ಬೆಂಗಳೂರು: ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಮೂರು ಮತ್ತು ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಒಟ್ಟು 70 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಿದೆ. ಜೂ. 12ರಂದು ಮತ ಎಣಿಕೆಯೊಂದಿಗೆ ಅದು ಹೊರಬೀಳಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.91.84ರಷ್ಟು ಮಂದಿ ಮತದಾನ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಂತೆ ವಿಧಾನ ಪರಿಷತ್‌ ಚುನಾವಣೆಯಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಶೇ. 64.11ರಷ್ಟು ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. ಉಳಿದಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.79.91, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80.45, ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಶೇ.70.04, ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಶೇ.70.13 ಮಂದಿ ಮತದಾನ ಮಾಡಿದ್ದಾರೆ.


ಆರು ಸ್ಥಾನಗಳಿಗೆ ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆದಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವಂತಹ ಘಟನೆಗಳು ನಡೆದಿದ್ದು, ಈ ಬಗ್ಗೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿರುವುದು ಹೊರತುಪಡಿಸಿ ಗೊಂದಲ, ಗದ್ದಲಗಳಿಲ್ಲದೆ ಮತದಾನ ನಡೆಯಿತು.

ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಬೆಳಗ್ಗೆ 7ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸುಮಾರು 11 ಗಂಟೆವರೆಗೆ ಮಂದಗತಿಯಲ್ಲಿ ನಡೆಯಿತು. ಶೇ.15.37ರಿಂದ ಶೇ. 24.37ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ನಂತರ ಮತದಾನ ಬಿರುಸುಗೊಂಡಿದ್ದು, ಸಂಜೆ 4 ಗಂಟೆ ವೇಳೆ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಆಗ್ನೇಯ ಶಿಕ್ಷಕರ ಕ್ಷೇತ್ರ- ಶೇ. 91.84
ದಕ್ಷಿಣ ಶಿಕ್ಷಕರ ಕ್ಷೇತ್ರ- ಶೇ. 79.91
ನೈರುತ್ಯ ಶಿಕ್ಷಕರ ಕ್ಷೇತ್ರ- ಶೇ. 80.45
ನೈರುತ್ಯ ಪದವೀಧರರ ಕ್ಷೇತ್ರ- ಶೇ. 70.04
ಬೆಂಗಳೂರು ಪದವೀಧರರ ಕ್ಷೇತ್ರ- ಶೇ. 64.11
ಈಶಾನ್ಯ ಪದವೀಧರರ ಕ್ಷೇತ್ರ- ಶೇ. 70.13

ಶಿಕ್ಷಕ ಮತದಾರರಿಗೆ ಭರ್ಜರಿ ಗಿಫ್ಟ್ :

ಬೆಂಗಳೂರು ಒಂದರಲ್ಲಿ ತಾಲೂಕಿನ ಶಿಕ್ಷಕ ಮತದಾರರನ್ನು ಸೇರಿಸಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಬಾಡೂಟ ಹಾಕಿಸಿ, ಬ್ರಾಂಡೆಡ್‌ ಮದ್ಯವನ್ನೂ ನೀಡಲಾಯಿತು. ಜೊತೆಗೆ, ಪ್ರತಿಯೊಬ್ಬರಿಗೂ ಕವರ್‌ನಲ್ಲಿ 500 ರೂ.ಜೊತೆಗೆ, ಒಂದು ಪೆನ್ನು ಹಾಕಿಕೊಡಲಾಗಿದೆ ಎಂದು ರಾಜಕೀಯ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು. ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಮೈಸೂರಿನಲ್ಲಿ ಸ್ಥಳೀಯ ಮುಖಂಡರೊಬ್ಬರ ತೋಟದ ಮನೆ : ಶಿಕ್ಷಕರೇ ಮತದಾರರಾಗಿರುವ ಈ ಚುನಾವಣೆಯಲ್ಲೂ ಹಣ-ಹೆಂಡ-ಬಾಡೂಟದ ಆಮಿಷ ಜೋರಾಗಿ ನಡೆದಿದೆ. ಇದನ್ನು ಮತಗಟ್ಟೆಗಳ ಬಳಿ ಪಕ್ಷಗಳ ಕಾರ್ಯಕರ್ತರುಗಳೇ ಹೆಚ್ಚುಗಾರಿಕೆ ಎಂಬಂತೆ ಹೇಳಿ ಆಗ್ನೇಯ ಶಿಕ್ಷಕರ ಕ್ಷೇತ್ರವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲೂಕುಗಳಲ್ಲಿ ಅಭ್ಯರ್ಥಿಗಳು ಶಿಕ್ಷಕರಿಗೆ ವಿವಿಧ ಆಸೆ, ಆಮಿಷಗಳನ್ನು ನೀಡುವುದರ ಜೊತೆಗೆ ಬೆಳ್ಳಿ ಬಟ್ಟಲು, ಕೈ ಗಡಿಯಾರಗಳನ್ನು ಪ್ಯಾಕಿಂಗ್‌ ಮಾಡಿ ವಿತರಿಸಿದರೆ, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಪ್ರತಿ ಓಟಿಗೆ ಸಾವಿರ ರೂ.ನಿಂದ ಎರಡು ಸಾವಿರ ರೂ.ವರೆಗೂ ನಗದು ನೀಡಿದ್ದಾರೆ ಎಂಬ ಮಾತುಗಳು ಜಿಲ್ಲೆಯ ಶಿಕ್ಷಕರಿಂದಲೇ ಕೇಳಿ ಬಂತು. ಜೊತೆಗೆ, ಹಲವು ದಿನಗಳಿಂದ ಶಿಕ್ಷಕರಿಗೆ ಕದ್ದುಮುಚ್ಚಿ ಎಣ್ಣೆ ಪಾರ್ಟಿ, ಬಾಡೂಟಗಳನ್ನು ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. ಚಿಂತಾಮಣಿ ತಾಲೂಕಿನ ಕೆಲವೆಡೆ ಮತಗಟ್ಟೆ ಕೇಂದ್ರಗಳ ಸಮೀಪವೇ ಶಿಕ್ಷಕರಿಗೆ ಹಣ ವಿತರಿಸಲಾಗಿದೆ. ಹಣ ಪಡೆಯದವರಿಗೆ ಗಿಫ್ಟ್ಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈಶಾನ್ಯ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ವಾಡಿಯ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 67ರಲ್ಲಿ ಬಾಸ್ಕರ್‌ ರೆಡ್ಡಿ ಎನ್ನುವ ಬಳ್ಳಾರಿ ಮೂಲದ ಜೆಡಿಎಸ್‌ ಮುಖಂಡರೊಬ್ಬರು ಮತಗಟ್ಟೆಗೆ ಬರುತ್ತಿದ್ದ ಪದವೀಧರ ಮತದಾರರಿಗೆ ಗೌಪ್ಯವಾಗಿ ಬೆಳ್ಳಿ ನಾಣ್ಯ ಮತ್ತು 500 ರೂ.ಹಂಚಿ ಜೆಡಿಎಸ್‌ ಅಭ್ಯರ್ಥಿ ಎನ್‌.ಪ್ರತಾಪರೆಡ್ಡಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸಿದಾಗ ಆತನಲ್ಲಿ ಜೆಡಿಎಸ್‌ ಕರಪತ್ರಗಳು, ಸಾಯಿಬಾಬಾ ಮತ್ತು ಓಂ ಎಂದು ಮುದ್ರಿಸಲಾದ ತಲಾ 10 ಗ್ರಾಂ ತೂಕದ ಒಟ್ಟು 48 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಹಣವಿದ್ದ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ.

Please follow and like us:
0
http://bp9news.com/wp-content/uploads/2018/06/maxresdefault-10-1024x576.jpghttp://bp9news.com/wp-content/uploads/2018/06/maxresdefault-10-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯBANGALORE: The lowest voter turnout in the graduate electionsಬೆಂಗಳೂರು: ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಮೂರು ಮತ್ತು ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಒಟ್ಟು 70 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಿದೆ. ಜೂ. 12ರಂದು ಮತ ಎಣಿಕೆಯೊಂದಿಗೆ ಅದು ಹೊರಬೀಳಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.91.84ರಷ್ಟು ಮಂದಿ ಮತದಾನ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಂತೆ ವಿಧಾನ ಪರಿಷತ್‌ ಚುನಾವಣೆಯಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ...Kannada News Portal