ಬೆಂಗಳೂರು: ಬೆಂಗಳೂರು ಬೆಳೆದದ್ದು ಸಾಕು. ಬದಲಿಗೆ ರಾಮನಗರ , ತುಮಕೂರು, ಕೋಲಾರ ಸೇರಿದಂತೆ ಬೆಂಗಳೂರಿಗೆ ಅಕ್ಕಪಕ್ಕದಲ್ಲಿರುವ ನಗರಗಳು ಬೆಳೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಹಾಗೂ ಕೃಷಿಕ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ ‘‘ಕರ್ನಾಟಕ ನಿರ್ಮಾಣದಲ್ಲಿ ಕೆಂಪೇಗೌಡ ರಾಜವಂಶಸ್ಥರ ಕೊಡುಗೆಗಳು’’ ಎಂಬ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘‘1947ನೇ ಇಸವಿಯಲ್ಲಿ ಬೆಂಗಳೂರಿನ ವಿಸ್ತಾರ ಸುಮಾರು 200 ಚದರ ಕಿ.ಮೀ.ಗಳಷ್ಟಿತ್ತು. ಆದರೆ ಪ್ರಸ್ತುತ ಸುಮಾರು 800 ಚ.ಕಿ.ಮೀ.ಗಳಷ್ಟಿದ್ದು, ಸುಮಾರು 1.30 ಕೋಟಿ ಜನಸಂಖ್ಯೆಯಿದೆ. ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿ ಹೊತ್ತಿರುವ ನನಗೆ, ಬೆಂಗಳೂರಿನ ಬೆಳವಣಿಗೆ ಅಗತ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ,’’ಎಂದರು.

‘‘ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಾಲ್ಕು ಗಡಿ ಗೋಪುರಗಳನ್ನು ನಿರ್ಮಿಸಿದ್ದರು. ಆ ಗಡಿಗಳನ್ನು ಮೀರಿ ಬೆಳೆದರೆ ಸಮಸ್ಯೆಗಳು ಎದುರಾಗುತ್ತದೆ ಎಂಬುದು ಅವರ ಕಲ್ಪನೆಯಾಗಿತ್ತು. ಆದರೆ ಈಗ ಆ ಗಡಿಗಳನ್ನು ಮೀರಿ ನಗರ ಬೆಳೆದಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ವರ್ಷದಿಂದ ವರ್ಷಕ್ಕೆ ಕಾವೇರಿ ನೀರಿನ ಕೊರತೆ ಎದುರಾಗುತ್ತಿದೆ. ಒಂದು ವೇಳೆ ಕಾವೇರಿ ನೀರು ನಿಂತರೆ ಜನರ ಪರಿಸ್ಥಿತಿಯನ್ನು ಊಹಿಸಲೂ ಆಗುವುದಿಲ್ಲ,’’ಎಂದರು.

Please follow and like us:
0
http://bp9news.com/wp-content/uploads/2018/05/dr-g-parameshwar.jpghttp://bp9news.com/wp-content/uploads/2018/05/dr-g-parameshwar-150x150.jpgPolitical Bureauಪ್ರಮುಖರಾಜಕೀಯBangalore needs to grow,Ramanagaram,Tumkur and Kolar grow : DCMvar domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಬೆಂಗಳೂರು: ಬೆಂಗಳೂರು ಬೆಳೆದದ್ದು ಸಾಕು. ಬದಲಿಗೆ ರಾಮನಗರ , ತುಮಕೂರು, ಕೋಲಾರ ಸೇರಿದಂತೆ ಬೆಂಗಳೂರಿಗೆ ಅಕ್ಕಪಕ್ಕದಲ್ಲಿರುವ ನಗರಗಳು ಬೆಳೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಹಾಗೂ ಕೃಷಿಕ ಸಾಹಿತ್ಯ ಪರಿಷತ್ ಶನಿವಾರ...Kannada News Portal