ಬಾಗೇಪಲ್ಲಿ :ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ  ಪಟ್ಟಣದ ವಿಕಾಸ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ
ಪಾಲ್ಗೊಂಡು ಸಾಕಷ್ಟು ಕ್ರೀಡೆಗಳಲ್ಲಿ ವಿಜೇತರಾಗುವುದರ ಮೂಲಕ ಕಾಲೇಜಿನ ಸಾಧನೆ ಗರಿಮೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ .

ವಿಜೇತರಾದ ಕ್ರೀಡಾಪಟುಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್.ಶಿವಣ್ಣ ಭಾಗವಹಿಸಿ ಮಾತನಾಡುತ್ತಾ ನಮ್ಮ ಕಾಲೇಜಿಗೆ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಚಾರ, ಅದರಲ್ಲೂ ಬಹುತೇಕ ವಿದ್ಯಾರ್ಥಿಗಳು ಕೃಷಿಕ ಕುಟುಂಬಗಳಿಂದ ಬಂದವರಾಗಿದ್ದಾರೆ  ಹಾಗೂ ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದು, ನಮ್ಮ ಕಾಲೇಜಿನ ಉಪನ್ಯಾಸಕ ಸಿಬ್ಬಂದಿಯೂ ವಿದ್ಯಾರ್ಥಿಗಳ ಜೊತೆ ಅನ್ಯೋನ್ಯ ಬಾಂಧವ್ಯ ಬೆಳೆಸಿಕೊಂಡು ಹೆಚ್ಚಿನ ಕಾಲಾವಕಾಶವನ್ನು ಕ್ರೀಡೆಗಳಿಗೆ   ಮೀಸಲಿಟ್ಟು ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕ್ರೀಡಾ ಜಗತ್ತಿಗೆ ಅನುಕೂಲವಾಗಲೆಂದು ತರಬೇತಿಯಲ್ಲಿ ನಿಪುಣರಾಗಿರುತ್ತಾರೆ.

ಈ ಸದಾವಕಾಶವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಸದ್ಬಳಕೆ ಮಾಡಿಕೊಂಡು ತಾಲ್ಲೂಕು ಮಟ್ಟದ ಹೆಚ್ಚಿನ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿ ಕೊಡುವುದರ ಮೂಲಕ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿ ತಾಲ್ಲೂಕಿನ ಕಾಲೇಜುಗಳ ಚಾಂಪಿಯನ್ ಮಟ್ಟಕ್ಕೆ ಉನ್ನತಿ ಪಡೆದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲ್ಲೂಕು ಕಾರ್ಯದರ್ಶಿ ಬೈಯಪರೆಡ್ಡಿ, ಎನ್ಎಸ್ಎಸ್ ಶಿಬಿರಾಧಿಕಾರಿ  ರವಿಕುಮಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟಸ್ವಾಮಿ, ಉಪನ್ಯಾಸಕರಾದ ಸಿದ್ದರಾಮ್, ಅಶೋಕ, ಶಿವಾನಂದ,ಅಜೇಯ್, ವೆಂಕಟಾಚಲಪತಿ, ಸುಕೇಶ್,ಸಮತಾ, ವೀಣಾ,ಎಲ್.ವಿ.ಎನ್. ಮತ್ತಿತರರು ಉಪಸ್ಥಿತರಿದ್ದರು.
Please follow and like us:
0
http://bp9news.com/wp-content/uploads/2018/09/Karnatakada-Miditha-17.jpeghttp://bp9news.com/wp-content/uploads/2018/09/Karnatakada-Miditha-17-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖಬಾಗೇಪಲ್ಲಿ :ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ  ಪಟ್ಟಣದ ವಿಕಾಸ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಕಷ್ಟು ಕ್ರೀಡೆಗಳಲ್ಲಿ ವಿಜೇತರಾಗುವುದರ ಮೂಲಕ ಕಾಲೇಜಿನ ಸಾಧನೆ ಗರಿಮೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ . ವಿಜೇತರಾದ ಕ್ರೀಡಾಪಟುಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್.ಶಿವಣ್ಣ ಭಾಗವಹಿಸಿ ಮಾತನಾಡುತ್ತಾ ನಮ್ಮ ಕಾಲೇಜಿಗೆ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಚಾರ, ಅದರಲ್ಲೂ ಬಹುತೇಕ...Kannada News Portal