ಬಾಗಲಕೋಟೆ(ಜೂ.20): ಒಂದೆಡೆ ವರುಣ ಹಲವು ಅವಾಂತರ ಸೃಷ್ಪಿಸಿದರೆ ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ವರುಣನಿಗಾಗಿ ಬರೋಬ್ಬರಿ 10 ಗಂಟೆಗಳ ಕಾಲ ಚಂಡಿಕಾ ಹೋಮ ಮಾಡೋ ಮೂಲಕ ದೇವರ ಮೊರೆಹೋಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ದುರ್ಗಮ್ಮ- ದ್ಯಾಮವ್ವ ದೇಗುಲದ ಎದುರು ನಿನ್ನೆ ಅದ್ಧೂರಿಯಾಗಿ ಬೃಹತ್ ಚಂಡಿಕಾ ಹೋಮ ನಡೆಸಲಾಯಿತು. ಚಂಡಿಕಾ ಹೋಮದಲ್ಲಿ ಐದು ತರಹದ ಕಟ್ಟಿಗೆ, ಹಾಗೂ ತುಪ್ಪದೊಂದಿಗೆ ಹೋಮ ಹವನ ನಡೆದಿದೆ

ರೋಣ ತಾಲೂಕಿನ ಸೂಡಿ ಗ್ರಾಮದ ಭಟ್ಟರು, ನೀಲಕಂಠ ಶ್ರೀ ಹಾಗೂ ವಿರುಪಾಕ್ಷ ಶ್ರೀಗಳಿಂದ ಹೋಮ ಹವನ ನಡೆದಿದ್ದು, ಐದು ಜೋಡಿ ನವವಿವಾಹಿತರು ಚಂಡಿಕಾ ಹೋಮ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಬಾದಾಮಿ ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿಲ್ಲ. ಹೀಗಾಗಿ ರೈತರಿಗೆ ಚಿಂತೆಯಾಗಿತ್ತು. ಬಳಿಕ ಪಟ್ಟಣದ ಹಿರಿಯರು ಮುರನಾಳದ ಮಳೆ ರಾಜೇಂದ್ರ ಸ್ವಾಮೀಜಿ ಬಳಿ ಕೇಳಿದ್ದಾರೆ. ಆಗ ಸ್ವಾಮೀಜಿ ಗಳು ನಿಮ್ಮಲ್ಲಿ ಮಳೆ ಆಗದೆ ಇರಲು ಗ್ರಾಮ ದೇವಿಯ ವಕ್ರದೃಷ್ಠಿ ಕಾರಣ, ಈ ಹಿಂದೆ ಹೋಮ ಹವನ ಮಾಡುತ್ತಿದ್ರ ಆದರೆ ಈಗ ಬಿಟ್ಟಿದ್ದೀರಿ. ಮತ್ತೆ ಮಳೆಗಾಗಿ ಚಂಡಿಕಾ ಹೋಮ ಮಾಡಿ ಎಂದಿದ್ದಾರೆ. ಹಾಗಾಗಿ ಪಟ್ಟಣದ ಹಿರಿಯರು ಶ್ರದ್ಧಾ ಭಕ್ತಿಯಿಂದ ಚಂಡಿಕಾ ಹೋಮ ಮಾಡುವ ಮೂಲಕ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

ಇನ್ನು ಬಾದಾಮಿ ಪಟ್ಟಣದಲ್ಲಿ ಅಧಿಕ ಮರಗಳಿದ್ದವು. ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿದಿದ್ದಾರೆ. ಆವಾಗಿನಿಂದ ಉತ್ತಮ ಮಳೆ ಆಗಿಲ್ಲವೆನ್ನುತ್ತಾರೆ ಯುವಕರು. ಇನ್ನು ಪಟ್ಟಣದಲ್ಲಿ ಹೋಮವಿರುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಿರಲಿಲ್ಲ. ಜೊತೆಗೆ ಮನೆಯಲ್ಲಿ ಯಾರು ರೊಟ್ಟಿ ತಟ್ಟದಂತೆ ಡಂಗೂರ ಕೂಡಾ ಸಾರಲಾಗಿತ್ತು. ದೇಗುಲಕ್ಕೆ ಬಂದಿದ್ದ ಭಕ್ತರಿಗೆ ಸರಾಯಿ ತೀರ್ಥ ವನ್ನು ನೀಡಿದ್ದು, ಹೋಮದ ಬಳಿಕ ಭಕ್ತರಿಗೆ ಮೂರು ಕ್ವಿಂಟಲ್ ಜೋಳದ ಕಿಚಡಿ ಪ್ರಸಾದ ವ್ಯವಸ್ಥೆಯೂ ಮಾಡಲಾಗಿತ್ತು. ಮಳೆಗಾಗಿ ನಡೆಸಿರುವ ಚಂಡಿಕಾ ಹೋಮಕ್ಕೆ ವರುಣದೇವ ಒಲಿಯುತ್ತಾನೆ ಎನ್ನುವುದು ಜನರಲ್ಲಿರುವ ನಂಬಿಕೆ.

ವರದಿ, ಶಿವರಾಜ್ ಎಂ ನೇಸರಗಿ, ಅಥಣಿ

 

Please follow and like us:
0
http://bp9news.com/wp-content/uploads/2018/06/bagalkot.jpghttp://bp9news.com/wp-content/uploads/2018/06/bagalkot-150x150.jpgBP9 Bureauಪ್ರಮುಖಬಾಗಲಕೋಟೆ(ಜೂ.20): ಒಂದೆಡೆ ವರುಣ ಹಲವು ಅವಾಂತರ ಸೃಷ್ಪಿಸಿದರೆ ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ವರುಣನಿಗಾಗಿ ಬರೋಬ್ಬರಿ 10 ಗಂಟೆಗಳ ಕಾಲ ಚಂಡಿಕಾ ಹೋಮ ಮಾಡೋ ಮೂಲಕ ದೇವರ ಮೊರೆಹೋಗಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ದುರ್ಗಮ್ಮ- ದ್ಯಾಮವ್ವ ದೇಗುಲದ ಎದುರು ನಿನ್ನೆ ಅದ್ಧೂರಿಯಾಗಿ ಬೃಹತ್...Kannada News Portal