನಮ್ಮ ಕರ್ಮ ಇದು. ಆದರೆ ಹಿರಿಯ ರಂಗಭೂಮಿ ಕಲಾವಿದರ ಪಾಡೇನು ದಯವಿಟ್ಟು ಯಾವುದೇ ಸರ್ಕಾರ ಬರಲಿ ಇಂತಹ ಕಲಾವಿದರ ಕೊನೆ ದಿನಗಳಲ್ಲಿ ನೆಮ್ಮದಿಯಾಗಿ ಜೀವಿಸಲು ನೆರವಾಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಇದು ಮೊದಲೇನಲ್ಲ ಹಿರಿಯ ನಟ‌ ಸುದರ್ಶನ್ ಅವರು ನಿಧನರಾದಾಗಲೂ ಇದೇ ಪರಿಸ್ಥಿತಿ ‌ಎದುರಾಗಿತ್ತು. ಆಗ‌ ಕಲಾವಿದರೆಲ್ಲರು ಸೇರಿ ಅಂತ್ಯಕ್ರಿಯೆಗೆ ನೆರವಾಗಿದ್ದರು. ಆದರೆ ಇಂತಹ ಪರಿಸ್ಥಿತಿ ಪದೇ ಪದೇ ಎದುರಾಗುತ್ತಿದೆ. ಸದ್ಯ ಪ್ರಥಮ್ ಮಾಡಿರುವ ಈ ಮನವಿ ನಿಜಕ್ಕೂ ಸಿನಿಮಾರಂಗದವರು ಮೆಚ್ಚಲೇ ಬೇಕಾಗಿರುವುದು. ಆದರೆ ಈ ಮನವಿಗೆ ಚಿತ್ರರಂಗದ ಎಲ್ಲರೂ ಒಕ್ಕೊರಲಿನಿಂದ ಕೈ ಜೋಡಿಸಬೇಕಾಗಿದೆ. ಆಗ‌ ಮಾತ್ರ ಸರ್ಕಾರ ಈ ಬಗ್ಗೆ ಗಮನಹರಿಸಲು ‌ಚಿಂತನೆ ನಡೆಸುತ್ತೆ.

Please follow and like us:
0
http://bp9news.com/wp-content/uploads/2018/05/dc-Cover-a93t539iea3e2fcdm19joe89r2-20170406023854.Medi_.jpeghttp://bp9news.com/wp-content/uploads/2018/05/dc-Cover-a93t539iea3e2fcdm19joe89r2-20170406023854.Medi_-150x150.jpegBP9 Bureauಸಿನಿಮಾಬಿಗ್​ಬಾಸ್​ ಖ್ಯಾತಿಯ  ಪ್ರಥಮ್​  ಬರಲಿರುವ  ಹೊಸ ಸರ್ಕಾರಕ್ಕೆ  ಒಂದು ಮನವಿ  ಮಾಡಿಕೊಂಡಿದ್ದಾರೆ.  ಚುನಾವಣೆಯಲ್ಲಿ ಯಾರೇ ಗೆದ್ದರೂ ಖುಷಿ ಎಂದಿದ್ದ  ಪ್ರಥಮ್​  ಯಾರೇ ಗೆದ್ದರೂ ಖುಷಿ ಎಂದಿದ್ದ ಪ್ರಥಮ್ ಸರ್ಕಾರ ರಚನೆಗೂ ಮುನ್ನವೇ ಮಾಡಿರುವ ಮನವಿ ಚಿತ್ರರಂಗಕ್ಕೆ ಸಂಬಂಧಪಟ್ಟದ್ದು ಎನ್ನುವುದು ವಿಶೇಷ. ನಿನ್ನೆ ಅಷ್ಟೇ ಹಿರಿಯ ಕಲಾವಿದರಾದ ಅಕ್ಕಿ ಚನ್ನಬಸಪ್ಪನವರು ನಿಧನರಾದರು. ಕೊನೆಯಕಾಲದಲ್ಲಿ ಯಾರೂ ಆಶ್ರಯವಿಲ್ಲದೆ ಅನಾಥಾಶ್ರಮದಲ್ಲಿ ಅಕ್ಕಿ ಚೆನ್ನಬಸಪ್ಪ ತಮ್ಮ ಕೊನೆಯುಸಿರೆಳೆದರು. ಇದರಿಂದ ಬೇಸರಗೊಂಡ ಪ್ರಥಮ್ 'ತುಂಬಾ ಬೇಜಾರಾಗುತ್ತೆ ಸರ್ಕಾರ...Kannada News Portal