ಅಥಣಿ : ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಅದರೊಂದಿಗೆ ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮ ಕಾಪಾಡಿಕೊಂಡು ಪರಿಸರ ಸ್ನೇಹ, ಜೈವಿಕ ವಿಧಾನಗಳಿಂದ ಕೀಟಗಳ ನಿವಾರಣೆ ಈಗ ಸುಲಭವಾಗಿದೆ.

ಸಾಂಪ್ರದಾಯಿಕ  ಆರೋಗ್ಯಕರ ಆಹಾರ ಉತ್ಪಾದನೆಯನ್ನು ಕೈಗೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ ಕೃಷಿ ತಜ್ಞರು.  ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಈಗಲೂ   ಈ ಪದ್ಧತಿಯನ್ನೂ ಕೆಲವು ಭಾಗಗಳಲ್ಲಿ ರೈತರು ಪಾಲಿಸಿಕೊಂಡು ಬಂದಿದ್ದಾರೆ. ಬೆರಳಣಿಕೆಯಷ್ಟು ರೈತರು ಮಾತ್ರ ಉತ್ತಮ ಬೆಳೆ ಆರೋಗ್ಯ ಸಾವಯವ ಕೃಷಿ ಪದ್ಧತಿಗೆ ಮುಂದಾಗಿದ್ದಾರೆ.   ಇತ್ತಿಚೀನ ದಿನಗಳಲ್ಲಿ ಪ್ರತಿಯೊಂದು ಬೆಳಗಳಲ್ಲೂ ಕೀಟನಾಶಕ ಔಷಧಿಗಳನ್ನು ಸಿಂಪಡಿಸುವುದೂ ಸಾಮನ್ಯವಾಗಿದೆ. ಅಷ್ಟೇ ಅಲ್ಲದೇ ತಾವು ಬೆಳೆದ ಬೆಳೆ ಸಂಗ್ರಹಣೆಗೂ ವಿಷಕಾರಿ  ಕೆಮಿಕಲ್ ಬಳಕೆ ಮಾಡುತ್ತಿರುವುದು ಕೂಡ ರೈತರಿಗೆ ಅನಿವಾರ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಡಲೆ ಬೆಳೆಯನ್ನು ಪೋಷಿಸಿಸೋದು ರೈತರಿಗೆ  ಒಂದು ರೀತಿ ಸವಾಲಾಗಿದೆ. ಕಡಲೆ ರಾಶಿ ಯಾದ ಮೇಲೆ ಕಡಲೆ ಕಾಳು ಶೀಖರಿಸುವುದು ಕೂಡ ಬಹುದೊಡ್ಡ  ಸವಾಲು. ಒಂದು ಕಡೆ ಮಾರುಕಟ್ಟೆಯಲ್ಲಿ ಕಡಲೆಕಾಳಿನ ದರ ಕಡಿಮೆಯಾದರೇ, ಮತ್ತೊಂದು ಕಡೆ ಈ ಅಲ್ಪ ಸ್ವಲ್ಪ ಬೆಳೆದು ತಂದ ಕಾಳಿನ ಸಂಗ್ರಹಣೆ  ರೈತರಿಗೆ ತಲೇನೋವಾಗಿದೆ.

ಕಡಲೆ ಕಾಳಿಗೆ ತಗಲುವ  ಬುರಬೂರಿ ಕೀಟವು ಇಡೀ  ಕಾಳನ್ನು  ನಾಶಮಾಡುತ್ತದೆ.   ಈ ಬುರುಬೂರಿ ಕೀಟಗಳ ಕಾಟ ನಿವಾರಣೆಗೆ  ಕೆಲ ರೈತರು ವಿಷಕಾರಿ ಕೆಮಿಕಲ್ ಬಳಸಿ ಸಂಪೂರ್ಣ ಕಡಲೆ ಯನ್ನು ವಿಷಕಾರಿ ಕಡಲೆಯನ್ನು ಹಾಗೇ  ಬೆಳೆದು ಅನಿವಾರ್ಯವಾಗಿ  ಮಾರಾಟ ಮಾಡುತ್ತಿದ್ದಾರೆ.

ಆದರೆ ಅಥಣಿ ತಾಲೂಕಿನ ಇಲ್ಲೂಬ್ಬ ರೈತರಾದ ಮೀರಾಸಾಬ್ ಮಿರಾಗೋಳ ಸಾವಯವ ಕೃಷಿಯ ಪದ್ಧತಿ ಯನ್ನು ಅನುಸರಿಸಿ ಕಡಲೆ ಕಾಳಿನ ಬುರಬೂರಿ  ಕೀಟವನ್ನು ನಿಯಂತ್ರಣ ಮಾಡಿರಿವುದು ವಿಶೇಷ ಎನ್ನಬಹುದಾಗಿದೆ. ಹೌದು ವಿಷಕಾರಿ ಅಂಶಗಳನ್ನು ಬಳಸಿ ನಮ್ಮ ಆರೋಗ್ಯ ಹಾಳು ಮಾಡಿಕೊಂಡು ನರುಳುವ ಮುನ್ನ ಸಾವಯವ ಕೃಷಿಯನ್ನು ಪಾಲನೆ ಮಾಡೋದಿಂದಾಗಿ ನಮ್ಮ ಆರೋಗ್ಯ ಇನ್ನು ಚೆನ್ನಾಗಿರುತ್ತದೆ ಎನ್ನುತ್ತಾರೆ.

ಇದನ್ನು ಅಥಣಿ ತಾಲೂಕಿನ ಕೆಲವು ರೈತರು ಈ ವಿಧಾನ ಅನುಸರಿಸುತ್ತಿದ್ದಾರೆ. ಇದರಿಂದಾಗಿ  ಕಡಲೆ ಕಾಳನ್ನು ಬಿಸಿಲಿನಲ್ಲಿ  ಒಣಗಿಸಿಲು ಇಡಬೇಕು,  ಮದ್ಯೆ ದಂಡೆ ಸಗಣಿಯ ಬರಣಿ (ಕೂಳ್ಳು)  ಇಡಬೇಕು ,ಸಗಣಿ ಕೂಳ್ಳಿನ ವಾಸನೆ ಮತ್ತು ಸೂರ್ಯನ ತಾಪಕ್ಕೆ ಕೀಟಗಳು ಸೆಗಣಿಯ ಕುಳ್ಳಿನಲ್ಲಿ ಸೇರುತ್ತದೆ ನಂತರ ಅದನ್ನು ನೀರಿನಲ್ಲಿ ಕುಳ್ಳನ್ನು ಜಾಡಿಸಿ ಕೀಟವನ್ನು ನಿವಾರಣೆಯಾಗುತ್ತದೆ ಎಂದು  ಮೀರಾಸಾಬ್ ಮಿರಾಗೋಳ  ಹೇಳುತ್ತಾರೆ .

ಸಾವಯವ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಂಡಾಗ ಮಾತ್ರ ರೋಗಮುಕ್ತ ಬೆಳೆ ಬೆಳೆಯುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಮಾಡವುದು ಸಾಧ್ಯ.

ವರದಿ : ಶಿವರಾಜ್ಎಂ.ನೇಸರಿಗೆ, ಅಥಣಿ
Please follow and like us:
0
http://bp9news.com/wp-content/uploads/2018/08/Karnatakada-Miditha-22.jpeghttp://bp9news.com/wp-content/uploads/2018/08/Karnatakada-Miditha-22-150x150.jpegBP9 Bureauಕೃಷಿಪ್ರಮುಖಬೆಳಗಾವಿಅಥಣಿ : ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಅದರೊಂದಿಗೆ ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮ ಕಾಪಾಡಿಕೊಂಡು ಪರಿಸರ ಸ್ನೇಹ, ಜೈವಿಕ ವಿಧಾನಗಳಿಂದ ಕೀಟಗಳ ನಿವಾರಣೆ ಈಗ ಸುಲಭವಾಗಿದೆ. ಸಾಂಪ್ರದಾಯಿಕ  ಆರೋಗ್ಯಕರ ಆಹಾರ ಉತ್ಪಾದನೆಯನ್ನು ಕೈಗೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ ಕೃಷಿ ತಜ್ಞರು.  ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಈಗಲೂ   ಈ ಪದ್ಧತಿಯನ್ನೂ ಕೆಲವು ಭಾಗಗಳಲ್ಲಿ ರೈತರು ಪಾಲಿಸಿಕೊಂಡು ಬಂದಿದ್ದಾರೆ. ಬೆರಳಣಿಕೆಯಷ್ಟು ರೈತರು ಮಾತ್ರ ಉತ್ತಮ ಬೆಳೆ ಆರೋಗ್ಯ...Kannada News Portal