ಗೋಕಾಕ:  ರೈತಪರ ನಿಲುವು ಹೊಂದಿರುವ ಬಿಜೆಪಿ  ಪಕ್ಷದ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಚುನಾವಣಾ ವಾಗ್ದಾನದಂತೆ ರೈತರ ಸಾಲಮನ್ನಾ ಮಾಡಿರುವ ನಿರ್ಣಯವನ್ನು ತುಂಬುಹೃದಯದಿಂದ ಸ್ವಾಗತಿಸಿರುವ ಬಿಜೆಪಿ ಮುಖಂಡ ಅಶೋಕ ಪೂಜಾರಿ ಸಂತಸವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಜನಾರ್ಧನರು ನೀಡಿರುವ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಮತ್ತೊಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ. ಅವರು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಜನಪರ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ. ಆದರೆ ಸರ್ವಾಧಿಕಾರ ಮನೋಭಾವನೆಯ ಧಮನಕಾರಿ ನೀತಿಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ. ಅಂತಹ ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.

ನ್ಯಾಯಸಮ್ಮತ ಚುನಾವಣೆಗೆ ಒತ್ತಾಯಿಸಿದ್ದರೂ ಸಹ ಗೋಕಾಕ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಅತ್ಯಂತ ಕೀಳುಮಟ್ಟದ್ದಾಗಿತ್ತು. ಮತದಾರರಿಗೆ ಕೊನೆಯ ಎರಡು ದಿನ ಹಾಡೇ ಹಗಲು ರಾಜಾರೋಷವಾಗಿ ಕ್ಷೇತ್ರದಾದ್ಯಂತ ಹಣ ಹಂಚಿಕೆ ಮಾಡಿದರೂ ಚುನಾವಣಾ ಅಧಿಕಾರಿಗಳು ನಿಷ್ಕ್ರಿಯರಾಗಿ ಅವರಿಗೆ ಸಹಕಾರ ನೀಡಿದ್ದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ಮಾಡುವಂತಿತ್ತು. ಈ ಎಲ್ಲ ಅವ್ಯವಹಾರಗಳ ದಾಖಲಾತಿ ತಮ್ಮಲ್ಲಿ ಇದ್ದು ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ದಾಖಲಿಸುವುದಾಗಿ ಹೇಳಿದರು.

ಸತತ ಮೂರು ಚುನಾವಣೆಗಳಲ್ಲಿ ಇಂತಹ ಸ್ಥಿತಿಯನ್ನು ನೋಡಿ ರೋಸಿಹೋಗಿರುವ ನಾವು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕಾರಣಕ್ಕೆ ಸಜ್ಜಾಗಬೇಕು ಎಂಬ ಗೊಂದಲದ ಮನಸ್ಥಿತಿಯಲ್ಲಿ ಇದ್ದೇವೆ. ಅನಿವಾರ್ಯವಾಗಿ ಇಂದಿನ ವ್ಯವಸ್ಥೆಗೆ ಪೂರಕವಾದ ರಾಜಕಾರಣಕ್ಕೆ ಅಣಿಯಾಗಬೇಕೇ? ಎಂಬ ಚಿಂತನೆ ಮನದಲ್ಲಿ ಕಾಡುತ್ತಿದೆ ಎಂದು ಹೇಳಿದ ಅವರು ಒಂದು ಕಡೆ ಮೌಲ್ಯಯುತ ರಾಜಕಾರಣ, ಇನ್ನೊಂದೆಡೆ ವಾಸ್ತವ ರಾಜಕೀಯ ವ್ಯವಸ್ಥೆಯ ನಡುವೆ ಸಿಲುಕಿ ಗೊಂದಲಮಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಇಂತಹ ಭ್ರಷ್ಟ ವ್ಯವಸ್ಥೆಯ ಚುನಾವಣೆಯ ನಡುವೆಯೂ ಸುಮಾರು 76 ಸಾವಿರ ಮತಗಳನ್ನು ತಮ್ಮ ಪರವಾಗಿ ಮತ ಚಲಾಯಿಸಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

Please follow and like us:
0
http://bp9news.com/wp-content/uploads/2018/05/17-GKK-1-1.jpghttp://bp9news.com/wp-content/uploads/2018/05/17-GKK-1-1-150x150.jpgBP9 Bureauಬೆಳಗಾವಿರಾಜಕೀಯಗೋಕಾಕ:  ರೈತಪರ ನಿಲುವು ಹೊಂದಿರುವ ಬಿಜೆಪಿ  ಪಕ್ಷದ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಚುನಾವಣಾ ವಾಗ್ದಾನದಂತೆ ರೈತರ ಸಾಲಮನ್ನಾ ಮಾಡಿರುವ ನಿರ್ಣಯವನ್ನು ತುಂಬುಹೃದಯದಿಂದ ಸ್ವಾಗತಿಸಿರುವ ಬಿಜೆಪಿ ಮುಖಂಡ ಅಶೋಕ ಪೂಜಾರಿ ಸಂತಸವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಜನಾರ್ಧನರು ನೀಡಿರುವ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಮತ್ತೊಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರನ್ನು...Kannada News Portal