ಮೈಸೂರು: ಇಂದು ಆಷಾಡ ಮಾಸದ ಮೊದಲ ಶುಕ್ರವಾರವಾಗಿದ್ದು, ಮೂಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ  ವಿಶೇಷ ಪೊಜೆ ನೆರವೆರಿಸಲಾಗುತ್ತಿದೆ. ಈಗಾಗಲೆ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು ದೇವಿ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ.

ಇನ್ನೂ ಆಷಾಡ ಶುಕ್ರವಾರ ವಿಶೇಷ ಪೂಜೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದ್ದು, ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಖಾಸಗಿ ವಾಹಾನಗಳಿಗೆ ಲಲಿತ ಮಹಲ್​ ಹೆಲಿಪ್ಯಾಡ್​​​ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಅಲ್ಲಿಂದ ನಗರ ಸಾರಿಗೆ ವ್ಯವಸ್ಥೆ ಇರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನಗರ ಸಾರಿಗೆ ಬಸ್​​ಗಳು ಇಂದು ಬೆಳಗಿನ ಜಾವಾ 3 ಗಂಟೆಯಿಂದ ಸಂಚಾರ ಆರಂಭಿಸಿದ್ದು, ರಾತ್ರಿ 11 ವರೆಗೂ ಸಂಚರಿಸಲಿದೆ. ಬೆಟ್ಟದಲ್ಲಿ ದೇವರ ದರ್ಶನಕ್ಕೆ 2 ಪ್ರವೇಶ ದ್ವಾರಗಳನ್ನು ಮಾಡಿದ್ದು, ರಾಜ್ಯದ ವಿವೆಧೆಡೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2017/06/vlcsnap-2017-06-30-08h53m05s127-1.pnghttp://bp9news.com/wp-content/uploads/2017/06/vlcsnap-2017-06-30-08h53m05s127-1-150x150.pngNews Updates Notificationಆಧ್ಯಾತ್ಮಮೈಸೂರು  ಮೈಸೂರು: ಇಂದು ಆಷಾಡ ಮಾಸದ ಮೊದಲ ಶುಕ್ರವಾರವಾಗಿದ್ದು, ಮೂಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ  ವಿಶೇಷ ಪೊಜೆ ನೆರವೆರಿಸಲಾಗುತ್ತಿದೆ. ಈಗಾಗಲೆ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು ದೇವಿ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಇನ್ನೂ ಆಷಾಡ ಶುಕ್ರವಾರ ವಿಶೇಷ ಪೂಜೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದ್ದು, ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಖಾಸಗಿ ವಾಹಾನಗಳಿಗೆ ಲಲಿತ ಮಹಲ್​ ಹೆಲಿಪ್ಯಾಡ್​​​ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಅಲ್ಲಿಂದ ನಗರ ಸಾರಿಗೆ...Kannada News Portal