ಬೀದರ್‌: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಮಾನಸಿಕ ಒತ್ತಡ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಈಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಬೀದರ್​​​ನ ಕುಟುಂಬ ಒಂದು ಪರಿಹಾರ ಕಂಡು ಹಿಡಿದಿದೆ. ಅದು ಏನು ಗೊತ್ತಾ..? ಮುಂದೆ ಓದುತ್ತಾ ಹೋಗಿ ನಿಮಗೆ ತಿಳಿಯುತ್ತದೆ.

ಬೀದರ್​​ನ  ಆದರ್ಶನಗರದ  ಅಮೃತಪ್ಪ ಕುಟುಂಬ ಹಲವು ವರ್ಷಗಳಿಂದ ಸತತವಾಗಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿದೆ. 6 ವರ್ಷಗಳ ಹಿಂದೆ ಪರಿಹಾರ ಕಂಡು ಹಿಡಿಯುವಲ್ಲಿ ಯಶಸ್ವಿಕೂಡಾ ಆಗಿದೆ. ಅಮೃತಪ್ಪ ಅವರ ಪ್ರಕಾರ ಕೀಟ ನಾಶಕ, ರಾಸಾಯನಿಕ ಗೊಬ್ಬರ ಉಪಯೋಗಿಸದೆ ಸಿರಿ ಧಾನ್ಯ ಬಳಕೆಯಿಂದ ಈ ಮೇಲಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಹೇಳುತ್ತಾರೆ.

ಇದಕ್ಕಾಗಿ ಅವರು 6 ವರ್ಷಗಳಿಂದ ಸುತ್ತಮುತ್ತಲಿನ ಜನರಿಗೆ ಸಿರಿ ಧಾನ್ಯಗಳನ್ನ ಬಳಸಿ ಅದರ ಉಪಯೋಗಗಳನ್ನ ಜನರಿಗೆ ಪರಿಚಯಿಸಿದ್ದಾರೆ.ಅರ ಪ್ರಕಾರ  ತುಳಸಿ ಕಷಾಯ, ಅಮೃತಬಳ್ಳಿ ರಸ, ಕಷಾಯ, ಸುಕಮಲಿ ಟೀ ಮಾಡಿ ಕೊಡುತ್ತೇವೆ.  ಹಾಗಲಕಾಯಿ, ಕರಬೇವು, ಹವೀಜಾ, ಹಸಿಶುಂಠಿ, ಮೆಣಸಿನ ಕಾಳಿನಿಂದ ಕೂಡಿದ ಪಾನೀಯ ಸಿದ್ಧಪಡಿಸುತ್ತೇವೆ. ಲೈಂಗಿಕ ಆಸಕ್ತಿ ಕುಂಠಿತಗೊಂಡವರು, ನರ ದೌರ್ಬಲ್ಯ ಇರುವ ಹಾಗೂ ಅಶಕ್ತರು ಸೇವಿಸುವುದರಿಂದ ಶಕ್ತಿ ಬರುತ್ತದೆ. ಹೀಗಾಗಿ ಇದಕ್ಕೆ ಬೇಡಿಕೆ ಇದೆ.  ಪ್ರಾಯೋಗಿಕವಾಗಿ ನಮ್ಮ ಏರಿಯಾದಲ್ಲಿ ವಾಯು ವಿಹಾರಕ್ಕೆ ಹೋಗಿ ಬರುವವರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಈ ಕಷಾಯವನ್ನ ನೀಡುತ್ತಿದ್ದೇವೆ.

ಇದಲ್ಲದೆ ದೇಹದ ಬವಣೆ ನೀಗಿಸುವ ಸಿರಿಧಾನ್ಯಗಳ ಬಗೆಗೆ ಜನಪದರು ಹಾಗೂ ವಚನಕಾರರು ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಕಿರುಧಾನ್ಯದ ಮಹತ್ವ ವಿವರಿಸುವ ಗಾದೆಗಳೂ ಇವೆ. ಆದರೆ, ಪ್ರಾಯೋಗಿಕವಾಗಿ ಕಿರುಧಾನ್ಯಗಳನ್ನು ಬಳಸುವವರು ಬಹಳ ಕಡಿಮೆ. ಆದರೆ ಅಮೃತಪ್ಪ ಕುಟುಂಬ ಮನೆಯಿಂದಲೇ ಜಾಗೃತಿ ಆರಂಭಿಸಿ ಈಗ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಸಿರಿಧಾನ್ಯಗಳಿಂದ ಹೊಸ ಹೊಸ ಉಪಾಹಾರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದಾರೆ. ನೈಸರ್ಗಿಕ ಉಪಾಹಾರದ ಹೆಸರಲ್ಲಿ ಸಿರಿಧಾನ್ಯ ಬಳಸಿ ಇಡ್ಲಿ, ಉಪ್ಪಿಟ್ಟು, ವಡೆ, ಕಿಚಡಿ, ಗಂಜಿ, ಕಷಾಯ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರ ಮಹತ್ವ ಅರಿತ ಜನರು ಇವರ ಬಳಿ ಸಾಲುಗಟ್ಟಿ ನಿಂತು ಅವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

‘ಅಧಿಕ ನಾರಿನಂಶ ಹಾಗೂ ಮಿಲೋಸ್‌ ಅಂಶವನ್ನು ಹೊಂದಿರುವ ಸಿರಿಧಾನ್ಯಗಳು ರಕ್ತಹೀನತೆ, ಜಠರದ ಖಾಯಿಲೆ, ಅಧಿಕ ರಕ್ತದೊತ್ತಡ, ಮೂತ್ರಕೋಶದಲ್ಲಿನ ಹರಳು, ಹೊಟ್ಟೆ ಹುಣ್ಣಿನ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ಅಷ್ಟೇ ಅಲ್ಲ ಹೃದಯದ ಕಾಯಿಲೆಗಳು ಮತ್ತು ಮಧುಮೇಹದ ಆತಂಕವನ್ನು ದೂರ ಮಾಡುತ್ತದೆ ಎನ್ನುವುದನ್ನು ತಜ್ಞರಿಂದ ಅರಿತುಕೊಂಡು ನಂತರ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರಂತೆ.

ಇನ್ನು ಸಿರಿಧಾನ್ಯಗಳಲ್ಲಿ ಪ್ರೊಟೀನ್‌, ನಾರಿನಂಶ, ಬಿ ಕಾಂಪ್ಲೆಕ್ಸ್‌, ಅಮೈನೊ ಆಮ್ಲಗಳು, ಫೋಲಿಕ್‌ ಆಮ್ಲ, ವಿಟಮಿನ್‌ ಇ, ಕಬ್ಬಿಣ, ತಾಮ್ರ, ಫಾಸ್ಫರಸ್‌, ಪೊಟಾಷಿಯಂ, ಕ್ಯಾಲ್ಸಿಯಂ ವಿಫುಲವಾಗಿರುತ್ತವೆ. ಸಿರಿಧಾನ್ಯಗಳಲ್ಲಿ ಕೊಬ್ಬಿನಾಂಶವು ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರ ಅಭಿಪ್ರಾಯ.

 

Please follow and like us:
0
http://bp9news.com/wp-content/uploads/2018/05/file704emlsqski1edjrybaf.jpghttp://bp9news.com/wp-content/uploads/2018/05/file704emlsqski1edjrybaf-150x150.jpgBP9 Bureauಕೃಷಿಪ್ರಮುಖಬೀದರ್ಬೀದರ್‌: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಮಾನಸಿಕ ಒತ್ತಡ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಈಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಬೀದರ್​​​ನ ಕುಟುಂಬ ಒಂದು ಪರಿಹಾರ ಕಂಡು ಹಿಡಿದಿದೆ. ಅದು ಏನು ಗೊತ್ತಾ..? ಮುಂದೆ ಓದುತ್ತಾ ಹೋಗಿ ನಿಮಗೆ ತಿಳಿಯುತ್ತದೆ. ಬೀದರ್​​ನ  ಆದರ್ಶನಗರದ  ಅಮೃತಪ್ಪ ಕುಟುಂಬ ಹಲವು ವರ್ಷಗಳಿಂದ ಸತತವಾಗಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿದೆ. 6 ವರ್ಷಗಳ ಹಿಂದೆ ಪರಿಹಾರ...Kannada News Portal