ಗೋಕಾಕ: ಚುನಾವಣೆಗೂ ಮೊದಲು ತಮ್ಮನಾಯಕ ಗೆಲ್ಲಲಿ ಎಂದು ಬಾಲಚಂದ್ರ ಜಾರಕಿಹೊಳಿ ಅಭಿಮಾನಿಗಳು ದೇವರಲ್ಲಿ ಹರಕೆಯನ್ನ ಹೊತ್ತಿದ್ದರು. ಈಗ ಬಾಲಚಂದ್ರ ಜಾರಕಿಹೊಳಿ ಅಭೂತಪೂರ್ವ ಗೆಲುವನ್ನ ಸಾಧಿಸಿದ್ದು, ದೇವರಲ್ಲಿ ಹರಕೆ ಹೊತ್ತಿದ್ದ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಇಂದು ಗೋಕಾಕದ ಲಕ್ಷ್ಮೀದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಒಪ್ಪಿಸಿದರು. ಲಕ್ಷ್ಮಿ ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರದ ಹರಕೆಯನ್ನು ಸಲ್ಲಿಸಿದ ನಂತರ ತಾಯಿಗೆ ವಿಶೇಷ ಪೂಜೆಯನ್ನ ಅಭಿಮಾನಿಗಳು ನೆರವೇರಿಸಿದರು.

ಶಾಸಕರ ಕಟ್ಟಾ ಅಭಿಮಾನಿಗಳಾದ ಮೂಡಲಗಿಯ ಮಹಾದೇವ ಗುಡದಾರ, ಕಲ್ಲೋಳಿಯ ಬಾಳಪ್ಪ ಪಾಲ್ಕಿ, ಜೋಕಾನಟ್ಟಿ ಗ್ರಾಮದ ಮಹಾದೇವ ಸಿಂಗಾಡಿ, ದತ್ತು ಶಿಂಧೆ, ನಾಗಪ್ಪ ಮುಗಳೇರ, ಹುಣಶ್ಯಾಳ ಪಿಜಿ ಗ್ರಾಮದ ಪ್ರಕಾಶ ತಳವಾರ, ಅವರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಒಪ್ಪಿಸಿದರು. ಹರಕೆ ಒಪ್ಪಿಸಿದ ನಂತರ ತಮ್ಮ ನಾಯಕನ ಅಭೂತಪೂರ್ವ ಗೆಲುವಿಗೆ ಸಂತಸ ವ್ಯಕ್ತಪಡಿಸಿ, ಸಂಭ್ರಮಾಚರಿಸಿದರು.

Please follow and like us:
0
http://bp9news.com/wp-content/uploads/2018/05/17-GKK-2.jpghttp://bp9news.com/wp-content/uploads/2018/05/17-GKK-2-150x150.jpgBP9 Bureauಬೆಳಗಾವಿರಾಜಕೀಯಗೋಕಾಕ: ಚುನಾವಣೆಗೂ ಮೊದಲು ತಮ್ಮನಾಯಕ ಗೆಲ್ಲಲಿ ಎಂದು ಬಾಲಚಂದ್ರ ಜಾರಕಿಹೊಳಿ ಅಭಿಮಾನಿಗಳು ದೇವರಲ್ಲಿ ಹರಕೆಯನ್ನ ಹೊತ್ತಿದ್ದರು. ಈಗ ಬಾಲಚಂದ್ರ ಜಾರಕಿಹೊಳಿ ಅಭೂತಪೂರ್ವ ಗೆಲುವನ್ನ ಸಾಧಿಸಿದ್ದು, ದೇವರಲ್ಲಿ ಹರಕೆ ಹೊತ್ತಿದ್ದ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಇಂದು ಗೋಕಾಕದ ಲಕ್ಷ್ಮೀದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಒಪ್ಪಿಸಿದರು. ಲಕ್ಷ್ಮಿ ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರದ ಹರಕೆಯನ್ನು ಸಲ್ಲಿಸಿದ ನಂತರ ತಾಯಿಗೆ ವಿಶೇಷ ಪೂಜೆಯನ್ನ ಅಭಿಮಾನಿಗಳು ನೆರವೇರಿಸಿದರು. ಶಾಸಕರ ಕಟ್ಟಾ ಅಭಿಮಾನಿಗಳಾದ ಮೂಡಲಗಿಯ ಮಹಾದೇವ ಗುಡದಾರ, ಕಲ್ಲೋಳಿಯ ಬಾಳಪ್ಪ ಪಾಲ್ಕಿ, ಜೋಕಾನಟ್ಟಿ...Kannada News Portal