ಬೆಂಗಳೂರು : ನಾನು ಮುಖ್ಯಮಂತ್ರಿ ಆದ 24 ಗಂಟೆಗಳ ಒಳಗೆ ರೈತರ ಸಾಲ ಮನ್ನ ಮಾಡುತ್ತೇನೆ ಎಂದು ಹೇಳಿ ಇದೀಗ ನನಗೆ ರಾಜ್ಯದ ಜನತೆ ಪೂರ್ಣ ಬಹುಮತ ನೀಡಿಲ್ಲ. ಅದಕ್ಕಾಗಿ ನಾನು ಮೈತ್ರಿ ಸರ್ಕಾರ ಮಾಡಬೇಕಾಯ್ತು. ಕಾಂಗ್ರೆಸ್​ನವರನ್ನು ಕೇಳಿ ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಇದು ಕುಮಾರಸ್ವಾಮಿ ಸಿಎಂ ಆಗುವ ಮೊದಲೇ ರೈತರಿಗೆ ಮಾಡುತ್ತಿರುವ ದ್ರೋಹ.

ಕುಮಾರಸ್ವಾಮಿ ಈಗಲಾದರೂ ಮಾತಿನ ಮೇಲೆ ನಿಲ್ಲಬೇಕು. ಮಾತು ತಪ್ಪದ ಅವಕಾಶ ಮತ್ತೆ ನಿಮಗೆ ಸಿಕ್ಕಿದೆ ಇದನ್ನು ಅಪವಿತ್ರ ಮೈತ್ರಿಯ ಭಾವಿ ಸಿಎಂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.

ಇನ್ನು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಮಾತುಕೊಟ್ಟಂತೆ ನಡೆಯುತ್ತೇನೆ ಎಂದು ಹೇಳುತ್ತಿಲ್ಲ. ಇನ್ನೂ ಪೂರ್ಣಪ್ರಮಾಣದ ಸಿಎಂ ಆದ ಮೇಲೆ ದೇವರೇ ಗತಿ ಎಂದಿದ್ದು, ಭಾವಿ ಸಿಎಂ ಟೆಂಪಲ್ ರನ್ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/17BGHDK-1.jpghttp://bp9news.com/wp-content/uploads/2018/05/17BGHDK-1-150x150.jpgPolitical Bureauಪ್ರಮುಖರಾಜಕೀಯBetrayal farmers Stop Speaking !!!ಬೆಂಗಳೂರು : ನಾನು ಮುಖ್ಯಮಂತ್ರಿ ಆದ 24 ಗಂಟೆಗಳ ಒಳಗೆ ರೈತರ ಸಾಲ ಮನ್ನ ಮಾಡುತ್ತೇನೆ ಎಂದು ಹೇಳಿ ಇದೀಗ ನನಗೆ ರಾಜ್ಯದ ಜನತೆ ಪೂರ್ಣ ಬಹುಮತ ನೀಡಿಲ್ಲ. ಅದಕ್ಕಾಗಿ ನಾನು ಮೈತ್ರಿ ಸರ್ಕಾರ ಮಾಡಬೇಕಾಯ್ತು. ಕಾಂಗ್ರೆಸ್​ನವರನ್ನು ಕೇಳಿ ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಇದು ಕುಮಾರಸ್ವಾಮಿ ಸಿಎಂ ಆಗುವ ಮೊದಲೇ ರೈತರಿಗೆ ಮಾಡುತ್ತಿರುವ ದ್ರೋಹ. ಕುಮಾರಸ್ವಾಮಿ ಈಗಲಾದರೂ ಮಾತಿನ ಮೇಲೆ ನಿಲ್ಲಬೇಕು. ಮಾತು ತಪ್ಪದ ಅವಕಾಶ...Kannada News Portal