ಬೆಂಗಳೂರು:ಸಿಂಗಂಸ್ಟೈಲ್ ನಲ್ಲಿ ಇನ್ಸ್ಪೆಕ್ಟರ್ ಗೇ ಆವಾಜ್ ಹಾಕಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಇನ್ಸ್ ಪೆಕ್ಟರ್ ನಡುವೆ ಏನು ನಡೆಯಿತು ಎಂಬುದನ್ನ ವಿವರವಾಗಿ ವರದಿ ನೀಡುವಂತೆ ದೊಡ್ಡಬಳ್ಳಾಪುರ ಡಿವೈಎಸ್ಪಿಗೆ ವಹಿಸಿರುವುದಾಗಿ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಬಿಪಿ9 ಜೊತೆ ಮಾತನಾಡಿದ ಅವರು, ಘಟನೆ ಬಗ್ಗೆ ವಿವರಗಳನ್ನ ನಾನು ಪಡೆದುಕೊಂಡಿದ್ದೇನೆ. ಘಟನೆಗೆ ಸಂಬಂಧಿಸಿದ ವಿಡಿಯೋ ನನ್ನ ಬಳಿ ಇದೆ. ಇವೆಲ್ಲವನ್ನೂ ನೋಡಿ ಎರಡು ದಿನಗಳ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭೀಮಾ ಶಂಕರ್ ತಿಳಿಸಿದ್ದಾರೆ.

ಬಿಲ್ ಇಲ್ಲದ ಲಾರಿಯನ್ನು ಬಿಟ್ಟು ಬರುವಂತೆ ವಿಜಯಪುರ ಸಿಪಿಐ ಮಂಜುನಾಥ್ , ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ ಗೆ ಒತ್ತಡ ಹಾಕಿದಾಗ ಮೇಲಾಧಿಕಾರಿ ಎಂಬುದನ್ನೂ ಲೆಕ್ಕಿಸದೆ ಪೋನಿನಲ್ಲೆ ಪಿಎಸ್ಐ ಆವಾಜ್ ಹಾಕಿದ್ದರು. ಬಿಲ್ ಇಲ್ಲದ ಗ್ರಾನೈಟ್ ಅನ್ನ ಸಾಗಿಸುತ್ತಿದ್ದ ಲಾರಿಯ ಸಿಬ್ಬಂದಿಯೇ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತಲ್ಲದೆ, ಇನ್ನೂ ಹರಡುತ್ತಿದೆ. ಅಕ್ರಮವಾಗಿ ಗ್ರಾನೈಟ್ ಸಾಗಾಟದ ಬಗ್ಗೆ ಖಚಿತ‌ ಮಾಹಿತಿ ಮೇರೆಗೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿದ್ದರು.

Please follow and like us:
0
http://bp9news.com/wp-content/uploads/2018/06/bangalore-rural-sp.jpghttp://bp9news.com/wp-content/uploads/2018/06/bangalore-rural-sp-150x150.jpgBP9 Bureauಪ್ರಮುಖಬೆಂಗಳೂರು:ಸಿಂಗಂಸ್ಟೈಲ್ ನಲ್ಲಿ ಇನ್ಸ್ಪೆಕ್ಟರ್ ಗೇ ಆವಾಜ್ ಹಾಕಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಇನ್ಸ್ ಪೆಕ್ಟರ್ ನಡುವೆ ಏನು ನಡೆಯಿತು ಎಂಬುದನ್ನ ವಿವರವಾಗಿ ವರದಿ ನೀಡುವಂತೆ ದೊಡ್ಡಬಳ್ಳಾಪುರ ಡಿವೈಎಸ್ಪಿಗೆ ವಹಿಸಿರುವುದಾಗಿ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಬಿಪಿ9 ಜೊತೆ ಮಾತನಾಡಿದ ಅವರು,...Kannada News Portal