ಬೆಂಗಳೂರು: ಮಂಗ ದಾಳಿ ಮಾಡಿದ ಪರಿಣಾಮ ಮಕ್ಕಳೂ ಸೇರಿದಂತೆ ೬ ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದಾಳಿ ವೇಳೆ ಬಿದ್ದು ಮೂವರಿಗೆ ಕೈ ಮುರಿದಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ಗ್ರಾಮದ ಅನೇಕ ಮಕ್ಕಳು, ವೃದ್ದರಿಗೆ ಮಂಗ ಮನಬಂದಂತೆ ಕಚ್ಚಿದೆ. ಈ ಮಂಗ ಹುಚ್ಚು ಹಿಡಿದಂತೆ ವರ್ತಿಸುತ್ತಿದೆ ಎನ್ನಲಾಗಿದೆ. ಇಂದು ಸಹ ಯಾವಗಲ್ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳನ್ನ ಸಹ ಕಚ್ಚಿದೆ. ಈ ಮಂಗನ ದಾಳಿಗೆ ಯಾವಗಲ್ ಗ್ರಾಮಸ್ಥರು ತತ್ತರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಮಂಗ ದಾಳಿವೇಳೆ ಓಡಿಹೋಗುವ ಸಂದರ್ಭದಲ್ಲಿ ಬಿದ್ದು ಮೂವರ ಕೈ ಮುರಿತವಾಗಿದೆ. ಗ್ರಾಮದ ಕಿರಣ್ ಗಾಳಿ, ನೀಲವ್ವ ಜಾಲಿಹಾಳ, ರೇಣುಕಾ, ಗಿರಿಜಾ, ಉಮೇಶ್, ಪಾರವ್ವ ಎಂಬುವರಿಗೆ ಕೈ, ಕಾಲು, ಮುಖ ಸೇರಿದಂತೆ ಅನೇಕ ಭಾಗದಲ್ಲಿ ಗಾಯಗಳಾಗಿವೆ. ಗಾಯಾಳುಗಳನ್ನ ನರಗುಂದ ತಾಲೂಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಂಗ ಹೀಗೆ ವರ್ತಿಸುತ್ತಿದ್ದು, ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ಸಾಕಷ್ಟು ಹೇಳಿದ್ರೂ ಕ್ಯಾರೆ ಅಂತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/06/gdg-Attack-the-baby-and-the-woman-from-the-monkey-Karnatakada-Miditha.jpeghttp://bp9news.com/wp-content/uploads/2018/06/gdg-Attack-the-baby-and-the-woman-from-the-monkey-Karnatakada-Miditha-150x150.jpegBP9 Bureauಗದಗಪ್ರಮುಖAttack the baby and the woman from the monkeyಬೆಂಗಳೂರು: ಮಂಗ ದಾಳಿ ಮಾಡಿದ ಪರಿಣಾಮ ಮಕ್ಕಳೂ ಸೇರಿದಂತೆ ೬ ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದಾಳಿ ವೇಳೆ ಬಿದ್ದು ಮೂವರಿಗೆ ಕೈ ಮುರಿದಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ಅನೇಕ ಮಕ್ಕಳು, ವೃದ್ದರಿಗೆ ಮಂಗ ಮನಬಂದಂತೆ ಕಚ್ಚಿದೆ. ಈ ಮಂಗ ಹುಚ್ಚು ಹಿಡಿದಂತೆ ವರ್ತಿಸುತ್ತಿದೆ ಎನ್ನಲಾಗಿದೆ. ಇಂದು ಸಹ ಯಾವಗಲ್ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳನ್ನ ಸಹ ಕಚ್ಚಿದೆ. ಈ...Kannada News Portal