ಬೆಂಗಳೂರು : ಈ ಕಾಂಗ್ರೆಸ್‌ನವರಿಗೆ ಬೆಳಗ್ಗೆ ಸಂಜೆ ಬರೀ ಮೋದಿ, ಮೋದಿ ಎನ್ನುತ್ತಿದ್ದಾರೆ. ಮೋದಿಯನ್ನು ಬೈಯುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಸಾಧನೆ ಬಗ್ಗೆ ಹೇಳಿ ಎಂದು ಮೋದಿ ಕಾಂಗ್ರೆಸ್‌ ಕಾಲೆಳೆದು, 400 ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ ಈಗ 40ಕ್ಕೆ ಬಂದಿದೆ. ಅಷ್ಟೆ ಅಲ್ಲ 22 ರಾಜ್ಯಗಳಿಂದ ಕಾಂಗ್ರೆಸ್‌ ದೂರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ನಾನು ಮೊದಲಿಗೆ 1991ರಲ್ಲಿ ರಾಯಚೂರಿಗೆ ಬಂದಿದ್ದೆ ಎಂದು ನೆನಪಿಸಿಕೊಂಡ ಅವರು. ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಶರಣಕ್ಕೆ ನಮಿಸಿ ರಾಯಚೂರಿನ ವಚನಕಾರರನ್ನು ನೆನೆಯುತ್ತಾ ಮೋದಿ ಭಾಷಣ ಪ್ರಾರಂಭಿಸಿದರು. ನೆರೆದಿದ್ದ ಜನ ನರೇಂದ್ರ ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡ ಅನುವಾದ ಬೇಡವೆಂದ ಕಾರಣ ಹಿಂದಿಯಲ್ಲಿ ಭಾಷಣ ಮುಂದುವರೆಸಿದರು.

ಜನಸಂಘ ಹಾಗೂ ರಾಯಚೂರಿನ ಸಂಬಂಧ ಬಹಳ ಹಳೆಯದ್ದು. ಕರ್ನಾಟಕದ ಪರ ಆಗಲೇ ಜನಸಂಘ ನಿಂತಿತ್ತು ಆಗ ಕಾಂಗ್ರೆಸ್‌ ಪಕ್ಷ ನಿಮ್ಮ ವಿರುದ್ಧ ನಿಂತಿತ್ತು. ಇಲ್ಲಿನ ಮಹಿಳೆಯರಿಗೆ ರಕ್ಷಣೆ, ಇಲ್ಲಿನ ರೈತರ ಅಭಿವೃದ್ಧಿ, ಯುವಕರಿಗೆ ಅವಕಾಶಗಳನ್ನು ಕೊಡಲು ಬಿಜೆಪಿಗೆ ಮಾತ್ರವೇ ಸಾಧ್ಯ. ಒಂದು ಕಡೆ ನಾವು ಎಲ್ಲರೊಂದಿಗೆ ಎಲ್ಲರ ಪ್ರಗತಿ ಎಂದು ಹೇಳುತ್ತಿದ್ದರೆ. ಮತ್ತೊಂದು ಎದುರು ಒಂದು ಕುಟುಂಬದ ಅಭಿವೃದ್ಧಿಯ ಉದ್ದೇಶ ಹೊಂದಿರುವ ಕಾಂಗ್ರೆಸ್‌ ಇದೆ.

ಒಂದು ಕಡೆ ಭ್ರಷ್ಟಾಚಾರದ ವಿರುದ್ಧ ನಿಂತಿರುವ ಬಿಜೆಪಿ ಇದ್ದರೆ, ಎದುರುಗಡೆ ಭ್ರಷ್ಟರಿಗೆ ಸಹಾಯ ಮಾಡುವ ಕಾಂಗ್ರೆಸ್‌ ಪಕ್ಷ ಇದೆ. ಬಿಜೆಪಿ ಜನರ ಧ್ವನಿಗಳಿಗೆ ಧನಿಯಾಗುವ ಉದ್ದೇಶ ಹೊಂದಿದ್ದರೆ, ಕಾಂಗ್ರೆಸ್ ಜನರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಕೈ ಪಾಳಯದ ವಿರುದ್ಧ ಗುಡುಗಿದರು..

ಇನ್ನು ಕರ್ನಾಟಕದ ಸರ್ಕಾರದ 5 ವರ್ಷಗಳ ಸಾಧನೆಯನ್ನೇ ಕಾಂಗ್ರೆಸ್‌ ಪಕ್ಷ ಹೇಳಿಲ್ಲ. ಮತದಾನಕ್ಕೆ 5 ದಿನ ಉಳಿದಿದೆ ಆದರೆ ಈ ವರೆಗೆ ಯಾವ ಕಾಂಗ್ರೆಸ್ಸಿಗರೂ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಹೇಳಿಲ್ಲ. ಬದಲಿಗೆ ಬೆಳಗ್ಗೆ ಸಂಜೆ ಬರೀ ಮೋದಿ, ಮೋದಿ ಎನ್ನುತ್ತಿದ್ದಾರೆ. ಮೋದಿಯನ್ನು ಬೈಯುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಸಾಧನೆ ಬಗ್ಗೆ ಹೇಳಿ ಎಂದು ಮೋದಿ ಕಾಂಗ್ರೆಸ್ಸಿಗರ ಕಾಲೆಳೆದರು.

ರಾಯಚೂರಿನಲ್ಲಿ ಅಭುತಪೂರ್ವ ಪ್ರತಿಕ್ರಿಯೆ :

ಮೋದಿ ಆಗಮನಕ್ಕೆ ರಾಯಚೂರಿನಲ್ಲಿ ಜನರಿಂದ ಅಭುತಪೂರ್ವ ಪ್ರತಿಕ್ರಿಯೆ ದೊರೆತಿದೆ. ಜನರಿಂದ ಮೋದಿ.. ಮೋದಿ ಎಂಬ ಉದ್ಘಾರ ಗಗನ ಮುಟ್ಟುತ್ತಿತ್ತು. ಈ ವೇಳೆ ಮೋದಿ ಹೆಸರನ್ನು ಮೈಮೇಲೆಲ್ಲಾ ಬರೆದುಕೊಂಡಿದ್ದ ವ್ಯಕ್ತಿಗೆ ಶರ್ಟು ಧರಿಸುವಂತೆ ಮೊದಿ ಮನವಿ ಮಾಡಿದರು. ನಿಮ್ಮ ಪ್ರೀತಿ ನನಗೆ ಅರ್ಥವಾಗುತ್ತದೆ ಆದರೆ ದಯವಿಟ್ಟು ನಿಮ್ಮ ದೇಹಕ್ಕೆ ಕಷ್ಟ ಕೊಡಬೇಡಿ ಎಂದು ಮೋದಿ ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/05/modi-karnataka-3.jpghttp://bp9news.com/wp-content/uploads/2018/05/modi-karnataka-3-150x150.jpgPolitical Bureauಪ್ರಮುಖರಾಜಕೀಯರಾಯಚೂರು400 Lok Sabha and 22 states away !!! : Modi at Raichur,Baidu ...ಬೆಂಗಳೂರು : ಈ ಕಾಂಗ್ರೆಸ್‌ನವರಿಗೆ ಬೆಳಗ್ಗೆ ಸಂಜೆ ಬರೀ ಮೋದಿ, ಮೋದಿ ಎನ್ನುತ್ತಿದ್ದಾರೆ. ಮೋದಿಯನ್ನು ಬೈಯುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಸಾಧನೆ ಬಗ್ಗೆ ಹೇಳಿ ಎಂದು ಮೋದಿ ಕಾಂಗ್ರೆಸ್‌ ಕಾಲೆಳೆದು, 400 ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ ಈಗ 40ಕ್ಕೆ ಬಂದಿದೆ. ಅಷ್ಟೆ ಅಲ್ಲ 22 ರಾಜ್ಯಗಳಿಂದ ಕಾಂಗ್ರೆಸ್‌ ದೂರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ರಾಯಚೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ...Kannada News Portal