ಸಿನಿಟಾಕ್​ |:  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್​ ಟ್ರೇಲರ್​ ಬಿಡುಗಡೆಗೆ ಮುನ್ನವೇ ಸಿಕ್ಕಾಪಟ್ಟೆ ಸೌಂಡ್​  ಮಾಡುತ್ತಿದೆ. ಚಿತ್ರಕ್ಕೆ ಬಾಲಿವುಡ್​ ಸ್ಟಾರ್​ ದಂಡು ಬರುತ್ತದೆ ಎಂದು ಸುದ್ದಿ ಕೂಡ ಇದೆ. ಈಗಾಗಲೇ ಪೋಸ್ಟರ್​  ಮೂಲಕ ಕುತೂಹಲ  ಮೂಡುತ್ತಿದೆ. ಅಂದಹಾಗೇ ಸುದೀಪ್​ಗೆ ಜಿಮ್​ ಬಗ್ಗೆ ಅಂತಹ ಆಸಕ್ತಿ ಏನೂ ಇಲ್ಲ, ಅಲ್ಲದೇ ತೊಡಗಿಸಿಕೊಳ್ಳಲು ನನಗೆ ಇಷ್ಟ ಇಲ್ಲ  ಎಂದು ಸುದೀಪ್​  ಅವರೇ ಸ್ವತಃ ಹೇಳಿಕೊಂಡಿದ್ದರು. ಆದರೆ ಅವರ ಹೊಸ ಸಿನಿಮಾ ಪೆಲ್ವಾನ್​ ಅಂತಾ ಹೆಸರು ಇದ್ದು ಅದರಂತೇ  ಸ್ಕ್ರೀನ್​ಗೆ ಸೆಟ್​ ಆಗಲು ಜಿಮ್​ ಅನಿವಾರ್ಯವಾಗಿದೆ. ತಮ್ಮ ಟ್ವಿಟ್ಟರ್​ ಮೂಲಕ ಪೈಲ್ವಾನ್​ ಚಿತ್ರದ ಬಗ್ಗೆ  ಪ್ರತೀದಿನ   ಅಪ್ಟೇಟ್ ಮಾಡುತ್ತಿರುವ ಸುದೀಪ್​, ತಮ್ಮ  ಬಾಕ್ಸಿಂಗ್​ ಪೋಸ್ಟರ್​ಗಳನ್ನು  ಟ್ವಿಟ್ಟರ್​ನಲ್ಲಿ ಹಾಕಿದ್ದಾರೆ. ಅಂದಹಾಗೇ ಎಲ್ಲೆಡೆ  ವೈರಲ್​ ಆಗುತ್ತಿವೆ ಸುದೀಪ್​ ಪೈಲ್ವಾನ್​ ಪೋಸ್ಟ್​ರ್​ಗಳು.

ಹೆಬ್ಬುಲಿ  ಸಿನಿಮಾದಲ್ಲಿ ಒಂದಾಗಿದ್ದ ನಿರ್ದೇಶಕ ಕೃಷ್ಣ ಮತ್ತು ಸುದೀಪ್​ ಮತ್ತೆ ಪೈಲ್ವಾನ್​ನಲ್ಲಿ ಕೈ ಕೈ ಹಿಡಿದಿದ್ದಾರೆ. ಚುನಾವಣೆಯ ಫಲಿತಾಂಶ ನಂತರ ಚಿತ್ರದ ಮುಹೂರ್ತ ಸೆಟ್ಟೇರಲಿದೆ ಎಂದು ತಿಳಿಸಿದ್ದರು. ಅದರಂತೆ  ಚಿತ್ರ  ಮೂಹೂರ್ತ ಕೂಡ ನಡೆದು ಸದ್ಯ ಶೂಟಿಂಗ್​ ನಡೆಯುತ್ತಿದೆ.  ಮಸ್ತ್​ ಟೈಟಲ್​ ಜೊತೆ  ಸೂಪರ್​ ಸ್ಟಾರ್​  ಕಾಂಬಿನೇಷನ್​ನಲ್ಲಿ  ಮಾಸ್​ ಸಿನಿಮಾ ಅಂತೂ ಬರುತ್ತಿದೆ. ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್​ಮೆಂಟ್​ ಆಗಿದ್ದಾರೆ ಕಿಚ್ಚ ಸುದೀಪ್​.  ಬಾಲಿವುಡ್ ನಟ ಸುನೀಲ್​ ಶೆಟ್ಟಿ ಬಿಟೌನ್​ನ ಗ್ಲಾಮರ್​  ಗೊಂಬೆ ಆಕಾಂಕ್ಷ ಸಿಂಗ್​ , ಕಬೀರ್​ ದುಹಾನ್​ ರಂತಹ ಸ್ಟಾರ್​ ಬಳಗವನ್ನೇ   ಹೊಂದಿರುವ ಪೈಲ್ವಾನ್​ಗೆ ಅರ್ಜುನ್​ ಜನ್ಯ ಸಂಗೀತ  ನಿರ್ದೇಶನ ನೀಡಿದ್ದಾರೆ.  ಚೆನ್ನೈ ಸುತ್ತ-ಮುತ್ತಾ ಶೂಟಿಂಗ್​ ನಡೆಯುತ್ತಿದ್ದು, ಕಿಚ್ಚನ ಅಭಿಮಾನಿಗಳು ಅಂತೂ  ಪೈಲ್ವಾನ್​ ಸಿನಿಮಾವನ್ನು ನಿರೀಕ್ಷೆ ಮಾಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/maxresdefault-2-4-1024x576.jpghttp://bp9news.com/wp-content/uploads/2018/05/maxresdefault-2-4-150x150.jpgBP9 Bureauಸಿನಿಮಾಸಿನಿಟಾಕ್​ |:  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್​ ಟ್ರೇಲರ್​ ಬಿಡುಗಡೆಗೆ ಮುನ್ನವೇ ಸಿಕ್ಕಾಪಟ್ಟೆ ಸೌಂಡ್​  ಮಾಡುತ್ತಿದೆ. ಚಿತ್ರಕ್ಕೆ ಬಾಲಿವುಡ್​ ಸ್ಟಾರ್​ ದಂಡು ಬರುತ್ತದೆ ಎಂದು ಸುದ್ದಿ ಕೂಡ ಇದೆ. ಈಗಾಗಲೇ ಪೋಸ್ಟರ್​  ಮೂಲಕ ಕುತೂಹಲ  ಮೂಡುತ್ತಿದೆ. ಅಂದಹಾಗೇ ಸುದೀಪ್​ಗೆ ಜಿಮ್​ ಬಗ್ಗೆ ಅಂತಹ ಆಸಕ್ತಿ ಏನೂ ಇಲ್ಲ, ಅಲ್ಲದೇ ತೊಡಗಿಸಿಕೊಳ್ಳಲು ನನಗೆ ಇಷ್ಟ ಇಲ್ಲ  ಎಂದು ಸುದೀಪ್​  ಅವರೇ ಸ್ವತಃ ಹೇಳಿಕೊಂಡಿದ್ದರು. ಆದರೆ ಅವರ ಹೊಸ ಸಿನಿಮಾ ಪೆಲ್ವಾನ್​...Kannada News Portal