ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್​ ಬಾಟಲಿ  ಬಿಸಾಡಿದ್ದಕ್ಕೆ ಕಾರಿನ ವ್ಯಕ್ತಿಗೆ ಹಿಗ್ಗಾಮುಗ್ಗಾ   ಬೈಯ್ದಿದ್ದ ನಟಿ ಅನುಷ್ಕಾ ಶರ್ಮಾ ರ ವಿಡಿಯೋ ವೈರಲ್​  ಆಗುತ್ತಿದ್ದಂತೇ, ಆ ಯುವಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಗೆ ತಿರುಗೇಟು ನೀಡಿದ್ದಾರೆ. ಬೈಗುಳ ತಿಂದ ಆ ವ್ಯಕ್ತಿ ಸದ್ಯ ಫೇಸ್​ಬುಕ್​ ಖಾತೆ ಮೂಲಕ ಅನುಷ್ಕಾರನ್ನು ,  ಸಾಮಾನ್ಯರಂತೇ ವರ್ತಿಸದೇ ಸರಿಯಾಗಿ ವರ್ತಿಸಿ ಎಂದು ಟಾಂಗ್​ ನೀಡಿದ್ದಾರೆ.

ಆತನ ಹೆಸರು ಅರ್ಹಾನ್​ ಸಿಂಗ್​, ತಮ್ಮ ಫೇಸ್​ಬುಕ್​ ಅಕೌಂಟ್​ ಮೂಲಕ ಪೋಸ್ಟ್​ವೊಂದನ್ನು ಶೇರ್​ ಂಆಡುತ್ತಾ , ಕೈ ತಪ್ಪಿನಿಂದ ಬಾಟಲಿ ತನ್ನ ಕಾರಿನಿಂದ ಹೊರಗೆ ಬಿತ್ತು. ಅಷ್ಟಕ್ಕೆ ಅನುಷ್ಕಾ ಬೀದಿಬದಿಯಯ ವ್ಯಕ್ತಿಗಳಂತೆ ಕಿರುಚಾಡಿದ್ದಾರೆ. ಕ್ಷಮೆ ಕೇಳಿದ್ರೂ ಅವರು ಸುಮ್ಮನಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಅರ್ಹಾನ್​ ತನ್ನ ಪೋಸ್ಟ್​ನಲ್ಲಿ ನನ್ನ ಐಷಾರಾಮಿ ಕಾರಿನಿಂದ ಕೈ ತಪ್ಪಿ ಹೊರ ಬಿದ್ದ ಕಸಕ್ಕಿಂತ ಹೆಚ್ಚಿನ ಕಲ್ಮಷ ಅನುಷ್ಕಾರ ಬಾಯಿಯಿಂದ ಹೊರ ಬಿದ್ದಿದೆ ಎಂದು ಹಣಿದಿದ್ದಾರೆ. ಅಲ್ಲದೇ ವಿರಾಟ್​ ಕೊಹ್ಲಿ ಶೇರ್​ ಮಾಡಿರುವ ವಿಡಿಯೋ ತನಗೆ ಉಪಯೋಗ ಮಾಡಿದೆ ಎಂದೂ ಬರೆದುಕೊಂಡಿದ್ದಾರೆ.

ಅನುಷ್ಕಾ ಮಾಡಿರುವ ಕೆಲಸಕ್ಕೆ ಸಿಕ್ಕಾಪಟ್ಟೆ  ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸ್ವಚ್ಛ ಭಾರತ ಬಗ್ಗೆಅ ವರಿಗಿರುವ ಕಾಳಜಿ ಬಗ್ಗೆ ಹಾಡಿ ಹೊಗಳಿದ್ದಾರೆ. ಅನುಷ್ಕಾ ಆ ವ್ಯಕ್ತಿಗೆ ಕ್ಲಾಸ್​ ತೆಗೆದುಕೊಂಡಿರುವ ವಿಡಿಯೋವನ್ನು ಪತಿ ವಿರಾಟ್​  ಕೊಹ್ಲಿ ತಮ್ಮ ಟ್ವಿಟ್ಟರ್​ ಮೂಲಕ ಪೋಸ್ಟ್​  ಮಾಡಿದ್ದಾರೆ. ಇದೀಗ ಆ ವಿಡಿಯೋ ಅಧಿಕ ವೀವ್ಸ್​ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಉತ್ತಮ ಪ್ರಶಂಸೆ ಕೂಡ ಗಿಟ್ಟಿಸಿಕೊಂಡಿದೆ.

Please follow and like us:
0
http://bp9news.com/wp-content/uploads/2018/06/anushka-sharma-ae-dil-hai-1.jpghttp://bp9news.com/wp-content/uploads/2018/06/anushka-sharma-ae-dil-hai-1-150x150.jpgBP9 Bureauಪ್ರಮುಖಸಿನಿಮಾರಸ್ತೆ ಬದಿಯಲ್ಲಿ ಪ್ಲಾಸ್ಟಿಕ್​ ಬಾಟಲಿ  ಬಿಸಾಡಿದ್ದಕ್ಕೆ ಕಾರಿನ ವ್ಯಕ್ತಿಗೆ ಹಿಗ್ಗಾಮುಗ್ಗಾ   ಬೈಯ್ದಿದ್ದ ನಟಿ ಅನುಷ್ಕಾ ಶರ್ಮಾ ರ ವಿಡಿಯೋ ವೈರಲ್​  ಆಗುತ್ತಿದ್ದಂತೇ, ಆ ಯುವಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಗೆ ತಿರುಗೇಟು ನೀಡಿದ್ದಾರೆ. ಬೈಗುಳ ತಿಂದ ಆ ವ್ಯಕ್ತಿ ಸದ್ಯ ಫೇಸ್​ಬುಕ್​ ಖಾತೆ ಮೂಲಕ ಅನುಷ್ಕಾರನ್ನು ,  ಸಾಮಾನ್ಯರಂತೇ ವರ್ತಿಸದೇ ಸರಿಯಾಗಿ ವರ್ತಿಸಿ ಎಂದು ಟಾಂಗ್​ ನೀಡಿದ್ದಾರೆ. var domain = (window.location != window.parent.location)? document.referrer : document.location.href; var...Kannada News Portal