ಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗಿನ ಜಾರಕಿಹೊಳಿ ಸಹೋದರರ ಕಿತ್ತಾಟ,ಪಕ್ಷದೊಂದಿಗಿನ ಮುನಿಸು ತಣ್ಣಗಾಗುವಂತೆ ಕಾಣುತ್ತಿಲ್ಲ. ಬೆಳಗಾವಿ ರಾಜಕೀಯ ಪ್ರಸ್ತುತ ಸಮ್ಮಿಶ್ರ ಸರ್ಕಾರವನ್ನ ಅಲ್ಲಾಡಿಸುವಂತೆ ಕಾಣುತ್ತಿದೆ. ಸಚಿವ ಜಾರಕಿಹೊಳಿ ಈಗ ಪಕ್ಷವನ್ನೇ ತೊರೆಯಲು ಮುಂದಾಗಿದ್ದಾರಂತೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ಮೂಲಗಳ ಮಾಹಿತಿ.

ಪಿಎಲ್​​​ಡಿ ಬ್ಯಾಂಕ್ ವಿಷಯ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಡಿಕೆಶಿ ಹಸ್ತಕ್ಷೇಪ ಸೇರಿದಂತೆ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯಲ್ಲಿಯು ಶಿವಕುಮಾರ್ ಕೈವಾಡ ಇದೆ ಎಂದು ಆರೋಪಿಸಿ ಜಾರಕಿಹೊಳಿ ಸಹೋದರರು ಕ್ಯಾತೆ ತೆಗೆದಿದ್ದರು. ಅಲ್ಲದೆ ಕಾಂಗ್ರೆಸ್ ವರಿಷ್ಠರ ಬಳಿ ಪಕ್ಷವನ್ನು ತೊರೆಯುವ ಬೆದರಿಕೆಯನ್ನು ಹಾಕಿದ್ದರು. ಪಕ್ಷದ ನಾಯಕರು ಸಂಧಾನ ನಡೆಸಿ ಸಮಸ್ಯೆಗೆ ತರೆ ಎಳೆಯುವ ಪ್ರಯತ್ನ ಮಾಡಿದ್ದರು. ಆದರೆ ಅದು ಈಗ ತಾತ್ಕಾಲಿಕ ಪರಿಹಾರ ಎನ್ನುವಂತೆ ಕಾಣುತ್ತಿದೆ.

ಏಕೆಂದರೆ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಗೋವಾ, ಮಹಾರಾಷ್ಟ್ರ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕೂಡ ಕೇಳಿ ಬಂದಿತ್ತು. ಅಲ್ಲದೇ ಬಿಜೆಪಿ ಕಾರ್ಯಕಾರಣಿಯನ್ನು ಮೊಟಕುಗೊಳಿಸಿದ ಯಡಿಯೂರಪ್ಪ ದಿಢೀರ್ ವಾಪಸ್ಸಾಗಿದ್ದು ಕೂಡ ಜಾರಕಿಹೊಳಿಯವರನ್ನು ಬಿಜೆಪಿಗೆ ಕರೆತರುವ ಸಲುವಾಗಿಯೇ ಎಂಬ ಊಹಾ ಪೋಹಾಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ರಮೇಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.

ಈಗ ತಿಳಿದು ಬಂದ ಮಾಹಿತಿ ಪ್ರಕಾರ ಯಡಿಯೂರಪ್ಪ ಜೊತೆ ರಮೇಶ್ ಜಾರಕಿಹೊಳಿ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಅಥವಾ ಜಲಸಂಪನ್ಮೂಲ ಖಾತೆಯನ್ನು ನೀಡುವ ಭರವಸೆ ನೀಡಿದ್ದಾರೆ. ಅಂತಿಮ ಸುತ್ತಿನ ಮಾತುಕತೆ ಬಾಕಿ ಉಳಿದಿದೆಯಂತೆ. ಇದರ ನಡುವೆ ರಾಮುಲು ಕೂಡ ರಮೇಶ್ ಜಾರಕಿಹೊಳಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜಾರಕಿಹೊಳಿ ಸಮ್ಮಿಶ್ರ ಸರ್ಕಾರಕ್ಕೆ ತಿರುಗೇಟು ನೀಡಲು ಸಜ್ಜಾಗಿದ್ದು, ತಮ್ಮ ಜೊತೆ 8 ಜನ ಶಾಸಕರನ್ನು ಕೂಡ ಬಿಜೆಪಿಗೆ ಕರೆದೊಯ್ಯುವ ಪ್ರಯತ್ನ ನಡೆಸಿದ್ದಾರಂತೆ. ಈ ಎಲ್ಲಾ ಬೆಳವಣಿಗೆ ಗಳಿಗೆ ಅಂತಿಮ ಸ್ವರೂಪ ಗಣೇಶ ಹಬ್ಬದ ನಂತರ ತಿಳಿಯಲಿದೆ ಎಂದು ಉನ್ನತ ಮೂಲಗಳ ಮಾಹಿತಿ.

ಜಾರಕಿಹೊಳಿ ಮತ್ತು ಪರಮೇಶ್ವರ್ ಭೇಟಿ

ಜಾರಕಿಹೊಳಿ ಸಹೋದರರು ಸರ್ಕಾರದ ವಿರುದ್ಧ ಬಂಡಾಯ ಏಳುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿರುವ ನಡುವೆಯೇ ಸಚಿವ ರಮೇಶ ಜಾರಕಿಹೊಳಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ. ಸದಾಶಿವ ನಗರದ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಶಾಸಕ ಬಿ.ಸಿ ಪಾಟೀಲ್ ಸಹ ಸಚಿವ ರಮೇಶ ಜಾರಕಿಹೊಳಿ ಜೊತೆಗಿದ್ದರು. ಬಿ.ಸಿ ಪಾಟೀಲ್‌ ಬಿಜೆಪಿಗೆ ಹೋಗ್ತಾರೆ ಎಂಬ ವದಂತಿ ಬೆನ್ನಲ್ಲೇ ಡಿಸಿಎಂ ಅವರನ್ನು ಭೇಟಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ವರದಿ : ಪ್ರದೀಪ ನಾಗನೂರ

Please follow and like us:
0
http://bp9news.com/wp-content/uploads/2018/09/chickBig_vb_83.gifhttp://bp9news.com/wp-content/uploads/2018/09/chickBig_vb_83-150x150.gifBP9 Bureauಪ್ರಮುಖಬೆಳಗಾವಿರಾಜಕೀಯಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗಿನ ಜಾರಕಿಹೊಳಿ ಸಹೋದರರ ಕಿತ್ತಾಟ,ಪಕ್ಷದೊಂದಿಗಿನ ಮುನಿಸು ತಣ್ಣಗಾಗುವಂತೆ ಕಾಣುತ್ತಿಲ್ಲ. ಬೆಳಗಾವಿ ರಾಜಕೀಯ ಪ್ರಸ್ತುತ ಸಮ್ಮಿಶ್ರ ಸರ್ಕಾರವನ್ನ ಅಲ್ಲಾಡಿಸುವಂತೆ ಕಾಣುತ್ತಿದೆ. ಸಚಿವ ಜಾರಕಿಹೊಳಿ ಈಗ ಪಕ್ಷವನ್ನೇ ತೊರೆಯಲು ಮುಂದಾಗಿದ್ದಾರಂತೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ಮೂಲಗಳ ಮಾಹಿತಿ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal