ಬೆಳಗಾವಿ: ಬೃಹತ್ ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸಲಹೆ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಸೋಮವಾರ ಹೇಳುವ ಮೂಲಕ ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆ ಬೇಕೆಂಬ ಬೇಡಿಕೆ ಮತ್ತೆ ನನೆಗುದಿಗೆ ಬಿದ್ದಿದೆ.

ಜಿಲ್ಲೆಯ ಸಂಸದರು, ಶಾಸಕರು, ಸರ್ವಪಕ್ಷ ಮುಖಂಡರೊಡನೆ ಸೋಮವಾರ  ನಡೆಸಿದ ಮಹತ್ವದ ಸಭೆಯ ಸಂದರ್ಭದಲ್ಲಿ ಸಿ ಎಂ ಸಿದ್ಧರಾಮಯ್ಯ ತಜ್ಞರ ಸಮಿತಿ ರಚನೆ ಕುರಿತಂತೆ ಪ್ರಸ್ತಾಪಿಸಿದ್ದು, , ಸಭೆಯಲ್ಲಿದ್ದವರಿಗೆ ತೀವ್ರ ನಿರಾಶೆ ಉಂಟುಮಾಡಿತು.

ತಜ್ಞರ ಸಮಿತಿಯು ವಿವರ  ಅಧ್ಯಯನ ನಡೆಸಿ, ಸಲ್ಲಿಸುವ ವರದಿ ಆಧರಿಸಿ ಜಿಲ್ಲಾ ವಿಭಜನ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಸಭೆಯ ತಿಳಿಸಿದರು.ಸಿಎಂ ಅವರ ಹೇಳಿಕೆಯಿಂದ  ಅಸಮಾಧಾನಗೊಂಡ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ತಕ್ಷಣ ಸಭೆಯಿಂದ ಹೊರ ನಡೆದು ತಮ್ಮ  ಅಕ್ರೋಶ ಹೊರಹಾಕಿದರು. ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸರ್ವಪಕ್ಷ ನಾಯಕರು ಸೋಮವಾರದ ಸಭೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
0
http://bp9news.com/wp-content/uploads/2018/03/WhatsApp-Image-2018-03-19-at-5.21.02-PM-1024x576.jpeghttp://bp9news.com/wp-content/uploads/2018/03/WhatsApp-Image-2018-03-19-at-5.21.02-PM-150x150.jpegBP9 Bureauಬೆಳಗಾವಿಬೆಳಗಾವಿ: ಬೃಹತ್ ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸಲಹೆ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಸೋಮವಾರ ಹೇಳುವ ಮೂಲಕ ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆ ಬೇಕೆಂಬ ಬೇಡಿಕೆ ಮತ್ತೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯ ಸಂಸದರು, ಶಾಸಕರು, ಸರ್ವಪಕ್ಷ ಮುಖಂಡರೊಡನೆ ಸೋಮವಾರ  ನಡೆಸಿದ ಮಹತ್ವದ ಸಭೆಯ ಸಂದರ್ಭದಲ್ಲಿ ಸಿ ಎಂ ಸಿದ್ಧರಾಮಯ್ಯ ತಜ್ಞರ ಸಮಿತಿ ರಚನೆ ಕುರಿತಂತೆ ಪ್ರಸ್ತಾಪಿಸಿದ್ದು, , ಸಭೆಯಲ್ಲಿದ್ದವರಿಗೆ ತೀವ್ರ ನಿರಾಶೆ ಉಂಟುಮಾಡಿತು. ತಜ್ಞರ ಸಮಿತಿಯು...Kannada News Portal