ಬೆಳಗಾವಿ : ಕಾಂಗ್ರೆಸ್​​​​​ನಲ್ಲಿ ಸಚಿವ ಸ್ಥಾನದ ಕ್ಯಾತೆ ಇನ್ನು ಮುಗಿದಿಲ್ಲ. ಅದರಲ್ಲೂ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎನ್ನುತ್ತಿದ್ದು, ಕಾತೆ ವಂಚಿತ ಶಾಸಕರು ಮತ್ತಷ್ಟು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯದಲ್ಲಿ ಕಾಂಗ್ರೆಸ್​​​ ಅತೃಪ್ತ ಶಾಸಕರಲ್ಲಿ ಒಬ್ಬರಾದ ಸತೀಶ ಜಾರಕಿಹೊಳಿ ಕುಮಾರಸ್ವಾಮಿ ಭೇಟಿಯಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಮಧುರೈಯಿಂದ ಬೆಂಗಳೂರಿಗೆ ವಾಪಸಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ಜೆಪಿ ನಗರದಲ್ಲಿರುವ ಸಿಎಂ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರಂತೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡವೆಂದು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಿದ್ದೇನೆ.

ಹಾಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಬೇಡವೆಂದು ಸ್ಪಷ್ಟಪಡಿಸಿದ್ದೇನೆ. ಈಗಾಗಲೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ ಸತೀಶ ಕ್ಷೇತ್ರದ ಅಭಿವೃದ್ಧಿ ಹಾಗೂ ರಾಜಕೀಯ ಕಾರಣದಿಂದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು, ತಮಗೆ ಸಚಿವ ಸ್ಥಾನ ಸಿಗದ ಕುರಿತು ಚರ್ಚೆ ನಡೆಸಿಲ್ಲ. ಆದರೆ, ಬೆಳಗಾವಿ ಜಿಲ್ಲೆಗೆ ಬೇರೆ ಆಯ್ಕೆಗಳಿಲ್ಲ. ಎರಡು ವರ್ಷದ ನಂತರ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೆ 2ನೇ ಹಂತದಲ್ಲಿ ಸಚಿವ ಸ್ಥಾನಕ್ಕೆ ಅವಕಾಶವಿಲ್ಲ. ಈಗ ಸಂಪುಟ ಸೇರ್ಪಡೆ ಪ್ರಯತ್ನ ಮಾಡುತ್ತಿಲ್ಲ. ಬಂಡಾಯವೂ ಇಲ್ಲ. ಆದರೆ ನಮ್ಮ ಪರವಾಗಿರುವ ಶಾಸಕರ ಹಿತರಕ್ಷಣೆಗಾಗಿ ಹೋರಾಟ ಮುಂದುವರೆಸಲಿದ್ದೇನೆ.  ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಬೆಳಗಾವಿ ನಗರಾಭಿವೃದ್ಧಿಗೆ ಅನುದಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ಜಾರಕಿಹೊಳಿ ತಿಳಿಸಿದರು. ಸಚಿವೆ ಜಯಮಾಲ ಅವರನ್ನ ಸಭಾ ನಾಯಕಿಯಾಗಿ ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ವಿರೋಧ ಇರುವುದು ನಿಜ. ಈ ಬಗ್ಗೆ ಉಂಟಾಗಿರುವ ಅಸಮಾಧಾನವನ್ನು ಸರಿಪಡಿಸಲು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-16-at-4.21.27-PM.jpeghttp://bp9news.com/wp-content/uploads/2018/06/WhatsApp-Image-2018-06-16-at-4.21.27-PM-150x150.jpegBP9 Bureauಪ್ರಮುಖಬೆಳಗಾವಿರಾಜಕೀಯಬೆಳಗಾವಿ : ಕಾಂಗ್ರೆಸ್​​​​​ನಲ್ಲಿ ಸಚಿವ ಸ್ಥಾನದ ಕ್ಯಾತೆ ಇನ್ನು ಮುಗಿದಿಲ್ಲ. ಅದರಲ್ಲೂ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎನ್ನುತ್ತಿದ್ದು, ಕಾತೆ ವಂಚಿತ ಶಾಸಕರು ಮತ್ತಷ್ಟು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯದಲ್ಲಿ ಕಾಂಗ್ರೆಸ್​​​ ಅತೃಪ್ತ ಶಾಸಕರಲ್ಲಿ ಒಬ್ಬರಾದ ಸತೀಶ ಜಾರಕಿಹೊಳಿ ಕುಮಾರಸ್ವಾಮಿ ಭೇಟಿಯಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಮಧುರೈಯಿಂದ ಬೆಂಗಳೂರಿಗೆ ವಾಪಸಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ಜೆಪಿ ನಗರದಲ್ಲಿರುವ ಸಿಎಂ ನಿವಾಸದಲ್ಲಿ ಭೇಟಿ ಮಾಡಿ...Kannada News Portal